ನವದೆಹಲಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಶನಿವಾರವೇ ದೇಶಾದ್ಯಂತ ಸಂಭ್ರಮ ಮನೆಮಾಡಿತ್ತು. ಪಾರ್ಟಿ ಆಯೋಜನೆ, ಪಾರ್ಟಿ ಸಿದ್ಧತೆ, ಕೇಕ್ ಕತ್ತರಿಸುವುದು ಸೇರಿ ಹಲವು ರೀತಿಯಲ್ಲಿ ಜನ ಸಂಭ್ರಮಾಚರಣೆ ಮಾಡಿದರು. ಅದರಲ್ಲೂ, ಪಾರ್ಟಿಗಾಗಿ ಆನ್‌ಲೈನ್ ಮೂಲಕ ಕೋಟ್ಯಂತರ ಜನ ಫುಡ್ ಆರ್ಡರ್ (Swiggy Order) ಮಾಡಿದ್ದು, ಇಲ್ಲೂ ಬಿರ್ಯಾನಿಯೇ ಅಗ್ರ ಸ್ಥಾನ ಪಡೆದಿದೆ. ಮದ್ಯಪಾನದ ಪಾರ್ಟಿಗಾಗಿ ಲಕ್ಷಾಂತರ ಚಿಪ್ಸ್ ಪ್ಯಾಕೆಟ್‌ಗಳನ್ನೂ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲಾಗಿದೆ.
ಹೌದು, ಹೊಸ ವರ್ಷದ ಹಿಂದಿನ ದಿನವಾದ ಶನಿವಾರ ರಾತ್ರಿ 10.45ರ ವೇಳೆಗೆ ಸ್ವಿಗ್ಗಿಯಲ್ಲಿ 3.5 ಲಕ್ಷಕ್ಕೂ ಅಧಿಕ ಬಿರ್ಯಾನಿಗಳನ್ನು ಆರ್ಡರ್ ಮಾಡಲಾಗಿದೆ. ಹಾಗೆಯೇ, ನಂತರದ ಬೇಡಿಕೆಗೆ ಪಿಜ್ಜಾಗೆ ಇದ್ದು, 61 ಸಾವಿರ ಪಿಜ್ಜಾ ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ಕಂಪನಿ ತಿಳಿಸಿದೆ.
ಸ್ವಿಗ್ಗಿ ಈ ಕುರಿತು ಸಮೀಕ್ಷೆಯನ್ನೂ ನಡೆಸಿದ್ದು, ಶೇ.75.4ರಷ್ಟು ಜನ ಹೈದರಾಬಾದ್ ಬಿರ್ಯಾನಿ, ಶೇ.14.2ರಷ್ಟು ಮಂದಿ ಲಖನೌವಿ ಬಿರ್ಯಾನಿ ಹಾಗೂ ಶೇ.10.4ರಷ್ಟು ಜನ ಕೋಲ್ಕೊತಾ ಬಿರ್ಯಾನಿ ಆರ್ಡರ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ. ಹಾಗೆಯೇ, ಸ್ವಿಗ್ಗಿಯ ಇನ್‌ಸ್ಟಾಮಾರ್ಟ್‌ನಲ್ಲಿ ಸಂಜೆ 7 ಗಂಟೆ ವೇಳೆಗೆ 1.76 ಚಿಪ್ಸ್ ಪ್ಯಾಕೆಟ್, 2,757 ಪ್ಯಾಕೆಟ್ ಡ್ಯುರೆಕ್ಸ್ ಕಾಂಡೋಮ್‌ಗಳನ್ನು ಆರ್ಡರ್ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ | New Year 2023 | ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭ್ರಮದ ಹೊಸ ವರ್ಷಾಚರಣೆ