ನವ ದೆಹಲಿ: ರಾಜಸ್ಥಾನದ ಸಿಕಾರ್ ಎಂಬಲ್ಲಿನ ಖತುಶ್ಯಾಮ್ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಹಲವಾರು ಮಂದಿಗೆ ಗಾಯಗಳಾಗಿವೆ.
ಸೋಮವಾರ ಮುಂಜಾನೆಯ ಪೂಜೆಯ ವೇಳೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮಹಾದ್ವಾರದ ಬಳಿ ನೆರೆದಿದ್ದ ಭಕ್ತಾದಿಗಳಲ್ಲಿ ನೂಕುನುಗ್ಗಲು ಉಂಟಾಯಿತು. ಮೂವರು ಮಹಿಳೆಯರು ಕೆಳಗೆ ಬಿದ್ದು ಕಾಲ್ತುಳಿತಕ್ಕೆ ಸಿಕ್ಕಿ ಮೃತಪಟ್ಟರು. ಇನ್ನಷ್ಟು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜೈಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾಲ್ತುಳಿತಕ್ಕೆ ತಕ್ಷಣದ ಕಾರಣ ತಿಳಿದುಬಂದಿಲ್ಲ.
ಖತುಶ್ಯಾಮ್‌ಜಿ ದೇವಾಲಯವು ನಗರದ ಮಧ್ಯಭಾಗದಲ್ಲಿದೆ. ಈ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆಯಿದ್ದು, ಮಹಾಭಾರತದ ವೀರ, ಭೀಮನ ಮಗ ಬರ್ಬರೀಕನನ್ನು ಖತುಶ್ಯಾಮ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ವರದಕ್ಷಿಣೆಗೆ, ಗಂಡು ಮಗು ಹೆರಲು ಚಿತ್ರಹಿಂಸೆ: ಅಮೆರಿಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮನದೀಪ್ ಕೌರ್ ಹಾರರ್