Site icon Vistara News

Sundar Pichai: ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಗೌರವ ಡಾಕ್ಟರೇಟ್‌ ಪ್ರದಾನ-ಫೋಟೋ ವೈರಲ್‌

Sundar Pichai

ಹೊಸದಿಲ್ಲಿ: ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಗೂಗಲ್‌ ಸಿಇಒ(Google CEO) ಸುಂದರ್‌ ಪಿಚೈ(Sundar Pichai) ಮತ್ತು ಅವರ ಪತ್ನಿಗೆ ಅಂಜಲಿ ಪಿಚೈ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ. ಖರಗ್‌ಪುರ ಐಐಟಿ(IIT Kharagpur) ಈ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದೆ.

ಇನ್ನು ಈ ವಿಚಾರವನ್ನು ಸುಂದರ್‌ ಪಿಚೈ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಕಳೆದ ವಾರ ನನ್ನ ಅಲ್ಮಾ ಮೇಟರ್ ಐಐಟಿ ಖರಗ್‌ಪುರದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಲು ನಾನು ಕೃತಜ್ಞನಾಗಿದ್ದೇನೆ. ನನ್ನ ಪೋಷಕರು ಯಾವಾಗಲೂ ನನ್ನ ಡಾಕ್ಟರೇಟ್ ಪಡೆಯಬೇಕೆಂದು ಆಶಿಸುತ್ತಿದ್ದರು, ಈ ಗೌರವ ಸ್ವೀಕರಿಸುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ ಎಂದಿದ್ದಾರೆ.

IIT ಯಲ್ಲಿನ ಶಿಕ್ಷಣ ಮತ್ತು ತಂತ್ರಜ್ಞಾನದ ಅಧ್ಯಯನ ನನ್ನನ್ನು Googleನಂತಹ ಅತಿದೊಡ್ಡ ಸಂಸ್ಥೆಯ ಅತಿ ದೊಡ್ಡ ಹುದ್ದೆಯನ್ನು ಅಲಂಕರಿಸುವಂತೆ ಮಾಡಿತು. ಹಾಗೂ ಹೆಚ್ಚಿನ ಜನರು ತಂತ್ರಜ್ಞಾನವನ್ನು ಪ್ರವೇಶಿಸಲು ಸಹಾಯ ಮಾಡಿತು. ತಂತ್ರಜ್ಞಾನದಲ್ಲಿ ಐಐಟಿಯ ಪಾತ್ರವು AI ಕ್ರಾಂತಿಯೊಂದಿಗೆ ಮಾತ್ರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ನಾನಿ ಅಲ್ಲಿ ಕಳೆದ ಕೆಲವು ಸಮಯಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದು ಅವರು ಹೇಳಿದರು.

ಅವರು ಗೌರವ ಪದವಿ ಸ್ವೀಕರಿಸುತ್ತಿರುವ ಎರಡು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಸುಂದರ್ ಪಿಚೈ ಅವರಿಗೆ ಡಾಕ್ಟರ್ ಆಫ್ ಸೈನ್ಸ್ (ಆನರಿಸ್ ಕಾಸಾ) ಪ್ರಶಸ್ತಿಯನ್ನು ನೀಡಲಾಯಿತು. ಅವರ ಪತ್ನಿ ಅಂಜಲಿ ಪಿಚೈ ಅವರಿಗೆ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಲಾಯಿತು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಸಮಾರಂಭದಲ್ಲಿ ಅವರು ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಪಿಚೈ ಪೋಸ್ಟ್‌ಗೆ ನೆಟ್ಟಿಗರ ಪ್ರತಿಕ್ರಿಯೆ

ಇನ್ನು ಸುಂದರ್‌ ಪಿಚೈ ಅವರ ಪೋಸ್ಟ್‌ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಭಿನಂದನೆ ಸಲ್ಲಿಸಿದ್ದಾರೆ. ಐಐಟಿಯ ವಿದ್ಯಾರ್ಥಿ ಎಂದಿಗೂ ಐಐಟಿಯ ವಿದ್ಯಾರ್ಥಿಯೇ ಆಗಿರುತ್ತಾನೆ. ಸುಂದರ್‌ ಪಿಚೈ ಬರೀ ಹೆಸರಲ್ಲ ಅದೊಂದು ಅದ್ಭುತ ಎಂದು ಒಬ್ಬ ಬರೆದುಕೊಂಡಿದ್ದಾನೆ. ಪಿಚೈ ಒಬ್ಬ ಅದ್ಬುತ ವ್ಯಕ್ತಿ ಅಭಿನಂದನೆಗಳು ಎಂದು ಮತ್ತೊಬ್ಬ ನೆಟ್ಟಿಗ ಬರೆದುಕೊಂಡಿದ್ದಾನೆ.

ಸುಂದರ್ ಪಿಚೈ ಅವರಿಗೆ ಗೌರವ ಪದವಿ ನೀಡಿದ್ದು ಏಕೆ?

ಡಿಜಿಟಲ್ ರೂಪಾಂತರ, ಕೈಗೆಟುಕುವ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳಿಗೆ ಅವರ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಸುಂದರ್‌ ಪಿಚೈ ಅವರಿಗೆ ಈ ಗೌರವ ಪ್ರದಾನ ಮಾಡಲಾಯಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಐಐಟಿ-ಖರಗ್‌ಪುರದ 69 ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಅಂದು ಪಿಚೈ ಅವರು ಗೈರು ಹಾಜರಾಗಿದ್ದ ಕಾರಣ ಜುಲೈ 23 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: Kargil Vijay Diwas 2024: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಕ್ಷಣವೂ ಯೋಚಿಸದ ಈ ವೀರ ಯೋಧರಿಗೊಂದು ಸಲಾಮ್

Exit mobile version