Site icon Vistara News

Taj Mahal : ತಾಜ್​ ಮಹಲ್ ಅಥವಾ ತೇಜೋ ಮಹಾಲಯ? ಐತಿಹಾಸಿಕ ಸ್ಮಾರಕ ಶಿವ ದೇವಾಲಯ ಎಂದು ವಾದಿಸಿ ಗಂಗಾಜಲ ಅರ್ಪಿಸಲು ಮುಂದಾದ ಮಹಿಳೆ!

Taj Mahal

ನವದೆಹಲಿ: ಕನ್ವರ್ ಯಾತ್ರೆಗೆ ಬಂದಿದ್ದ ಮಹಿಳೆಯೊಬ್ಬರು ಸೋಮವಾರ ಐತಿಹಾಸಿಕ ಸ್ಮಾರಕ ಹಾಗೂ ಪ್ರೀತಿಯ ಪ್ರತೀಕ ಎಂದು ಪರಿಗಣಿಸಲಾಗಿರುವ ತಾಜ್ ಮಹಲ್ (Taj Mahal ) ಹೊರಗೆ ‘ಕವಾಡ್’ ನೊಂದಿಗೆ (ಕನ್ವರ್ ಯಾತ್ರೆಯ ಸಮಯದಲ್ಲಿ ಗಂಗಾ ನದಿಯಿಂದ ಪವಿತ್ರ ನೀರು ಸಾಗಿಸುವ ಮಡಕೆಗಳು) ಬಂದ ಘಟನೆ ನಡೆಯಿತು. ಅವರು ತಾಜ್​ ಮಹಲ್ ಅಲ್ಲ, ಶಿವ ದೇವಾಲಯ ಎಂದು ವಾದಿಸಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷೆ ಮೀನು ರಾಥೋಡ್ ಗಂಗಾಜಲ ಅರ್ಪಿಸಲು ಮುಂದಾದ ಮಹಿಳೆ. ಸೋಮವಾರ ತಾಜ್ ಮಹಲ್ನ ಪಶ್ಚಿಮ ದ್ವಾರಕ್ಕೆ ‘ಕವಡ್’ ಅನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಾಗ ಅವರನ್ನು ತಡೆಯಲಾಯಿತು. ಆವರಣದಲ್ಲಿ ನಿಯೋಜಿಸಲಾಗಿದ್ದ ‘ತಾಜ್ ಸುರಕ್ಷಾ’ದ ಪೊಲೀಸರು ಆಕೆಗೆ ಮುಂದೆ ಹೋಗಲು ಅವಕಾಶ ನೀಡಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಆಕೆಯನ್ನು ಪಶ್ಚಿಮ ದ್ವಾರದ ಬಳಿ ತಡೆಯಲಾಯಿತು. ಹೀಗಾಗಿ ಅವರಿಗೆ ತಾಜ್ ಮಹಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ನಂತರ, ರಾಜೇಶ್ವರ ದೇವಸ್ಥಾನದಲ್ಲಿ ಗಂಗಾಜಲವನ್ನು ಅರ್ಪಿಸಿದರು ” ಎಂದು ತಾಜ್ ಸುರಕ್ಷಾದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸೈಯದ್ ಆರೀಬ್ ಅಹ್ಮದ್ ಹೇಳಿದ್ದಾರೆ.

ತಾಜ್ ಮಹಲ್ ಅನ್ನು ಪ್ರಾಚೀನ ಶಿವ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಬಲಪಂಥೀಯ ಹಿಂದೂ ಗುಂಪುಗಳು ವಾದಿಸುತ್ತಿವೆ. ಅಂತೆಯೇ ಈ ವಾದವನ್ನು ಉಲ್ಲೇಖಿಸಿ ಮೀನು ರಾಥೋಡ್ “ತೇಜೋ ಮಹಾಲಯ” ದಲ್ಲಿ ‘ಗಂಗಾಜಲ’ ಅರ್ಪಿಸಲು ಅನುಮತಿ ನೀಡುವಂತೆ ಪೊಲೀಸ್ರಿಗೆ ಬೇಡಿಕೆ ಇಟ್ಟಿದ್ದರು.

ಅದು ತೇಜೋ ಮಹಾಲಯ’

ಘಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೀನು ರಾಥೋಡ್, ತನ್ನ ಕನಸಿನಲ್ಲಿ ಶಿವ ಬಂದಿದ್ದು ತೇಜೋ ಮಹಾಲಯದಲ್ಲಿ ಗಂಗಾಜಲವನ್ನು ಅರ್ಪಿಸಲು ಆದೇಶಿಸಿದ್ದ ಎಂದು ಹೇಳಿದ್ದಾರೆ. “ನಾನು ಗಂಗಾಜಲ ಅರ್ಪಿಸಲು ತೇಜೋ ಮಹಾಲಯಕ್ಕೆ ಬಂದಿದ್ದೇನೆ. ಭೋಲೆ ಬಾಬಾ ನನ್ನ ಕನಸಿನಲ್ಲಿ ನನ್ನ ಬಳಿಗೆ ಬಂದಿದ್ದರು. ನಾನು ತೇಜೋ ಮಹಾಲಯದಲ್ಲಿ ಅರ್ಪಿಸಲು ಕನ್ವರ್ ಅನ್ನು ತಂದಿದ್ದೆ . ಆದರೆ, ಪೊಲೀಸರು ನನ್ನನ್ನು ಮುಂದೆ ಹೋಗದಂತೆ ತಡೆದಿದ್ದಾರೆ ಎಂದು ರಾಥೋಡ್ ಹೇಳಿದ್ದಾರೆ.

ಇದನ್ನೂ ಓದಿ: NEET-UG : ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ

ಬಲಪಂಥೀಯ ಗುಂಪಿನ ವಕ್ತಾರ ಸಂಜಯ್ ಜಾಟ್​ ಅವರು “ತೇಜೋ ಮಹಾಲಯ” ಎಂಬುದನ್ನು ಪುನರುಚ್ಚರಿಸಿದರು. ತಾಜ್ ಮಹಲ್ ಶಿವನ ದೇವಾಲಯವಾಗಿರುವುದರಿಂದ ಗಂಗಾಜಲವನ್ನು ಅರ್ಪಿಸುವುದು “ನಮ್ಮ ಹಕ್ಕು” ಎಂದು ಪ್ರತಿಪಾದಿಸಿದರು.

ತಾಜ್ ಮಹಲ್ ಶಿವನ ದೇವಾಲಯವಾದ ‘ತೇಜೋ ಮಹಾಲಯ’ ಆಗಿರುವುದರಿಂದ ತಾಜ್ ಮಹಲ್​​ನಲ್ಲಿ ‘ಗಂಗಾ ಜಲ’ ಅರ್ಪಿಸುವುದು ನಮ್ಮ ಹಕ್ಕು. ಮೀನು ಅವರು ಕಾಸ್​ಗಂಜ್​ನ ಸೊರೊನ್ ಜಿಯಿಂದ ಕನ್ವರ್ ತಂದು ಎರಡು ದಿನಗಳ ನಂತರ ಆಗ್ರಾ ತಲುಪಿದ್ದರು ಎಂದು ಜಾಟ್ ಹೇಳಿದ್ದಾರೆ.

ತಾಜ್ ಮಹಲ್

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾದಲ್ಲಿ ಯಮುನಾ ನದಿಯ ದಡದಲ್ಲದೆ. ಇದು ಬಿಳಿ ಅಮೃತಶಿಲೆಯಲ್ಲಿ ನಿರ್ಮಿಸಿದ ಸಮಾಧಿಯಾಗಿದೆ. ಈ ಅಪ್ರತಿಮ ಸ್ಮಾರಕವನ್ನು ಕ್ರಿ.ಶ 1631 ರಲ್ಲಿ ಐದನೇ ಮೊಘಲ್ ಚಕ್ರವರ್ತಿ ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ನೆನಪಿನ ಸಮಾಧಿಯನ್ನು ಕಟ್ಟಿದ್ದ ಎಂದು ಇತಿಹಾಸ ಹೇಳುತ್ತದೆ.

ಈ ಸಂಕೀರ್ಣ ಸುಮಾರು 42 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಸಮಾಧಿಯು ಅದರ ಕೇಂದ್ರಬಿಂದುವಾಗಿದೆ. ಈ ಸಂಕೀರ್ಣವು ಮಸೀದಿ ಮತ್ತು ಅತಿಥಿ ಗೃಹ ಸಹ ಒಳಗೊಂಡಿದೆ/. ಉದ್ಯಾನಗಳಲ್ಲಿ ಮೂರು ಬದಿಗಳಲ್ಲಿ ಕ್ರೆನೆಲ್ಡ್ ಗೋಡೆಯಿಂದ ಸುತ್ತುವರೆದಿದೆ. ತಾಜ್ ಮಹಲ್ ನಲ್ಲಿ 1658 ರಲ್ಲಿ ನಿಧನರಾದ ಶಹಜಹಾನ್ ಅವರ ಸಮಾಧಿಯೂ ಇದೆ.

Exit mobile version