Site icon Vistara News

Niti Aayog: ರಾಜೀವ್‌ ಕುಮಾರ್‌ ರಾಜೀನಾಮೆ, ಸುಮನ್‌ ಬೆರಿ ನೂತನ ಉಪಾಧ್ಯಕ್ಷ

ನವದೆಹಲಿ: ರಾಜೀವ್‌ ಕುಮಾರ್‌ ಅವರು ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸರಕಾರ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಸುಮನ್‌ ಕೆ. ಬೆರಿ ಅವರನ್ನು ನೂತನ ಉಪಾಧ್ಯಕ್ಷರನ್ನಾಗಿ ನೇಮಿಸಿದೆ.

ರಾಜೀವ್‌ ಕುಮಾರ್‌ ಸುಮಾರು ಐದು ವರ್ಷಗಳಿಂದ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನದಲ್ಲಿದ್ದರು. ನೀತಿ ನಿರೂಪಣೆಯ ಹೊಣೆ ಹೊತ್ತಿರುವ ಈ ಉನ್ನತ ಸಮಿತಿಗೆ ಪ್ರಧಾನ ಮಂತ್ರಿ ಅಧ್ಯಕ್ಷರಾಗಿರುತ್ತಾರೆ. ರಾಜೀವ್‌ ಕುಮಾರ್‌ 2017ರ ಆಗಸ್ಟ್‌ನಲ್ಲಿ ಅರವಿಂದ ಪನಗಾರಿಯಾ ಅವರು ಸ್ಥಾನ ತೆರವು ಮಾಡಿದ ಬಳಿಕ ಈ ಹೊಣೆ ಹೊತ್ತಿದ್ದರು.

ಸುಮನ್‌ ಬೆರಿ ಅವರು ಏ.30ರಿಂದ ನೂತನ ಹೊಣೆ ವಹಿಸಿಕೊಳ್ಳಲಿದ್ದಾರೆ. ಇವರು ಆಕ್ಸ್‌ಫರ್ಡ್‌ ವಿವಿಯ ಹಳೆ ವಿದ್ಯಾರ್ಥಿ. ಆನ್ವಯಿಕ ವಾಣಿಜ್ಯ ಅಧ್ಯಯನದ ರಾಷ್ಟ್ರೀಯ ಸಮಿತಿಯ (ಎನ್‌ಸಿಎಇಆರ್‌) ನಿರ್ದೇಶಕರಾಗಿದ್ದರು. ಯುಪಿಎ ಆಡಳಿತದ ಅವಧಿಯಲ್ಲಿ ಪ್ರಧಾನ ಮಂತ್ರಿಗಳ ವಾಣಿಜ್ಯ ಸಲಹಾ ಸಮಿತಿಯ ಸದಸ್ಯರಾಗಿದ್ದರು. ರಾಷ್ಟ್ರೀಯ ಅಂಕಿಸಂಖ್ಯೆ ಆಯೋಗದ ಸದಸ್ಯರೂ ಆಗಿದ್ದರು. ಎನ್‌ಸಿಎಇಆರ್‌ ತೊರೆದ ಬಳಿಕ, ದೈತ್ಯ ಇಂಧನ ಕಂಪನಿ ಶೆಲ್‌ನ ಮುಖ್ಯ ಎಕಾನಮಿಸ್ಟ್‌ ಆಗಿದ್ದರು.

ಇದನ್ನೂ ಓದಿ: World Book Day: ಪುಸ್ತಕಗಳಿಗೆ ರೆಕ್ಕೆ ನೀಡಿದ ಊರಿನ ಕತೆ

Exit mobile version