Site icon Vistara News

Success Story: ಛಲವೇ ಬಲ; ಪಿಯುಸಿ ಫೇಲಾಗಿ, ಟೆಂಪೋ ಓಡಿಸಿದ ಯುವಕನೀಗ ಐಪಿಎಸ್‌ ಆಫೀಸರ್‌

IPS Manoj Kumar Sharma Success Story

Success Story: Failed In PUC, Ran A Tempo; This Youth Is Now An IPS Officer

ಭೋಪಾಲ್:‌ ಪ್ರತಿಯೊಬ್ಬರ ಜೀವನದಲ್ಲೂ ಹತ್ತಾರು ತಿರುವುಗಳು, ಕಷ್ಟ ಕೋಟಲೆಗಳು, ನೋವು, ದುಃಖ, ಹಿನ್ನಡೆ ಇದ್ದೇ ಇರುತ್ತವೆ. ಆದರೆ, ಇವೆಲ್ಲವನ್ನೂ ಮೆಟ್ಟಿ, ಪಣ ತೊಟ್ಟು ಶ್ರಮ ವಹಿಸಿದರೆ ಶರ್ಮಾ ಬದುಕು ಕೂಡ ಬಂಗಾರವಾಗುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ಐಪಿಎಸ್‌ ಅಧಿಕಾರಿ ಮನೋಜ್‌ ಕುಮಾರ್‌ ಶರ್ಮಾ (Manoj Kumar Sharma) ಅವರೇ ನಿದರ್ಶನವಾಗಿದ್ದಾರೆ. ಪಿಯುಸಿ ಫೇಲ್‌ ಆಗಿ, ಟೆಂಪೋ ಓಡಿಸಿ, ಕೊನೆಗೆ ಹಠದಿಂದ ಓದಿ ಈಗ ಯುಪಿಎಸ್‌ಸಿಯಲ್ಲಿ (Success Story) ತೇರ್ಗಡೆ ಹೊಂದಿದ್ದಾರೆ. ಆ ಮೂಲಕ ಪ್ರತಿಯೊಬ್ಬರಿಗೂ ಮಾದರಿ ಎನಿಸಿದ್ದಾರೆ.

ಇವರು ಮಾಡದ ಕೆಲಸವಿಲ್ಲ

ಮಧ್ಯಪ್ರದೇಶದ ಮೊರೆನಾ ಮೂಲದವರಾದ ಮನೋಜ್‌ ಕುಮಾರ್‌ ಶರ್ಮಾ ಅವರು ಮಾಡದ ಕೆಲಸಗಳೇ ಇರಲಿಕ್ಕಿಲ್ಲ. ಅವರು 9 ಹಾಗೂ 10ನೇ ತರಗತಿಯಲ್ಲಿ ತೃತೀಯ ದರ್ಜೆಯಲ್ಲಿ ಪಾಸಾದರು. 12ನೇ ತರಗತಿಯಲ್ಲಿ ಅವರು ತೇರ್ಗಡೆಯೇ ಆಗಲಿಲ್ಲ. ಹಾಗಾಗಿ ಅವರು ಗ್ವಾಲಿಯರ್‌ನಲ್ಲಿ ಟೆಂಪೋ ಓಡಿಸಬೇಕಾಯಿತು. ಕುಟುಂಬದ ಹಣಕಾಸು ಬಿಕ್ಕಟ್ಟು ನಿವಾರಿಸಲು ಅವರು ದೆಹಲಿ ಲೈಬ್ರರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡಿದರು.

ತಿರುವು ಕೊಟ್ಟ ಗ್ರಂಥಾಲಯ

ಸಹವಾಸದಂತೆ ಫಲ ಎಂದು ದೊಡ್ಡವರು ಹೇಳಿದ್ದಾರೆ. ಓದಬೇಕು, ದೊಡ್ಡ ಅಧಿಕಾರಿಯಾಗಬೇಕು ಎಂಬ ಛಲ ಇದ್ದರೂ ಹಣಕಾಸು ಬಿಕ್ಕಟ್ಟಿನಿಂದಾಗಿ ಮನೋಜ್‌ ಶರ್ಮಾ ಅವರು ಒಳ್ಳೆಯ ಕಡೆ ಕೋಚಿಂಗ್‌ ಸೇರಲು ಆಗಲಿಲ್ಲ. ಅಲ್ಲದೆ, ದೆಹಲಿಯಲ್ಲಿ ಅವರು ಗ್ರಂಥಾಲಯವೊಂದರ ಗುಮಾಸ್ತರಾಗಿ ಕೆಲಸ ಮಾಡಿದರು. ಹೀಗೆ, ಗ್ರಂಥಾಲಯದಲ್ಲಿ ಕೆಲಸ ಮಾಡಿದ್ದೇ ಅವರ ಬದುಕಿಗೆ ತಿರುವು ಕೊಟ್ಟಿತು.

ಇದನ್ನೂ ಓದಿ: Success Story: ಪಾನ್‌ ಶಾಪ್‌ ಮಾಲೀಕನ ಮಗಳೀಗ ಮ್ಯಾಜಿಸ್ಟ್ರೇಟ್‌, ತಂದೆಯ ಕನಸಿಗೆ ‘ಜ್ಯೋತಿ’ಯಾದ ದಿಟ್ಟೆ

ಗ್ರಂಥಾಲಯದಲ್ಲಿ ಗುಮಾಸ್ತರಾಗಿದ್ದಾಗ ಮನೋಜ್‌ ಕುಮಾರ್‌ ಶರ್ಮಾ, ಹಲವು ಪುಸ್ತಕಗಳನ್ನು ಓದಿದರು. ಅಲ್ಲದೆ, ಕಷ್ಟಪಟ್ಟು ಏಳಿಗೆ ಹೊಂದಿದ, ಅವಮಾನ ಎದುರಿಸಿಯೂ ಅಮೋಘವಾದುದದನ್ನು ಸಾಧಿಸಿದ ಗಣ್ಯರ ಜೀವನ ಚರಿತ್ರೆ ಓದಿದರು. ಇದು ಅವರು ಏಳಿಗೆಯತ್ತ ಮುಖ ಮಾಡಲು ಕಾರಣವಾಯಿತು. ಅಲ್ಲಿಂದ ಕಷ್ಟಪಟ್ಟು ಓದಿದ ಮನೋಜ್‌ ಕುಮಾರ್‌ ಶರ್ಮಾ, ಮೂರು ಬಾರಿ ಪ್ರಯತ್ನಪಟ್ಟರೂ ಯುಪಿಎಸ್‌ಸಿಯಲ್ಲಿ ತೇರ್ಗಡೆ ಹೊಂದಿಲ್ಲ. ಆದರೇನಂತೆ, ನಾಲ್ಕನೇ ಬಾರಿ ಅವರು ಯುಪಿಎಸ್‌ಸಿಯಲ್ಲಿ 121ನೇ ರ‍್ಯಾಂಕ್‌ ಗಳಿಸಿದರು. ಸದ್ಯ ಅವರು ಮುಂಬೈ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರಿಂದ ಸಿಂಗಂ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.

Exit mobile version