ರಾಂಚಿ: ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ಸ್ಪೇನ್ನಿಂದ ಬಂದಿದ್ದ ಪ್ರವಾಸಿ ಮಹಿಳೆಯೊಬ್ಬಳ ಮೇಲೆ ಏಳು ಜನರು ಸಾಮೂಹಿಕ ಅತ್ಯಾಚಾರ (Physical Abuse) ಎಸಗಿದ ಭಯಾನಕ ಘಟನೆ ನಡೆದಿದೆ. ಈ ಘಟನೆ ಮಾರ್ಚ್ನಲ್ಲಿ ನಡೆದಿದೆ. ಮಹಿಳೆ ಹಾಗೂ ಆಕೆಯ ಪತಿ ಆಘಾತಕಾರಿ ಘಟನೆಗ ಮತ್ತು ನಂತರದ ವಿವರಗಳನ್ನು ದಾಖಲಿಸುವ ವೀಡಿಯೊವೊಂದನ್ನು ತಮ್ಮ ದೇಶಕ್ಕೆ ಮರಳಿದ ಬಳಿಕ ಬಿಡುಗಡೆ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿವರ ನೀಡಿದ್ದು, ಭಾರತದಲ್ಲಿ ಆಗಿರುವ ಕಹಿಘಟನೆಯನ್ನು ವಿವರಿಸಿದ್ದಾರೆ.
ವಿಡಿಯೊದ ಆರಂಭದಲ್ಲಿ ದಂಪತಿ “ಈ ಸುದೀರ್ಘ ಅಧ್ಯಾಯದ ನಂತರ ನಾವು ಈ ಅಹಿತಕರ ಹಂತವನ್ನು ದಾಟಿದ್ದೇವೆ. ಮತ್ತೆ ನಮ್ಮ ಪ್ರವಾಸ ಆರಂಭಿಸುತ್ತೇವೆ. ಆದರೆ ನಮಗಿದು ಮರುಹುಟ್ಟು. ನಾವು ಇದುವರೆಗೆ ಪಡೆದ ಈ ವಿರಾಮಕ್ಕೆ ಕಾರಣವಿದೆ ಎಂದು ಹೇಳಿ ಭಾರತದಲ್ಲಿ ಆದ ಘಟನೆಗಳನ್ನು ವಿವರಿಸಿದ್ದಾರೆ. ಅಲ್ಲದೆ, ಇಂದಿನಿಂದ ನಾವು ವಾರಕ್ಕೊಮ್ಮೆ ನಮ್ಮ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಅವರಿಬ್ಬರೂ ಯೂಟ್ಯೂಬರ್ಗಳಾಗಿದ್ದು ಬೈಕ್ ಮೂಲಕ ಹಲವು ದೇಶಗಳನ್ನು ಸುತ್ತುತ್ತಿರುತ್ತಾರೆ.
ಅವರು ತಂಗಿದ್ದ ಕ್ಯಾಂಪ್ನಲ್ಲಿ ನಡೆದ ಘಟನೆಯ ಭೀಕರತೆಯನ್ನು ವಿವರಿಸಲಾಗಿದೆ. ಸ್ಥಳದಲ್ಲಿದ್ದ ವೇಳೆ ಚಿತ್ರೀಕರಿಸಿದ ವೀಡಿಯೊ ಬಹಿರಂಗಪಡಿಸಿದ್ದಾರೆ. ದಂಪತಿ ಹಗಲು ಹೊತ್ತಿನಲ್ಲಿ ತಾವು ಭೇಟಿಯಾದ ವ್ಯಕ್ತಿಗಳೊಂದಿಗಿನ ನಡೆಸಿದ ಸಂಭಾಷಣೆಯನ್ನೂ ಬಹಿರಂಗ ಮಾಡಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯನ್ನು ಅತ್ಯಾಚಾರ ಮಾಡಿದವರಾಗಿದ್ದಾರೆ.
ದಂಪತಿ ಅತ್ಯಾಚಾರ ಮಾಡಿದವರಲ್ಲಿ ಒಬ್ಬನ ಗುರುತನ್ನು ಬಹಿರಂಗಪಡಿಸಿದ್ದಾರೆ. ಮಹಿಳೆ ಕಡಲೆಕಾಯಿ ತಿನ್ನುತ್ತಿದ್ದಾಗ ಆ ವ್ಯಕ್ತಿ ಮಾತನಾಡಿಸಿದ್ದ. ಅಲ್ಲದೆ ಅವರ ಜತೆ ಅನುಚಿತವಾಗಿ ವರ್ತಿಸಿದ್ದ. ಬಳಿಕ ದಂಪತಿ ಆ ಪ್ರದೇಶವನ್ನು ತೊರೆದು ಕೆಲವು ಗಂಟೆಗಳ ನಂತರ ತಮ್ಮ ಕ್ಯಾಂಪ್ಗೆ ಮರಳಿದ್ದರು. ಅವರು ತಂಗಿದ್ದ ಜಾಗ ನಿರ್ಜನವಾಗಿತ್ತು. ಆ ಬಳಿಕ ಅವರು ‘ತಮ್ಮ ಜೀವನದ ಭಯಾನಕ 3 ಗಂಟೆಗಳನ್ನು’ ನೆನಪಿಸಿಕೊಂಡಿದ್ದಾರೆ. “ರಾತ್ರಿ 8 ಗಂಟೆಗೆ ಪ್ರಾರಂಭವಾದ ತೊಂದರೆ ರಾತ್ರಿ 11 ಗಂಟೆಗೆ ಕೊನೆಗೊಂಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Moral policing : ನೈತಿಕ ಪೊಲೀಸ್ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ
“ನಾನು ಏನು ಮಾಡಬೇಕೆಂದು ಆ ವೇಳೆ ನನಗೆ ತಿಳಿಯಲಿಲ್ಲ. ಪತ್ನಿ ಪೊದೆಯ ಮಧ್ಯೆ ಬಿದ್ದಿದ್ದಳು. ನಾನು ಎದ್ದು ಅವಳ ಬಳಿ ಓಡಿದೆ ಎಂದು ಪತಿ ವಿಡಿಯೊದಲ್ಲಿ ಹೇಳಿದ್ದಾರೆ. ನಂತರ ಇಬ್ಬರೂ ಆಸ್ಪತ್ರೆಗೆ ತೆರಳಿದೆವು ಏಳು ಜನರು ಅವಳ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದ್ದರು. ಅವರು ಅವಳನ್ನು ಹೊಡೆದಿದ್ದರು.. ಅವರು ನನಗೂ ಹೆಲ್ಮೆಟ್ನಿಂದ ಹಲವು ಬಾರಿ ಹೊಡಿದಿದ್ದಾರೆ. ಕಲ್ಲುಗಳಿಂದ ಹಲ್ಲೆ ನಡೆಸಿದರು” ಎಂದು ಸಂತ್ರಸ್ತೆಯ ಪತಿ ಹೇಳಿದ್ದಾರೆ.
ನಂತರ ಅವರು ಪೊಲೀಸ್ ರಕ್ಷಣೆ ಪಡೆದು ಮೂರು ದಿನಗಳ ಕಾಲ ಇದ್ದರು. ನಾವು ಮುಂದುವರಿಯಲಿದ್ದೇವೆ, ವಿಧಿ ನಮಗೆ ಎರಡನೇ ಅವಕಾಶವನ್ನು ನೀಡಿದೆ. ನಾವು ಸಾವನ್ನು ಹತ್ತಿರದಿಂದ ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ಇದಲ್ಲದೆ, ಸಂತ್ರಸ್ತೆಯ ಪತಿಗೆ ಪೊಲೀಸರು 10 ಲಕ್ಷ ರೂ.ಗಳ ಪರಿಹಾರವನ್ನು ಸಹ ನೀಡಿದ್ದಾರೆ.