Site icon Vistara News

Students Death: ಇಬ್ಬರು ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ನಿಗೂಢ ಸಾವು

Students Death usa

ಹೈದರಾಬಾದ್: ಇಬ್ಬರು ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಕನೆಕ್ಟಿಕಟ್‌ನಲ್ಲಿರುವ ತಮ್ಮ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ (Students Death) ಎಂದು ಕುಟುಂಬದ ಸದಸ್ಯರು ಸೋಮವಾರ ತಿಳಿಸಿದ್ದಾರೆ. ಇವರಿಬ್ಬರೂ ತೆಲಂಗಾಣ ಹಾಗೂ ಆಂಧ್ರಪ್ರದೇಶ ಮೂಲದವರು. ಕಾರಣ ಹಾಗೂ ಸತ್ತ ರೀತಿ ಇನ್ನೂ ನಿಗೂಢವಾಗಿದೆ.

ಮೃತಪಟ್ಟ ವಿದ್ಯಾರ್ಥಿಗಳನ್ನು ತೆಲಂಗಾಣದ ವನಪರ್ತಿಯ ಜಿ.ದಿನೇಶ್ (22) ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂ ನಿವಾಸಿ ನಿಕೇಶ್ (21) ಎಂದು ಗುರುತಿಸಲಾಗಿದೆ. ತೆಲಂಗಾಣ ವಿದ್ಯಾರ್ಥಿಯ ಕುಟುಂಬ ಸದಸ್ಯರಿಗೆ ಅವನ ಸಾವಿಗೆ ಕಾರಣ ಮತ್ತು ಅವನ ರೂಮ್‌ಮೇಟ್‌ನ ಬಗ್ಗೆ ಸುಳಿವು ಇಲ್ಲ. ದಿನೇಶ್‌ ಕಳೆದ ವಾರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು ಎಂದು ಶಾಸಕರಿಗೆ ಮಾಹಿತಿ ನೀಡಲಾಗಿದೆ.

“ಸಮೀಪದ ಕೊಠಡಿಯಲ್ಲಿ ವಾಸಿಸುವ ದಿನೇಶ್ ಸ್ನೇಹಿತರು ಶನಿವಾರ ರಾತ್ರಿ ನಮಗೆ ಕರೆ ಮಾಡಿ ಅವರ ಸಾವಿನ ಬಗ್ಗೆ ಮತ್ತು ಅವರ ರೂಮ್‌ಮೇಟ್‌ನ ಬಗ್ಗೆ ನಮಗೆ ತಿಳಿಸಿದರು. ಅವರು ಹೇಗೆ ಸತ್ತರು ಎಂಬುದರ ಕುರಿತು ನಮಗೆ ಯಾವುದೇ ಸುಳಿವು ಇಲ್ಲ” ಎಂದು ದಿನೇಶ್ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಕುಟುಂಬದ ಸದಸ್ಯರ ಪ್ರಕಾರ, ದಿನೇಶ್ ಡಿಸೆಂಬರ್ 28, 2023ರಂದು ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ನ ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ಗೆ ಹೋಗಿದ್ದರು. ನಿಕೇಶ್ ಕೆಲವು ದಿನಗಳ ನಂತರ ತಲುಪಿದ್ದರು. ಅವರು ಕೆಲವು ಸಾಮಾನ್ಯ ಸ್ನೇಹಿತರ ಪರಸ್ಪರ ಸ್ನೇಹಿತರಾಗಿದ್ದರು. USಗೆ ಹೋದ ನಂತರ ರೂಮ್‌ಮೇಟ್‌ಗಳಾಗಿದ್ದರು.

ದಿನೇಶ್ ಅವರ ಮೃತದೇಹವನ್ನು ಮರಳಿ ತರಲು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಸಹಾಯವನ್ನು ಕೋರಿದ್ದೇವೆ ಎಂದು ದಿನೇಶ್ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ವನಪರ್ತಿ ಶಾಸಕಿ ಮೇಘಾ ರೆಡ್ಡಿ ಕೂಡ ದಿನೇಶ್ ಮೃತದೇಹವನ್ನು ತರಲು ಸಹಾಯ ಮಾಡಿದ್ದಾರೆ.

ನಿಕೇಶ್ ಅವರ ಕುಟುಂಬ ಸದಸ್ಯರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ದಿನೇಶ್ ಅವರ ಕುಟುಂಬದ ಸದಸ್ಯ ಹೇಳಿದರು. ಅದೇ ರೀತಿ ಶ್ರೀಕಾಕುಳಂ ಜಿಲ್ಲಾಡಳಿತಕ್ಕೂ ನಿಕೇಶ್ ಬಗ್ಗೆ ಇನ್ನೂ ಮಾಹಿತಿ ಇಲ್ಲ. ನಿಕೇಶ್ ಅಥವಾ ಅವರ ಕುಟುಂಬ ಸದಸ್ಯರ ಬಗ್ಗೆ ಜಿಲ್ಲಾಧಿಕಾರಿಗಳು ಸಹ ಮಾಹಿತಿ ಹೊಂದಿದಿಲ್ಲ ಎಂದು ಶ್ರೀಕಾಕುಳಂ ಪೊಲೀಸ್ ವಿಶೇಷ ಬ್ರಾಂಚ್ ಡಿಎಸ್ಪಿ ಕೆ. ಬಾಲರಾಜು ತಿಳಿಸಿದ್ದಾರೆ.

ಇದನ್ನೂ ಓದಿ: Ayodhya Ram Mandir: ಅಮೆರಿಕದಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಯ 40 ಬಿಲ್‌ಬೋರ್ಡ್

Exit mobile version