ನವ ದೆಹಲಿ: ಇನ್ಫೋಸಿಸ್ ಫೌಂಡೇಷನ್‌ನ ಮುಖ್ಯಸ್ಥೆ ಸುಧಾಮೂರ್ತಿ ಇತ್ತೀಚೆಗೆ ದಿ ಕಪಿಲ್ ಶರ್ಮಾ ಶೋ ಕಾರ್ಯಕ್ರಮದಲ್ಲಿ (The Kapil Sharma Show) ಮಾತನಾಡುತ್ತಾ, ಬ್ರಿಟನ್‌ನಲ್ಲಿ ನಡೆದ ಸ್ವಾರಸ್ಯಕರ ಘಟನೆಯೊಂದನ್ನು (Sudha Murthy) ವಿವರಿಸಿದ್ದಾರೆ. ಶೋದಲ್ಲಿ ಈ ಘಟನೆಯನ್ನು ವಿವರಿಸಿದಾಗ ಎಲ್ಲರೂ ಸುಧಾಮೂರ್ತಿಯವರ ಸರಳತನಕ್ಕೆ ಅಚ್ಚರಿಪಟ್ಟರು.
ಸುಧಾಮೂರ್ತಿಯವರು ಬ್ರಿಟನ್‌ಗೆ ಹೋಗಿದ್ದಾಗ ಇಮಿಗ್ರೇಶನ್ ಅಧಿಕಾರಿಯೊಬ್ಬರು ವಿಳಾಸ ಯಾವುದು ಎಂದು ಕೇಳಿದರಂತೆ. ಆಗ ನೀಡಿದ ವಿಳಾಸದ ವಿವರದಲ್ಲಿ 10 ಡೌನಿಂಗ್ ಸ್ಟ್ರೀಟ್ ಎಂದು ಸುಧಾಮೂರ್ತಿ ಬರೆದಿದ್ದರು. (10 Dowining Street) ಅದನ್ನು ಕಂಡ ಇಮಿಗ್ರೇಶನ್ ಅಧಿಕಾರಿ ನಂಬದೆ, ಏನು ಜೋಕ್ ಮಾಡ್ತೀರಾ? ಎಂದು ಕೇಳಿದನಂತೆ!
ಏಕೆಂದರೆ ಬ್ರಿಟನ್‌ನಲ್ಲಿ 10 ಡೌನಿಂಗ್ ಸ್ಟ್ರೀಟ್ ಎಂದರೆ ಪ್ರಧಾನಿಯವರ ನಿವಾಸದ ವಿಳಾಸ. ಬ್ರಿಟನ್ ಪ್ರಧಾನಿಯಾಗಿರುವ ರಿಷಿ ಸುನಕ್ ಅವರು ಸುಧಾಮೂರ್ತಿಯವರ ಅಳಿಯ. ಕಳೆದ ವರ್ಷ ಪ್ರಧಾನಿಯಾಗಿದ್ದಾರೆ. ಸುಧಾಮೂರ್ತಿ ಅವರ ಮಗನೂ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದಾರೆ. ಈ ವಿಷಯವನ್ನು ಅಧಿಕಾರಿಗೆ ಸುಧಾಮೂರ್ತಿ ವಿವರಿಸಿದರಂತೆ. ಕೊನೆಗೂ ನಾನು 10 ಡೌನಿಂಗ್ ಸ್ಟ್ರೀಟ್ ಎಂದು ವಿಳಾಸವನ್ನು ಬರೆದೆ ಶೋದಲ್ಲಿ ಎಂದು ಹೇಳಿದರು.
72 ವರ್ಷದ ಸರಳ ಮಹಿಳೆ ಬ್ರಿಟನ್ ಪ್ರಧಾನಿಯ ಅತ್ತೆ ಎಂಬುದನ್ನು ಅಲ್ಲಿ ಯಾರೊಬ್ಬರೂ ನಂಬಲಿಲ್ಲ ಎಂದು ಸುಧಾಮೂರ್ತಿಯವರು ಹೇಳಿದರು.
ಇದನ್ನೂ ಓದಿ: ನಾರಾಯಣಮೂರ್ತಿ ಬಸ್ ಕಂಡಕ್ಟರ್ ಹೈ ಕ್ಯಾ? ಭೇಟಿ ಕುರಿತು ಕಪಿಲ್ ಶರ್ಮಾ ಶೋನಲ್ಲಿ ಸುಧಾಮೂರ್ತಿ ಹೇಳಿದ್ದೇನು?