Site icon Vistara News

Supriya Sule: ಇವಿಎಂ ಇದ್ದ ಸ್ಟ್ರಾಂಗ್‌ ರೂಂ ಸಿಸಿಟಿವಿ ಕ್ಯಾಮೆರಾ ಸ್ವಿಚ್‌ ಆಫ್‌; ಸುಪ್ರಿಯಾ ಸುಳೆ ಗಂಭೀರ ಆರೋಪ, EC ರಿಯಾಕ್ಟ್‌

Supriya Sule

Supriya Sule Alleges CCTV In EVM Strongroom Switched Off. Poll Officer Responds

ನವದೆಹಲಿ: ಲೋಕಸಭಾ ಚುನಾವಣೆಯ(Lok Sabha Election 2024) ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರ ಇದೀಗ ಇದರ ಬೆನ್ನಲ್ಲೇ ಭಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಮತಯಂತ್ರ(EVM)ಗಳನ್ನು ಕೂಡಿಟ್ಟಿದ್ದ ಸ್ಟ್ರಾಂಗ್‌ ರೂಂ(Strong room)ನ ಸಿಸಿಟಿವಿ ಕ್ಯಾಮೆರಾ ಸುಮಾರು 45ನಿಮಿಷಗಳ ಕಾಲ ಸ್ವಿಚ್‌ ಆಫ್‌ ಆಗಿತ್ತು ಎಂದು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕಿ ಸುಪ್ರಿಯಾ ಸುಳೆ(Supriya Sule) ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

ಸುಳೆ ಆರೋಪವೇನು?

ಎಕ್ಸ್‌ನಲ್ಲಿ ವಿಡಿಯೋ ಸಹಿತ ಪೋಸ್ಟ್‌ ಮಾಡಿದ್ದ ಸುಪ್ರಿಯಾ ಸುಳೆ, ಭಾರಾಮತಿಯಲ್ಲಿ ಮತದಾನದ ಬಳಿಕ ಇವಿಎಂ ಯಂತ್ರಗಳನ್ನು ಇರಿಸಿದ್ದ ಸ್ಟ್ರಾಂಗ್‌ ರೂಂನ ಸಿಸಿಟಿವಿ ವಿಡಿಯೋ ಕೆಲ ಕಾಲ ಕಾರ್ಯನಿರ್ಹಿಸುತ್ತಿರಲಿಲ್ಲ. ಸುಮಾರು 45 ನಿಮಿಷಗಳ ಕಾಲ ಸಿಸಿಟಿವಿ ಸ್ವಿಚ್‌ ಆಫ್‌ ಆಗಿತ್ತು. ಈಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಮಾಧಾನಕರ ಉತ್ತರ ಸಿಕ್ಕಿಲ್ಲ. ಅದೂ ಅಲ್ಲದೇ ಅದೇ ಸಮಯಕ್ಕೆ ತಂತ್ರಜ್ಞರು ಕೂಡ ಅಲ್ಲಿ ಲಭ್ಯವಿರಲಿಲ್ಲ. ಇವಿಎಂ ಸ್ಥಿತಿಗತಿ ಪರಿಶೀಲನೆಗೂ ನಮಗೆ ಅವಕಾಶ ಕೊಡಲಿಲ್ಲ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದ್ದು, ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸ್ಪಷ್ಟನೆ ನೀಡಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು.

EC ಪ್ರತಿಕ್ರಿಯೆ ಏನು?

ಸುಪ್ರಿಯಾ ಸುಳೆ ಆರೋಪಕ್ಕೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಕವಿತಾ ದ್ವಿವೇದಿ, ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಇವಿಎಂಗಳನ್ನು ಇರಿಸಲಾಗಿರುವ ಗೋದಾಮಿನಲ್ಲಿ ಸಿಸಿಟಿವಿ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ, ಎಲ್ಲಾ ಡೇಟಾ ಸುರಕ್ಷಿತವಾಗಿದೆ, ಸ್ವಲ್ಪ ಸಮಯದವರೆಗೆ ಮಾನಿಟರ್‌ ಅನ್ನು ಮುಚ್ಚಲಾಗಿತ್ತು. ಅದರ ಹೊರತಾಗಿ ಎಲ್ಲಾ ದತ್ತಾಂಶಗಳು ಸುರಕ್ಷಿತವಾಗಿದೆ ಎಂದು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:Bomb Threat: ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮೂಲಕ ಸಂದೇಶ ರವಾನೆ

ಬಾರಾಮತಿಯಲ್ಲಿ ಕ್ಷೇತ್ರದಲ್ಲಿ ಪವಾರ್‌ ವರ್ಸಸ್‌ ಪವಾರ್‌ ಸೆಣಸಾಟ ಇದ್ದು, ಇದೊಂದು ಪ್ರತಿಷ್ಠೆಯ ಕಣವಾಗಿದೆ. ಮೇ 7ರಂದು ಮತದಾನ ನಡೆದಿದ್ದು, ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಮತ್ತು ಮಾಜಿ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಪರಸ್ಪರ ಎದುರಾಳಿಗಳಾಗಿ ಕಣದಲ್ಲಿದ್ದಾರೆ.

Exit mobile version