ನವದೆಹಲಿ: ಬುಧವಾರ ಸೆನ್ಸೆಕ್ಸ್ (Sensex) 1628 ಅಂಕ ಕುಸಿಯುವ ಮೂಲಕ ಭಾರತೀಯ ಷೇರು ಪೇಟೆ (Indian Stock Market) ಬುಧವಾರ ತತ್ತರಿಸಿತು. ಪರಿಣಾಮ, ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಮಾರುಕಟ್ಟೆ ಮೌಲ್ಯದಲ್ಲಿ 93,000 ಕೋಟಿ ರೂ. ನಷ್ಟವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಸೇ.9ರಷ್ಟು ಕುಸಿತವನ್ನು ದಾಖಲಿಸಿದವು. ಪ್ರಸಕ್ತ ಹಣಕಾಸು ಸಾಲಿನ ಮೂರನೇ ತ್ರೈಮಾಸಿಕ ರಿಸಲ್ಟ್‌ಗಳು (Q3 Results) ಹೂಡಿಕೆದಾರರ ಎಣಿಕೆಯಂತೆ ಬಾರದ್ದರಿಂದ ಷೇರು ಪೇಟೆ ಮೇಲೆ ಪರಿಣಾಮವಾಯಿತು.
ಈ ಕುಸಿತವು, ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆ ಬಂಡವಾಳೀಕರಣದಿಂದ ಪ್ರತಿನಿಧಿಸುವ ಹೂಡಿಕೆದಾರರ ಸಂಪತ್ತಿನಲ್ಲಿ 92,984 ಕೋಟಿ ರೂ. ನಷ್ಟಕ್ಕೆ ಕಾರಣವಾಯತು. ಇದು ಹಣಕಾಸು ಸೇವೆಗಳ ಷೇರುಗಳ ಕುಸಿತಕ್ಕೆ ಪ್ರೇರೇಪಿಸಿತು. ಸೆನ್ಸೆಕ್ಸ್ 2.25% ಕುಸಿಯಿತು, ಆಗಸ್ಟ್ 30, 2022 ರಿಂದ ಈಚೆಗೆ ಇದು ಅತಿ ಹೆಚ್ಚಿನ ಕುಸತವಾಗಿದೆ. ಅದೇ ರೀತಿ, ನಿಫ್ಟಿ 2.15% ನಷ್ಟು ಕುಸಿದಿದೆ; ಇದು 2023 ಜನವರಿ ನಂತರದ ಅತಿದೊಡ್ಡ ಕುಸಿತವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ನಿಫ್ಟಿ 50 ನಲ್ಲಿ ಶೇ. 13.52 ಮೌಲ್ಯವನ್ನು ಹೊಂದಿದ್ದರೆ, ಹಣಕಾಸು ಸೇವೆಗಳ ಷೇರುಗಳು ಸೂಚ್ಯಂಕದ 35.26 ಪ್ರತಿಶತದಷ್ಟಿದೆ.
ನಿಫ್ಟಿ ಬ್ಯಾಂಕ್ 4.46% ನಷ್ಟು ಕುಸಿದಿದ್ದು, ಇದು 2022ರ ಮಾರ್ಚ್ 7ರಿಂದ ಈಚೆಗಿನ ಅತಿದೊಡ್ಡ ಕುಸಿತವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್ ಷೇರುಗಳ ಕೂಡ ಕುಸಿತವನ್ನು ದಾಖಲಿಸಿದವು.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭವು ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅನುಕ್ರಮವಾಗಿ 2.5% ರಷ್ಟು ಏರಿಕೆಯಾಗಿ 16,373 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಷೇರು ಪೇಟೆಗೆ ತಿಳಿಸಲಾಗಿದೆ. ಬ್ಲೂಮ್‌ಬರ್ಗ್ ಸಮೀಕ್ಷೆ ನಡೆಸಿದ ವಿಶ್ಲೇಷಕರು, ಈ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ 15,763 ಕೋಟಿ ನಿವ್ವಳ ಲಾಭವನ್ನು ಅಂದಾಜಿಸಿದ್ದರು.
ಸೆನ್ಸೆಕ್ಸ್ 1628 ಅಂಕ ಕುಸಿತ! ನಿಫ್ಟಿಯದ್ದೂ ಅದೇ ಕತೆ
ಭಾರತೀಯ ಷೇರು ಪೇಟೆ (Indian Stock Market) ಬುಧವಾರ ಭಾರೀ ನಷ್ಟವನ್ನು ದಾಖಲಿಸಿದೆ. ಜಾಗತಿಕ ಬೆಳವಣಿಗಳು ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳ ಪತನದ ಪರಿಣಾಮ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿಗಳೆರಡೂ (Nifty) ಭಾರೀ ಕುಸಿತವನ್ನು ದಾಖಲಿಸಿದವು. ಸೆನ್ಸೆಕ್ಸ್ 1,628 ಕುಸಿತ ಕಂಡು 71,501 ಅಂಕಗಳಲ್ಲಿ ಅಂತ್ಯವಾಯಿತು. ಇದೇ ವೇಳೆ, 50 ನಿಫ್ಟಿ ಕೂಡ 460 ಅಂಕಗಳನ್ನು ಇಳಿಕೆ ಕಂಡು ದಿನದಾಂತ್ಯಕ್ಕೆ 21,572 ಅಂಕ ದಾಖಲಿಸಿತು. ಪರಿಣಾಮ ಹೂಡಿಕೆದಾರರಿಗೆ ಅಂದಾಜು 4 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ(Investors Faces Loss).
ಎರಡೂ ಮಾನದಂಡಗಳು ಸೆನ್ಸೆಕ್ಸ್ ಮಿಡ್‌ಕ್ಯಾಪ್ ಸೂಚ್ಯಂಕದಲ್ಲಿ ಶೇಕಡಾ 1 ರಷ್ಟು ಕಡಿತಕ್ಕೆ ವಿರುದ್ಧವಾಗಿ ಪ್ರತಿ ಶೇಕಡಾ 2 ಕ್ಕಿಂತ ಕಡಿಮೆಯಾಗಿದೆ. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕದಲ್ಲಿ ಶೇಕಡಾ 0.9 ರಷ್ಟು ಕುಸಿದಿದೆ. ವಾಲಟಿಲಿಟಿ ಗೇಜ್, ಇಂಡಿಯಾ ವಿಟಿಎಕ್ಸ್ ಶೇ.11 ಹೆಚ್ಚು ಏರಿಕೆ ಕಂಡವು.
ಎಚ್‌ಡಿಎಫ್‌ಸಿ ಬ್ಯಾಂಕ್ ಬುಧವಾರ ಶೇ.9ರಷ್ಟು ಕುಸಿತ ದಾಖಲಿಸಿದ್ದು ಷೇರು ಪೇಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು. ಟಾಟಾ ಸ್ಟೀಲ್, ಕೋಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎಸ್‌ಬಿಐ, ಬಜಾಜ್ ಫೈನಾನ್ಸ್, ಟಾಟಾ ಮೋಟಾರ್ಸ್, ಏಷ್ಯನ್ ಪೇಂಟ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಮಾರುತಿ ಸುಜುಕಿ, ಐಟಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕುಸಿತವನ್ನು ದಾಖಲಿಸಿದವು.
ನಿಫ್ಟಿ ಬ್ಯಾಂಕ್ ವಲಯದಲ್ಲಿ ಹಣಕಾಸು ಸೇವೆಗಳು, ಖಾಸಗಿ ಬ್ಯಾಂಕುಗಳು ತಲಾ ಶೇ.4ರಷ್ಟು ಕುಸಿತವನ್ನು ಕಂಡವು. ನಿಫ್ಟಿ ಮೆಟಲ್ ಶೇ.3ರಷ್ಟು ಕುಸಿತ ಕಂಡರೆ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಶೇ.1.7ರಷ್ಟು ಕುಸಿತವನ್ನು ಕಂಡಿತು. ಆದರೆ, ನಿಫ್ಟಿ ಐಟಿ ಸೂಚ್ಯಂಕವು ಶೇ.065 ಏರಿಕೆಯನ್ನು ಕಂಡಿತು.
ಕೆಲವು ವಿಶ್ಲೇಷಕರ ಪ್ರಕಾರ ಮುಂದಿನ ಕೆಲವು ದಿನಗಳ ಕಾಲವು ಷೇರು ಪೇಟೆ ಕುಸಿತದ ಹಾದಿಯನ್ನು ಹಿಡಿಯಲಿದೆ. ಜಾಗತಿಕ ಮತ್ತು ದೇಶಿ ಮಾರುಕಟ್ಟೆಯಲ್ಲಿ ಋಣಾತ್ಮಕ ಬೆಳವಣಿಗೆಗಳು ಪರಿಣಾಮವೇ ಇದಕ್ಕೆ ಕಾರಣವಾಗಲಿದೆ. ಅಮೆರಿಕ ಬಾಂಡ್ ಲಾಭದಲ್ಲಿ ಏರಿಕೆಯಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಹಾಗೆಯೇ ಅಮೆರಿಕವು ಬಡ್ಡಿ ದರದಲ್ಲಿ ಕಡಿತವನ್ನು ನಿರೀಕ್ಷಿಸಲಾಗುತ್ತಿದೆ. ಇದು ಜಾಗತಿಕ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿದೆ.
ಈ ಸುದ್ದಿಯನ್ನೂ ಓದಿ: Stock Market: 73 ಸಾವಿರ ಅಂಕ ದಾಟಿದ ಸೆನ್ಸೆಕ್ಸ್; ವಿಪ್ರೋ, ಟಿಸಿಎಸ್ ಷೇರು ಏರಿಕೆ