ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ(Election Results 2024)ದಲ್ಲಿ ಈ ಬಾರಿ ಬಿಜೆಪಿ(BJP) ನೇತೃತ್ವದ ಎನ್‌ಡಿಎ ಸರ್ಕಾರ(NDA Government) ಹಿನ್ನಡೆ ಅನುಭವಿಸುತ್ತಿದ್ದಂತೆ ನಿನ್ನೆ ಶೇರು ಮಾರುಕಟ್ಟೆ(Stock Market) ಡಿಢೀರ್ ಕುಸಿತ ಕಂಡಿತ್ತು. ಆದರೆ ಇಂದು ನರೇಂದ್ರ ಮೋದಿ(PM Narendra Modi) ಮತ್ತೆ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 1.95 ರಷ್ಟು ಏರಿಕೆಯಾಗಿ 73,486.14ಕ್ಕೆ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 1.91 ರಷ್ಟು ಏರಿಕೆಯಾಗಿ 22,303.40 ಮಟ್ಟದಲ್ಲಿದೆ.
ಕಳೆದ ಬಾರಿ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಎನ್‌ಡಿಎ ಒಕ್ಕೂಟ ಕೇವಲ 291 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಅಲ್ಲದೇ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ನಿನ್ನೆ ಫಲಿತಾಂಶ ಹೊರಬೀಳುತ್ತಿದ್ದಂತೆ ಪವರ್ ಫೈನಾನ್ಸ್ ಕಾರ್ಪೊರೇಷನ್ ಷೇರುಗಳು ಭಾರೀ ಕುಸಿತ (Stock Market Crash) ಕಂಡಿವೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಷೇರು ದರಗಳು ಕುಸಿದು ಹೂಡಿಕೆದಾರರಿಗೆ ಸುಮಾರು 40 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಪಕ್ಕಾ ಆಗುತ್ತಿದ್ದಂತೆ ನಿಫ್ಟಿಯಲ್ಲಿ ONGC, M&M, BPCL, HUL, ಟಾಟಾ ಸ್ಟೀಲ್ ಪ್ರಮುಖ ಲಾಭ ಗಳಿಸಿವೆ.
ಹಿಂದೂಸ್ತಾನ್ ಯೂನಿಲಿವರ್, ಎಂ & ಎಂ ಟಾಪ್ ಗೇನರ್ ಆಗಿದ್ದರೆ, ಪವರ್ ಗ್ರಿಡ್, ಆಕ್ಸಿಸ್ ಬ್ಯಾಂಕ್ಯ ಶೇರು ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ಲಾಭ ಗಳಿಸಿವೆ. ಅದೇ ರೀತಿ, ಎನ್‌ಎಸ್‌ಇ, ಟಾಟಾ ಸ್ಟೀಲ್, ಬಿಪಿಸಿಎಲ್ ಟಾಪ್ ಗೇನರ್ ಆಗಿದ್ದರೆ, ಪವರ್ ಗ್ರಿಡ್, ಅಪೊಲೊ ಆಸ್ಪತ್ರೆಗಳು ಟಾಪ್ ಗೇನರ್‌ಗಳಾಗಿವೆ. ನಿಫ್ಟಿ ಸ್ಮಾಲ್‌ಕ್ಯಾಪ್ ಶೇಕಡಾ 0.32 ರಷ್ಟು ಏರಿಕೆಯಾಗಿದ್ದು, ಮಿಡ್‌ಕ್ಯಾಪ್ ಶೇಕಡಾ 0.47 ರಷ್ಟು ಏರಿಕೆಯಾಗಿದೆ. ವಲಯವಾರು, ನಿಫ್ಟಿ ಎಫ್‌ಎಂಸಿಜಿ ಶೇಕಡಾ 2 ಕ್ಕಿಂತ ಹೆಚ್ಚಿನ ಲಾಭದೊಂದಿಗೆ ಮುನ್ನಡೆ ಸಾಧಿಸಿದೆ, ನಂತರ ಆಟೋ (ಶೇ. 1.73 ಏರಿಕೆ). ಮೆಟಲ್ ಮಾತ್ರ 0.36 ರಷ್ಟು ಕುಸಿದಿದೆ.
ನಿನ್ನೆ ಆರ್ ಇ ಸಿ (REC) ಷೇರುಗಳು ಸುಮಾರು ಶೇ. 20ರಷ್ಟು ಕುಸಿತವಾಗಿದ್ದು, ಬಿ ಹೆಚ್ ಇ ಎಲ್ (BHEL) ಶೇ. 19ರಷ್ಟು ಕುಸಿದಿದೆ. ಗೈಲ್ (GAIL) ಶೇ. 18 ಮತ್ತು ಅದಾನಿ (adani) ಪೋರ್ಟ್ಸ್ ಶೇ. 17ರಷ್ಟು ಕುಸಿತವಾಗಿತ್ತು. ಅದಾನಿ ಎಂಟರ್‌ಪ್ರೈಸಸ್, ಹುಡ್ಕೊ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಒಎನ್‌ಜಿಸಿ ಮತ್ತು ಆರ್‌ಐಎಲ್ ಷೇರುಗಳು ಸಹ ಕುಸಿತದ ಹಾದಿಯಲ್ಲಿ ಸಾಗಿತ್ತು.
ಮತ ಎಣಿಕೆಯ ಆರಂಭದಲ್ಲಿ ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ಶೇಕಡಾ 3.03ರಷ್ಟು ಕುಸಿದು 22,557 ಕ್ಕೆ ತಲುಪಿದೆ ಮತ್ತು ಎಸ್ ಆಂಡ್ ಪಿ ಬಿಎಸ್ಇ ಸೆನ್ಸೆಕ್ಸ್ ಶೇಕಡಾ 3ರಷ್ಟು ಕುಸಿದು 74,107ಕ್ಕೆ ಇಳಿದಿತ್ತು.ಷೇರು ಮಾರುಕಟ್ಟೆ ಕುಸಿತವು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಕಂಪೆನಿಗಳ ಮೇಲೆ ಭಾರಿ ನಷ್ಟವನ್ನುಂಟು ಮಾಡಿದ್ದವು. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ 700ಕ್ಕೂ ಹೆಚ್ಚು ಕಂಪೆನಿಗಳು ಪೇಟಿಎಂ ಮತ್ತು ಐನಾಕ್ಸ್ ವಿಂಡ್ ಸೇರಿದಂತೆ ಅತೀ ಕಡಿಮೆ ಲಾಭಗಳಿಸಿತ್ತು.
ನಿನ್ನೆ ಆರಂಭಿಕ ವಹಿವಾಟಿನಲ್ಲಿ ತೀವ್ರ ಕುಸಿತದ ಅನಂತರ ಬೆಂಚ್ಮಾರ್ಕ್ ಸ್ಟಾಕ್ ಮಾರುಕಟ್ಟೆ ಸೂಚ್ಯಂಕಗಳು ಮಧ್ಯಾಹ್ನದ ವೇಳೆಗೆ ಗಣನೀಯವಾಗಿ ಚೇತರಿಸಿಕೊಂಡವು. 30 ಷೇರುಗಳ ಸೆನ್ಸೆಕ್ಸ್ ಮಧ್ಯಾಹ್ನ ಒಂದು ಗಂಟೆಯ ಮೊದಲು 6,000 ಪಾಯಿಂಟ್‌ಗಳ ಕುಸಿತವನ್ನು ಹೊಂದಿದ್ದರೆ, ಬಳಿಕ ಅದು 2 ಗಂಟೆ ಸುಮಾರಿಗೆ 3,372.15 ಪಾಯಿಂಟ್‌ಗಳ ಇಳಿಕೆಯೊಂದಿಗೆ 73,096.63 ಕ್ಕೆ ವಹಿವಾಟು ನಡೆಸಿದ್ದವು. ಮತ್ತೊಂದೆಡೆ, ನಿಫ್ಟಿ 50 1,053.50 ಪಾಯಿಂಟ್‌ಗಳ ಇಳಿಕೆಯೊಂದಿಗೆ 21884.50ಕ್ಕೆ ವಹಿವಾಟು ಮುಗಿಸಿದ್ದವು.