Site icon Vistara News

Narendra Modi: ಇಸ್ರೇಲ್‌ ಜತೆ ನಾವಿದ್ದೇವೆ; ಗೆಳೆಯ ಬೆಂಜಮಿನ್‌ ನೆತನ್ಯಾಹುಗೆ ಮೋದಿ ಸಾಂತ್ವನ

ಭಾರತ

UNHRC adopts resolution condemning Israel’s war crimes in Gaza; India, 12 other countries abstain

ನವದೆಹಲಿ: ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನಲ್ಲಿರುವ ಗಾಜಾಪಟ್ಟಿಯ ಹಮಾಸ್‌ ಉಗ್ರರು (Hamas Terrorists) ಮುಗಿಬಿದ್ದಿದ್ದಾರೆ. ಸುಮಾರು 5 ಸಾವಿರ ರಾಕೆಟ್‌ಗಳಿಂದ ಇಸ್ರೇಲ್‌ ಮೇಲೆ ದಾಳಿ (Israel Palestine War) ನಡೆಸಲಾಗಿದೆ. ಹಮಾಸ್‌ ಉಗ್ರರು ಇಸ್ರೇಲ್‌ನ ಬೀದಿ ಬೀದಿಗಳಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನ 40 ಜನ ಮೃತಪಟ್ಟಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ, ಇಸ್ರೇಲ್‌ ಕೂಡ ಹಮಾಸ್‌ ಉಗ್ರರ ವಿರುದ್ಧ ಯುದ್ಧ ಸಾರಿದೆ. ಇದರ ಬೆನ್ನಲ್ಲೇ, “ಇಸ್ರೇಲ್‌ ಜತೆ ನಾವಿದ್ದೇವೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಾಂತ್ವನದ ಮಾತುಗಳನ್ನಾಡಿದ್ದಾರೆ.

“ಇಸ್ರೇಲ್‌ ಮೇಲೆ ಉಗ್ರರು ದಾಳಿ ನಡೆಸಿದ ವಿಷಯ ತಿಳಿದು ದಿಗ್ಭ್ರಾಂತಿಯಾಯಿತು. ದಾಳಿಯಲ್ಲಿ ಮೃತಪಟ್ಟ ಮುಗ್ಧ ಜನರ ಕುಟುಂಬಸ್ಥರು, ಗಾಯಗೊಂಡ ಸಂತ್ರಸ್ತರ ದುಃಖ, ಸಮಸ್ಯೆಯಲ್ಲಿ ನಾವೂ ಪಾಲುದಾರರಾಗಿದ್ದೇವೆ. ಇಂತಹ ಸಂಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ ಜತೆ ಒಗ್ಗಟ್ಟಾಗಿ ಇದ್ದೇವೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪೋಸ್ಟ್‌ ಮಾಡಿದ್ದಾರೆ. ಭಾರತ ಹಾಗೂ ಇಸ್ರೇಲ್‌ ಸಂಬಂಧ ಉತ್ತಮವಾಗಿದೆ. ಅದರಲ್ಲೂ, ನರೇಂದ್ರ ಮೋದಿ ಹಾಗೂ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಉತ್ತಮ ಸ್ನೇಹಿತರಾಗಿದ್ದಾರೆ. ಹಾಗಾಗಿ, ಉಗ್ರರ ದಾಳಿ ಸಂದರ್ಭದಲ್ಲಿ ಮೋದಿ ಸಾಂತ್ವನದ ಮಾತುಗಳನ್ನಾಡಿದ್ದಾರೆ.

ಯುದ್ಧ ಘೋಷಿಸಿದ ನೆತನ್ಯಾಹು

ಉಗ್ರ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಯುದ್ಧ ಘೋಷಣೆ ಮಾಡಿದೆ. ಗಾಜಾಪಟ್ಟಿಯಲ್ಲಿರುವ ಹಮಾಸ್‌ ಉಗ್ರರ ಕಟ್ಟಡಗಳ ಮೇಲೆ ಇಸ್ರೇಲ್‌ನ ರಾಕೆಟ್‌ಗಳು ದಾಳಿ ನಡೆಸಿವೆ. ಸುಮಾರು 12ಕ್ಕೂ ಅಧಿಕ ರಾಕೆಟ್‌ಗಳ ಮೂಲಕ ಹಮಾಸ್‌ ಉಗ್ರರಿಗೆ ಇಸ್ರೇಲ್‌ ತಕ್ಕ ಪಾಠ ಕಲಿಸಿದೆ. ಹಮಾಸ್‌ ಉಗ್ರರ ಕಟ್ಟಡಗಳ ಮೇಲೆ ರಾಕೆಟ್‌ಗಳು ದಾಳಿ ನಡೆಸುವ, ಅವುಗಳನ್ನು ಉಡಾಯಿಸುವ ವಿಡಿಯೊಗಳು ಲಭ್ಯವಾಗಿವೆ. ಅಷ್ಟೇ ಅಲ್ಲ, ಇಸ್ರೇಲ್‌ ಹೇಗೆ ಭೀಕರವಾಗಿ ತಿರುಗೇಟು ನೀಡುತ್ತಿದೆ ಎಂಬುದಕ್ಕೆ ಈ ದೃಶ್ಯಗಳು ಸಾಕ್ಷಿಯಾಗಿವೆ. ಹಮಾಸ್‌ ಉಗ್ರರ ಮೇಲೆ ಇಸ್ರೇಲ್‌ ಸಾರಿರುವ ಸಮರಕ್ಕೆ ಆಪರೇಷನ್‌ ಐರನ್‌ ಸ್ವೊರ್ಡ್ಸ್‌ ಎಂದು ಹೆಸರಿಟ್ಟಿದೆ.

ಹಮಾಸ್‌ ಉಗ್ರರ ದಾಳಿಯ ಭೀಕರತೆ

ಇದನ್ನೂ ಓದಿ: Israel Palestine War: ತಂಟೆಗೆ ಬಂದವರಿಗೆ ತಟ್ಟದೆ ಬಿಡಲ್ಲ ಇಸ್ರೇಲ್‌; ಗಾಜಾ ಪಟ್ಟಿ ಮೇಲೆ ವಾಯುದಾಳಿ!

ವೈರಿಗಳಿಗೆ ತಕ್ಕ ಶಾಸ್ತಿ ಎಂದ ಇಸ್ರೇಲ್‌ ಪ್ರಧಾನಿ

ಪ್ಯಾಲೆಸ್ತೀನ್‌ ಮೇಲೆ ದಾಳಿ ನಡೆಸುತ್ತಿರುವ ಹಮಾಸ್‌ ಉಗ್ರರಿಗೆ ಬೆಂಜಮಿನ್‌ ನೆತನ್ಯಾಹು ಕಠಿಣ ಎಚ್ಚರಿಕೆ ನೀಡಿದ್ದಾರೆ. “ಪ್ರಿಯ ಇಸ್ರೇಲ್‌ ನಾಗರಿಕರೇ, ನಾವು ಯುದ್ಧದ ಸನ್ನಿವೇಶದಲ್ಲಿದ್ದೇವೆ. ಇದೊಂದು ಕಾರ್ಯಾಚರಣೆ ಅಲ್ಲ, ದಾಳಿ ಅಲ್ಲ. ಉಗ್ರರ ಮೇಲೆ ನಾವು ಯುದ್ಧ ಸಾರಿದ್ದೇವೆ. ನಮ್ಮ ಮೇಲೆ ದಾಳಿ ನಡೆಸಿರುವ ಹಮಾಸ್‌ ಉಗ್ರರು ಸರಿಯಾದ ಪಾಠ ಕಲಿಯಲಿದ್ದಾರೆ. ವೈರಿಗಳು ತಮ್ಮ ಜೀವನದಲ್ಲೇ ಕಂಡು ಕೇಳರಿಯದ ಪರಿಣಾಮ ಎದುರಿಸಲಿದ್ದಾರೆ. ನಾವು ಯುದ್ಧ ಆರಂಭಿಸಿದ್ದೇವೆ ಹಾಗೂ ಇದರಲ್ಲಿ ನಾವೇ ಗೆಲ್ಲುತ್ತೇವೆ” ಎಂದಿದ್ದಾರೆ.

Exit mobile version