Site icon Vistara News

Ekta Kapoor | ಯುವಕರ ಮನಸ್ಸು ಹಾಳು ಮಾಡುತ್ತಿದ್ದೀರಿ: ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಸುಪ್ರೀಂ ಗರಂ

Ekta Kapoor

ನವ ದೆಹಲಿ: XXX ವೆಬ್‌ಸೀರೀಸ್‌ನಲ್ಲಿ ಆಕ್ಷೇಪಾರ್ಹ ಕಂಟೆಂಟ್ ಇದ್ದು, ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ಯುವ ಮನಸ್ಸುಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ALTBalaji ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗಿದ್ದ XXX ವೆಬ್‌ಸಿರೀಸ್‌ನಲ್ಲಿ ಸೈನಿಕರಿಗೆ ಅವಮಾನ ಮಾಡಲಾಗಿದೆ ಮತ್ತು ಅವರ ಕುಟುಂಬ ಸದಸ್ಯರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂಬ ಕಾರಣಕ್ಕೆ ಕೆಳ ಹಂತದ ನ್ಯಾಯಾಲಯವು ತಮ್ಮ ಬಂಧನಕ್ಕೆ ಹೊರಡಿಸಿರುವ ಅರೆಸ್ಟ್ ವಾರೆಂಟ್ ಪ್ರಶ್ನಿಸಿ ಏಕ್ತಾ ಕಪೂರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಯುವ ಸಮದಾಯವನ್ನು ಹಾಳು ಮಾಡುತ್ತಿದ್ದೀರಿ ಎಂದು ಕಿಡಿ ಕಾರಿದೆ. ನಿಮಗೆ ಉತ್ತಮ ನ್ಯಾಯವಾದಿಗಳನ್ನು ನೇಮಕ ಮಾಡಿಕೊಳ್ಳುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ ನೇರವಾಗಿ ಇಲ್ಲಿಗೆ(ಸುಪ್ರೀಂ ಕೋರ್ಟ್) ಪದೇ ಪದೇ ಬರಬೇಡಿ. ಈ ಕೋರ್ಟ್‌ ಇರುವುದು ಧ್ವನಿ ಇಲ್ಲದವರಿಗಾಗಿ ಎಂದು ಖಡಕ್ಕಾಗಿ ಹೇಳಿದೆ.

ಈ ದೇಶದ ಯುವ ಸಮುದಾಯದ ಮನಸ್ಸುಗಳನ್ನು ನೀವು ಹಾಳು ಮಾಡುತ್ತಿದ್ದರಿ. ಈ ಒಟಿಟಿ ಕಂಟೆಂಟ್ ಎಲ್ಲರಿಗೂ ಲಭ್ಯವಿದೆ. ನೀವು ಜನರಿಗೆ ಯಾವು ರೀತಿಯ ಆಯ್ಕೆಗಳನ್ನು ನೀಡುತ್ತಿದ್ದೀರಿ. ಅದಕ್ಕೆ ಪ್ರತಿಯಾಗಿ ನೀವು ತರುಣರ ಮನಸ್ಸುಗಳನ್ನು ಹಾಳು ಮಾಡುತ್ತಿದ್ದೀರಿ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಜಯ್ ರಸ್ಟೋಗಿ ಮತ್ತು ಸಿ ಟಿ ರವಿಕುಮಾರ್ ಅವರು ಅಭಿಪ್ರಾಯಪಟ್ಟರು. ಏತನ್ಮಧ್ಯೆ, ಏಕ್ತಾ ಕಪೂರ್ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ರೋಹ್ಟಗಿ ಅವರು, ಈ ಕಂಟೆಂಟ್ ಚಂದಾದಾರಿಕೆ ಆಧರಿತವಾಗಿದೆ. ಇದು ವಾಕ್ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಹೇಳಿದರು.

XXX ವೆಬ್‌ಸಿರೀಸ್‌ನಲ್ಲಿ ಸೈನಿಕರಿಗೆ ಅವಮಾನ ಮಾಡಲಾಗಿದೆ ಎಂದು ಬಿಹಾರದ ಮಾಜಿ ಸೇನಾ ಯೋಧ ಶಂಭು ಕುಮಾರ್ ಅವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್, ಏಕ್ತಾ ಕಪೂರ್ ಬಂಧನಕ್ಕೆ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಶಂಭು ಕುಮಾರ್ ಅವರು 2020ರಲ್ಲಿ ಈ ದೂರು ನೀಡಿದ್ದರು. XXX ಸಿರೀಸ್‌ನಲ್ಲಿ ಸೈನಿಕರ ಪತ್ನಿಗೆ ಸಂಬಂಧಿಸಿದಂತೆ ಅನೇಕ ಆಕ್ಷೇಪಾರ್ಹ ಕಂಟೆಂಟ್ ‌ಇದೆ ಎಂದು ಅವರು ದೂರಿದ್ದರು.

ಇದನ್ನೂ ಓದಿ | Ekta Kapoor | ಏಕ್ತಾ ಕಪೂರ್‌, ತಾಯಿ ವಿರುದ್ಧ ಅರೆಸ್ಟ್ ವಾರೆಂಟ್‌ ಹೊರಡಿಸಿದ ಬಿಹಾರ ಕೋರ್ಟ್

Exit mobile version