ನವದೆಹಲಿ: ವಿಮಾನ ನಿಲ್ದಾಣ, ಶಾಲೆ, ಆಸ್ಪತ್ರೆಗಳ ಬಳಿಕ ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಹುಸಿ ಬಾಂಬ್ ಕರೆಗಳು ಮತ್ತು ಇಮೇಲ್‌ಗಳು ಬರತೊಡಗಿವೆ. ಹಲವು ಕೇಂದ್ರ ಸರ್ಕಾರಿ ನೌಕರರಿಗೆ ಮಂಗಳವಾರ ಅನುಮಾನಾಸ್ಪದ ಇಮೇಲ್ ಸಂದೇಶ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ತನಿಖೆ ನಡೆಸಲು ಮುಂದಾಗಿದೆ (Suspicious Identical Email).
ಕೇಂದ್ರ ಸಚಿವಾಲಯ ಸೇವೆ (Central Secretariat Service)ಗಳ ಅಧಿಕಾರಿಗಳಿಗೆ ಕಳುಹಿಸಲಾದ ಇಮೇಲ್‌ಗಳಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ತಿಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸೆಂಟ್ರಲ್ ಸೆಕ್ರೆಟರಿಯೇಟ್ ಸರ್ವಿಸ್ ಫೋರಂ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, “ಕೇಂದ್ರ ಸಚಿವಾಲಯದ ಹಲವು ಅಧಿಕಾರಿಗಳಿಗೆ ಅನುಮಾನಾಸ್ಪದ ಇಮೇಲ್ ಬಂದಿದೆ. ದಯವಿಟ್ಟು ಈ ವಿಷಯವನ್ನು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಿʼʼ ಎಂದು ಬರೆದುಕೊಂಡಿದೆ. ಕೇಂದ್ರ ಸಚಿವರು ಸೇರಿದಂತೆ ವಿವಿಧ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಪೋಸ್ಟ್ ಹಂಚಿಕೊಳ್ಳಲಾಗಿದೆ.
Several officers in Central Secretariat received a potentially suspicious email today. @NICMeity @GoI_MeitY, please look into this matter and take necessary action. #CyberAlert #CyberSafety @AshwiniVaishnaw #CentralSecretariat pic.twitter.com/ESC2AZIqc8
— केंद्रीय सचिवालय सेवा फोरम (@CSSforum_) July 9, 2024
ಸಿಎಸ್ಎಸ್ ಅಧಿಕಾರಿಗಳನ್ನು ಕೇಂದ್ರ ಸಚಿವಾಲಯದ ಬೆನ್ನೆಲುಬು ಎಂದೇ ಪರಿಗಣಿಸಲಾಗುತ್ತದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (National Informatics Centre) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (Ministry of Electronics and Information Technology-Meity) ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸೆಂಟ್ರಲ್ ಸೆಕ್ರೆಟರಿಯೇಟ್ ಸರ್ವಿಸ್ ಫೋರಂ ಮನವಿ ಮಾಡಿದೆ.
ಸಿಎಸ್ಎಸ್ ಫೋರಂನ ಪ್ರಧಾನ ಕಾರ್ಯದರ್ಶಿ ಅಶುತೋಷ್ ಮಿಶ್ರಾ ಅವರು ಪಿಟಿಐಗೆ ಮಾಹಿತಿ ನೀಡಿ, ʼʼಈ ಸೈಬರ್ ದಾಳಿಯ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಮತ್ತು ಅಧಿಕಾರಿಗಳು ಜಾಗರೂಕರಾಗಿರಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲʼʼ ಎಂದು ಸೂಚಿಸಿದ್ದಾರೆ.
“ಕೇಂದ್ರ ಸಚಿವಾಲಯದ ಸಂಪೂರ್ಣ ಕೆಲಸವು ಈಗ ಆನ್‌ಲೈನ್ ಆಗಿರುವುದರಿಂದ ಇಂತಹ ಬೆದರಿಕೆಗಳನ್ನು ನಿಗ್ರಹಿಸಲು ಸೂಕ್ತ ಕ್ರಮದ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ. ʼʼಸಿಎಸ್‌ಎಸ್ ಅಧಿಕಾರಿಗಳಿಗೆ ಜಾಗರೂಕರಾಗಿರಲು ಮತ್ತು ಯಾವುದೇ ಅನುಮಾನಾಸ್ಪದ ಇಮೇಲ್ ಬಂದರೆ ತಕ್ಷಣ ವರದಿ ಮಾಡಲು ಸೂಚಿಸಲಾಗಿದೆʼʼ ಎಂದು ಅವರು ಹೇಳಿದ್ದಾರೆ.
2021ರಲ್ಲಿ ಸರ್ಕಾರಿ ನೌಕರರಿಗೆ ಫಿಶಿಂಗ್ ಇಮೇಲ್‌ಗಳನ್ನು ಕಳುಹಿಸಲು ಹೈಜಾಕ್ ಮಾಡಿದ ಸರ್ಕಾರಿ ಇಮೇಲ್ ವಿಳಾಸಗಳನ್ನು ಬಳಸಲಾಗಿತ್ತು. ಈ ಲಿಂಕ್ ಕ್ಲಿಕ್ ಮಾಡದಂತೆ ಎನ್ಐಸಿ ಎಚ್ಚರಿಕೆ ನೀಡಿತ್ತು.
ಇದನ್ನೂ ಓದಿ: Bomb Threat: ರಾಜಭವನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿ ಆಂಧ್ರದಲ್ಲಿ ಬಂಧನ
ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ; ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ
ನವದೆಹಲಿ: ಕರ್ನಾಟಕ, ದೆಹಲಿ, ಗುಜರಾತ್ ಸೇರಿ ದೇಶದ ಹಲವೆಡೆ ಶಾಲೆಗಳಿಗೆ ಇತ್ತೀಚೆಗೆ ಇಮೇಲ್ ಮೂಲಕ ಬಾಂಬ್ ದಾಳಿ ಬೆದರಿಕೆ ಒಡ್ಡಲಾಗಿತ್ತು. ಇದರಿಂದ ಶಾಲೆಗಳ (Schools) ಆಡಳಿತ ಮಂಡಳಿಗಳು ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಿದ, ಪೋಷಕರು ಆತಂಕ್ಕಕೀಡಾದ ಪ್ರಕರಣಗಳು ಹೆಚ್ಚಾಗಿವೆ. ಇನ್ನು, ಬಳಿಕ ಇವು ಹುಸಿ ಬಾಂಬ್ ಕರೆಗಳು (Hoax Bomb Threats) ಎಂದು ಪೊಲೀಸರು ತನಿಖೆ ಕೈಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ಶಾಲೆಗಳಿಗೆ ಬಾಂಬ್ ಬೆದರಿಕೆ ಒಡ್ಡುವುದನ್ನು ತಡೆಯುವ ದಿಸೆಯಲ್ಲಿ ಕೇಂದ್ರ ಸರ್ಕಾರವು (Central Government) ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ದೆಹಲಿ, ಅಹಮದಾಬಾದ್ ಸೇರಿ ಹಲವೆಡೆ ಶಾಲೆಗಳಿಗೆ ಬಾಂಬ್ ಬೆದರಿಕೆ ಒಡ್ಡಿದ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವಾಲಯವು, ಈ ಕುರಿತು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (SOP) ರಚಿಸಬೇಕು ಹಾಗೂ ವಿಸ್ತೃತ ಶಿಷ್ಟಾಚಾರಗಳನ್ನು ಸಿದ್ಧಪಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿದೆ. ಶಾಲೆಗಳಲ್ಲಿ ಸಿಸಿಟಿವಿಗಳ ಅಳವಡಿಕೆ, ಅವುಗಳ ಮೇಲೆ ನಿಗಾ ಇರಿಸುವುದು, ಶಾಲೆಗಳ ಇ-ಮೇಲ್ ವಿಳಾಸಗಳನ್ನು ಪದೇಪದೆ ಪರಿಶೀಲಿಸುವುದು ಸೇರಿ ಹಲವು ಸೂಚನೆಗಳನ್ನು ನೀಡಿದೆ.