ಬೆಂಗಳೂರು: ನಟಿ ಸ್ವರಾ ಭಾಸ್ಕರ್ (Swara Bhaskar) ರಾಜಕೀಯ ಕಾರ್ಯಕರ್ತ ಹಾಗೂ ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುದ್ದಿಯನ್ನು ಟ್ವೀಟ್ ಮೂಲಕ ವಿಡಿಯೊ ಹಂಚಿಕೊಂಡಿದ್ದಾರೆ. ತಮ್ಮ ಪ್ರೀತಿಯ ಕಥೆಯನ್ನು ವಿಡಿಯೊ ಮೂಲಕ ಬಹಿರಂಗಪಡಿಸಿದ್ದಾರೆ.
ಕಾನೂನುಬದ್ಧವಾಗಿ ಜೋಡಿ ಮದುವೆಯಾಗಿದೆ. ಫಹಾದ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಬಯೋ ಪ್ರಕಾರ ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ. ಇದೀಗ ಸ್ವರಾ ತನ್ನ ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
“ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು, ಆದರೆ ನಾವು ಮೊದಲು ಸ್ನೇಹವನ್ನು ಕಂಡುಕೊಂಡಿದ್ದೇವೆ. ತದನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡಿದ್ದೇವೆ! ನನ್ನ ಹೃದಯಕ್ಕೆ ಸ್ವಾಗತ ಫಹಾದ್ ಅಹ್ಮದ್” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Marriage Problem: ವಿವಾಹವೆಂಬ ಬಂಧನದಿಂ ದೂರ ನಿಲ್ವನೇ ಮಾಡರ್ನ್ ಇಂಡಿಯನ್ ಪುರುಷ?
ಸ್ವರಾ ಭಾಸ್ಕರ್ ಈ ಹಿಂದೆ ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು. ನಟಿ ತನ್ನ ತಲೆಯನ್ನು ಯಾರೊಬ್ಬರ ತೋಳುಗಳಲ್ಲಿ ಆರಾಮದಾಯಕವಾಗಿ ಮಲಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಇದು ಪ್ರೀತಿ ಆಗಿರಬಹುದು” ಎಂದು ಸ್ವರಾ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು.
ಈ ಹಿಂದೆ, ಸ್ವರಾ ಭಾಸ್ಕರ್ ಅವರು ಬರಹಗಾರ ಹಿಮಾಂಶು ಶರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳು ಇತ್ತು.