ಹೈದರಾಬಾದ್: ಆನ್‌ಲೈನ್ ವಂಚನೆಗಳ (Online Fraud) ಕುರಿತು ಎಷ್ಟು ಜಾಗೃತಿ ಮಾಡಿದರೂ ಜನ ಅದರ ಜಾಲಕ್ಕೆ ಸಿಲುಕುತ್ತಾರೆ. ಹೈದರಾಬಾದ್‌ನಲ್ಲಿ ಯುವತಿಯೊಬ್ಬಳು ಆನ್‌ಲೈನ್ ಮೂಲಕ ಕಿಡ್ನಿ ಮಾರಾಟ ಮಾಡಲು ಯತ್ನಿಸಿ 16 ಲಕ್ಷ ರೂ. ಕಳೆದುಕೊಂಡಿದ್ದಾಳೆ. ವಂಚನೆ ಗೊತ್ತಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಗುಂಟೂರಿನಲ್ಲಿ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿನಿಯು ಮೊದಲು ತಂದೆಯ ಖಾತೆಯಿಂದ 2 ಲಕ್ಷ ರೂ. ಡ್ರಾ ಮಾಡಿದ್ದಾರೆ. ಇದನ್ನು ತಂದೆಗೆ ಮರಳಿಸಬೇಕು ಎಂದು ಆನ್‌ಲೈನ್ ಮೂಲಕ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದಾಳೆ. ಇದೇ ವೇಳೆ ಆನ್‌ಲೈನ್‌ನಲ್ಲಿ ಒಂದಷ್ಟು ಜನ ಯುವತಿಯನ್ನು ಸಂಪರ್ಕಿಸಿದ್ದಾರೆ. ಆನ್‌ಲೈನ್‌ನಲ್ಲಿ ಕಿಡ್ನಿ ಮಾರಿದರೆ 3 ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಇದಕ್ಕೆ ಯುವತಿ ಮರುಳಾಗಿದ್ದಾಳೆ.
ಕಿಡ್ನಿ ಮಾರಾಟಕ್ಕಾಗಿ ನಿಮಗೆ ಮೂರು ಕೋಟಿ ರೂ. ನೀಡುತ್ತೇವೆ. ಆದರೆ, ಅದಕ್ಕೂ ಮೊದಲು ತೆರಿಗೆ ಹಾಗೂ ಪೊಲೀಸ್ ವೇರಿಫಿಕೇಷನ್ ಶುಲ್ಕವಾಗಿ 16 ಲಕ್ಷ ರೂ. ಕೊಡಬೇಕು ಎಂದಿದ್ದಾರೆ. ಇದನ್ನು ನಂಬಿದ ಯುವತಿಯು 16 ಲಕ್ಷ ರೂ. ಟ್ರಾನ್ಸ್‌ಫರ್ ಮಾಡಿದ್ದಾಳೆ. ಇದಾದ ಬಳಿಕ ತಾನು ವಂಚನೆಗೀಡಾಗಿರುವುದು ಗೊತ್ತಾಗಿದೆ. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಇದನ್ನೂ ಓದಿ | Teacher Marries Student | 20 ವರ್ಷದ ವಿದ್ಯಾರ್ಥಿನಿಯನ್ನೇ ಮದುವೆಯಾದ 42ರ ಶಿಕ್ಷಕ, ವಿಡಿಯೊ ವೈರಲ್