ಲಕ್ನೋ: ರಸ್ತೆಯಲ್ಲಿ ಆದ ಸಣ್ಣ ಜಗಳ ಇಡೀ ಒಂದು ಊರನ್ನೇ ಉದ್ವಿಗ್ನಗೊಳಿಸಿರುವ ಘಟನೆ ಉತ್ತರಪ್ರದೇಶದ(Uttar Pradesh) ಲಕ್ನೋದಲ್ಲಿ ನಡೆದಿದೆ. ಸಣ್ಣದೊಂದು ಜಗಳದ ಕಿಡಿ ಗುಂಪು ಘರ್ಷಣೆ(ಯಾಗಿ ಹೊತ್ತಿಕೊಂಡಿದ್ದು, ಜನ ಕಲ್ಲು ತೂರಾಟ(Stone Pelting) ನಡೆಸಿದ್ದಾರೆ. ಅಲ್ಲದೇ ಇದೇ ವೇಳೆ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಈ ಭೀಕರ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದ್ದು, ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಹಲವರಿಗೆ ಗಂಭೀರ ಗಾಯಗಳಾಗಿವೆ.
ಘಟನೆ ವಿವರ:
ಲಕ್ನೋದ ಈಶ್ವರಿ ಖೇರಾ ಪ್ರದೆಶದಲ್ಲಿ ಈ ಘಟನೆ ನಡೆದಿದ್ದು, ಯುವಕರಿಬ್ಬರು ತಮ್ಮ ಐದು ವರ್ಷದ ಸಹೋದರನನ್ನು ಶಾಲೆಯಿಂದ ವಾಪಾಸ್ ಕರೆದೊಯ್ಯತ್ತಿರುವಾಗ ಅವರ ಸ್ಕೂಟರ್ ಕಾರೊಂದಕ್ಕೆ ಅಚಾನಕ್ಕಾಗಿ ಡಿಕ್ಕಿ ಹೊಡೆದಿತ್ತು. ಅಲ್ಲಿಂದ ಈ ಜಗಳ ಶುರುವಾಗಿತ್ತು. ಕಾರು ಮಾಲೀಕ ಹರ್ಷ್ ಉಪಾಧ್ಯಾಯ ಮತ್ತು ಆತನ ಸ್ನೇಹಿತರು ಸ್ಕೂಟರ್‌ನಲ್ಲಿದ್ದ ಇಬ್ಬರು ಬಾಲಕರನ್ನು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಅವರನ್ನು ಹರ್ಷ್ ಮತ್ತು ಆತನ ಸ್ನೇಹಿತರು ಮನೆವರೆಗೆ ಹಿಂಬಾಲಿಸಿಕೊಂಡು ಬಂದಿದ್ದರು.
थाना पीजीआई क्षेत्रान्तर्गत गाड़ी ओवर टेकिंग को लेकर हुई मारपीट/फायरिंग की घटना में त्वरित कार्यवाही करते हुए 04 व्यक्तियों को गिरफ्तार कर घटना में प्रयुक्त शस्त्र को किया गया बरामद।
— LUCKNOW POLICE (@lkopolice) May 14, 2024
उक्त के सम्बन्ध में @east_dcp द्वारा दी गई बाईट। @Uppolice pic.twitter.com/WyeqBIg7Ts
ಅವರು ತಮ್ಮ ಮನೆ ಬಳಿ ತಲುಪುತ್ತಿದ್ದಂತೆ 40-50 ಜನರಿಗೆಕರೆ ಮಾಡಿ ಕರೆಸಿಕೊಂಡಿದ್ದರು. ಹಿಂಬಾಲಿಸಿಕೊಂಡು ಬಂದಿದ್ದ ಹರ್ಷ್ ಮತ್ತು ಆತನ ಸ್ನೇಹಿತರನ್ನು ಕಂಡ ಕೂಡಲೇ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದೆ. ಅಲ್ಲದೇ ಸಫಾರಿ ಸೂಟ್ ಧರಿಸಿದ್ದ ವ್ಯಕ್ತಿಯೊಬ್ಬ ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಎರಡು ಕಾರುಗಳು ಸಂಪೂರ್ಣವಾಇ ಜಖಂ ಆಗಿದ್ದು, ಅನೇಕರು ಕಲ್ಲೇಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:Prajwal Revanna Case: ಪ್ರಜ್ವಲ್ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್
ಇನ್ನು ಘಟನೆಗೆ ಸಂಬಂಧಿಸಿದಂತೆ ಆಧಿಕೃತವಾಗಿ ಯಾವುದೇ ದೂರು ದಾಖಲಾಗಿಲ್ಲ. ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು. ಇನ್ನು ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿಯನ್ನು ಮೊದಲು ಅರೆಸ್ಟ್ ಮಾಡಲಾಗಿತ್ತು. ಇದೀಗ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ಸುಧಾರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.