ನವ ದೆಹಲಿ: ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಾಂವಿಧಾನಿಕ ಪೀಠದ ಕಲಾಪಗಳನ್ನು ಲೈವ್ ಸ್ಟ್ರೀಮಿಂಗ್ (Livestreame) ಮಾಡಲಾಗುತ್ತಿದೆ. ಇದು ನ್ಯಾಯಾಲಯದ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಆಗಿದೆ. ಶಿವಸೇನೆಯ ಪ್ರಕರಣವನ್ನು ಸಂವಿಧಾನ ಪೀಠವು ವಿಚಾರಣೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ಕಲಾಪವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
2018ರ ಸೆಪ್ಟೆಂಬರ್ 27ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಸಾಂವಿಧಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ಲೈವ್ ಟೆಲಿಕಾಸ್ಟ್ ಮ್ತತು ವೆಬ್‌ಕಾಸ್ಟ್‌ನ ಮಹತ್ವದ ಬಗ್ಗೆ ಪ್ರಮುಖ ತೀರ್ಪು ಪ್ರಕಟಿಸಿದ್ದರು. ಈಗ ಸುಪ್ರೀಂ ಕೋರ್ಟ್ ಲೈವ್ ಸ್ಟ್ರೀಮಿಂಗ್ ನಡೆಸುತ್ತಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೂರ್ಣ ಪ್ರಮಾಣದ ಸಾಂವಿಧಾನಿಕ ಪೀಠವು ನಿಯಮಿತವಾಗಿ ವಿಚಾರಣೆ ನಡೆಸಲಿದೆ. ಈ ಪೀಠದ ಎಲ್ಲ ಕಲಾಪಗಳನ್ನು ನೇರವಾಗಿ ಲೈವ್ ಮಾಡಲಾಗುತ್ತಿದೆ.
ಮಂಗಳವಾರದ ಕಲಾಪದಲ್ಲಿ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು ಇಡಬ್ಲ್ಯೂಎಸ್ ಮೀಸಲು ಕಾನೂನು, ದಾವೂದಿ ಬೋಹ್ರಾ ಕಮ್ಯುನಿಟಿ ಧಾರ್ಮಿಕ ಪದ್ಧತಿ, ಸೇನಾ ವರ್ಸಸ್ ಸೇನಾ ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ. ಈಗಾಗಲೇ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವ ಸೇನಾ ವರ್ಸಸ್ ಸೇನಾ ಕಲಾಪವನ್ನು ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತಿದೆ.
ಇದನ್ನೂ ಓದಿ | Hijab Row | ಹಿಜಾಬ್ ನಿಷೇಧ ಕುರಿತ ತೀರ್ಪು ಕಾಯ್ದಿಟ್ಟ ಸುಪ್ರೀಂ ಕೋರ್ಟ್