Site icon Vistara News

Swami Nithyananda: ʻಸಿಸ್ಟರ್‌ ಸಿಟಿʼ ಎಂದು ಅಮೆರಿಕದ 30 ನಗರಗಳನ್ನು ವಂಚಿಸಿದ ಸ್ವಾಮಿ ನಿತ್ಯಾನಂದ!

Swami Nithyananda

ನ್ಯೂಯಾರ್ಕ್:‌ ಸ್ವಯಂಘೋಷಿತ ʼದೇವಮಾನವʼ ಸ್ವಾಮಿ ನಿತ್ಯಾನಂದ ಸುಮಾರು 30ಕ್ಕೂ ಅಧಿಕ ಅಮೆರಿಕದ ನಗರಗಳನ್ನು ವಂಚಿಸಿರುವುದು ವರದಿಯಾಗಿದೆ.

ಈತ ʼಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸʼ ಎಂಬ ತನ್ನ ಸ್ವಘೋಷಿತ ದೇಶದ ಹೆಸರಿನಲ್ಲಿ ʼಸಾಂಸ್ಕೃತಿಕ ಭಾಗೀದಾರಿಕೆʼ ಎಂಬ ನೆವದಿಂದ ಈ ನಗರಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾನೆ. ಆದರೆ ಈತನಿಗೊಂದು ದೇಶವಿದೆ ಎಂಬುದೇ ಕಾಲ್ಪನಿಕ ಸಂಗತಿ ಎಂದು ಅಮೆರಿಕದ ಪ್ರತಿಷ್ಠಿತ ಸುದ್ದಿ ಸಂಸ್ಥೆ ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ.

ನೆವಾರ್ಕ್‌, ನ್ಯೂಜೆರ್ಸಿ, ರಿಚ್ಮಂಡ್‌, ವರ್ಜಿನಿಯಾ, ಡೇಟನ್‌, ಒಹಾಯೊ, ಬ್ಯೂನಾ ಪಾರ್ಕ್‌, ಫ್ಲೋರಿಡಾ ಮುಂತಾದ ನಗರಗಳ ಜತೆಗೆ ಈತನ ʼಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸʼ ಎಂಬ ಕಾಲ್ಪನಿಕ ದೇಶ ʼಸಿಸ್ಟರ್-‌ ಸಿಟಿʼ ಎಂಬ ಒಪ್ಪಂದ ಮಾಡಿಕೊಂಡಿದೆ. ಇದೊಂದು ʼಸಾಂಸ್ಕೃತಿಕ ಸಹಭಾಗಿತ್ವʼವಂತೆ. ನೆವಾರ್ಕ್‌ ಸಿಟಿಯ ಜತೆಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೈಲಾಸದ ವೆಬ್‌ಸೈಟ್‌ ಪ್ರಕಟಿಸಿದೆ. ಆದರೆ, ಫಾಕ್ಸ್‌ ನ್ಯೂಸ್‌ನ ವರದಿಯ ಬಳಿಕ ನೆವಾರ್ಕ್‌ ಈ ಘಟನೆಗಾಗಿ ವಿಷಾದ ವ್ಯಕ್ತಪಡಿಸಿದೆ.

ʼʼರೇಪಿಸ್ಟ್‌, ನಕಲಿ ಗುರುವೊಬ್ಬನ ಬಲೆಗೆ ಈ ನಗರದ ಪ್ರತಿಷ್ಠಿತರು ಬೀಳುತ್ತಿರುವುದೇ ಆಶ್ಚರ್ಯ. ಕನಿಷ್ಠ ಪಕ್ಷ ಈ ದೇಶದ ಬಗ್ಗೆ ಗೂಗಲ್‌ ಸರ್ಚ್‌ ಮಾಡಿಯಾದರೂ ತಿಳಿದುಕೊಳ್ಳಬೇಕಾಗಿತ್ತು. ʼಕೈಲಾಸʼದ ವಂಚನೆಗೆ ಕೆಲವು ನಗರಗಳ ಮೇಯರ್‌ಗಳು ಮೋಸಹೋಗಿದ್ದಾರೆ. ಮೇಯರ್‌ಗಳು ಮಾತ್ರವಲ್ಲ, ಕೆಲವು ಸಂಸದರು ಕೂಡ ಮೋಸಹೋಗಿದ್ದು, ʼಸಂಸದೀಯವಾಗಿ ಈ ದೇಶವನ್ನು ಗುರುತಿಸುತ್ತೇವೆʼ ಎಂದಿದ್ದಾರೆ. ಈ ವಂಚಕ ಎಲ್ಲರನ್ನೂ ಮೋಸ ಮಾಡುತ್ತಿರುವುದು ಸ್ಪಷ್ಟʼʼ ಎಂದು ಫಾಕ್ಸ್‌ ನ್ಯೂಸ್‌ ಹೇಳಿದೆ.

ʼʼಕೈಲಾಸದೊಂದಿಗೆ ನಾವು ಮಾಡಿಕೊಂಡಿರುವುದು ಒಪ್ಪಂದವಲ್ಲ. ಅವರು ನೀಡಿರುವ ಮನವಿಯನ್ನು ಪರಿಗಣಿಸಿದ್ದೇವೆ ಅಷ್ಟೇ. ಅದನ್ನು ಯಾವುದೇ ರೀತಿಯಲ್ಲಿ ಪರಿಶೀಲಿಸಿ ಖಚಿತಪಡಿಸಿಲ್ಲʼʼ ಎಂದು ನಾರ್ತ್‌ ಕೆರೋಲಿನಾ ಹೇಳಿದೆ.

ಇದನ್ನೂ ಓದಿ: Swami Nithyananda: ʼಕೈಲಾಸʼದಿಂದ ವಿಶ್ವಸಂಸ್ಥೆಗೆ ಬಂದ ನಿತ್ಯಾನಂದನ ಪ್ರತಿನಿಧಿ ಯಾರೀಕೆ?

ʼʼಮನವಿಯನ್ನು ಪರಿಗಣಿಸುವ ಮುನ್ನ ಪರಿಶೀಲಿಸುವ ಅಗತ್ಯವಿದೆ. ಇಂದು ನೀವು ಅವರ ಮನವಿಯನ್ನು ಅಂಗೀಕರಿಸಿದರೆ, ಅವರು ಅಲ್ಲಿನ ಬೀದಿಗೆ ನಿಮ್ಮ ಹೆಸರಿಡುತ್ತಾರೆ. ನಾವು ನಮ್ಮ ತೆರಿಗೆ ಹಣವನ್ನು ಒಂದು ನಕಲಿ ದೇಶಕ್ಕೆ ಮಾನ್ಯತೆ ನೀಡುವುದಕ್ಕೆ ಬಳಸುತ್ತಿರುವುದು ಖೇದಕರʼʼ ಎಂದು ಫಾಕ್ಸ್‌ ನ್ಯೂಸ್‌ ಈ ನಗರಗಳ ಪ್ರತಿನಿಧಿಗಳನ್ನು ಟೀಕಿಸಿದೆ.

ಇತ್ತೀಚೆಗೆ ಕೈಲಾಸದ ಪ್ರತಿನಿಧಿಗಳು ವಿಶ್ವಸಂಸ್ಥೆ ಸಮಿತಿಯ ಸಭೆಯಲ್ಲೂ ಭಾಗವಹಿಸಿದುದನ್ನು ಸ್ಮರಿಸಬಹುದಾಗಿದೆ. ʼʼವಿಶ್ವಸಂಸ್ಥೆ ಸಮಿತಿ ಸಭೆಗಳಲ್ಲಿ ಯಾವುದೇ ಎನ್‌ಜಿಒ ಪ್ರತಿನಿಧಿಗಳು, ನಾಗರಿಕರು ಭಾಗವಹಿಸಬಹುದಾಗಿದೆ. ಆದರೆ ಕೈಲಾಸದ ಪ್ರಮೋಷನ್‌ ಸಾಮಗ್ರಿಗಳನ್ನು ಹಂಚುವುದನ್ನು ಆ ಸಭೆಯ ಸಂದರ್ಭದಲ್ಲಿ ತಡೆಯಲಾಗಿತ್ತು. ಅವರ ಲಿಖಿತ ಮನವಿಯು ಅಪ್ರಸ್ತುತವಾಗಿರುವುದರಿಂದ ನಮ್ಮ ಜಾಲತಾಣದಲ್ಲಿ ಅದನ್ನು ಪ್ರಕಟಿಸುವುದಿಲ್ಲʼʼ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಶನರ್‌ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Swami Nithyananda: ʼಭಾರತ ತನಗೆ ಕಿರುಕುಳ ನೀಡುತ್ತಿದೆʼ: ವಿಶ್ವಸಂಸ್ಥೆಯಲ್ಲಿ ಭಾಗವಹಿಸಿದ ಕೈಲಾಸದ ಪ್ರತಿನಿಧಿ!

Exit mobile version