Site icon Vistara News

Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Tarsem Singh

ನವದೆಹಲಿ: ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ವಿದೇಶದಲ್ಲೂ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಯಶಸ್ವಿಯಾಗಿದೆ. ಖಲಿಸ್ತಾನಿ ಉಗ್ರ (Khalistan Terrorist) ತರ್ಸೇಮ್‌ ಸಿಂಗ್‌ನನ್ನು (Tarsem Singh) ಎನ್‌ಐಎ ಅಧಿಕಾರಿಗಳು ಯುಎಇಯ ಅಬುಧಾಬಿಯಲ್ಲಿ ಬಂಧಿಸಿದ್ದು, ಭಾರತಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ತರ್ಸೇಮ್‌ ಸಿಂಗ್‌ ವಿರುದ್ಧ ಎನ್‌ಐಎ ಅಧಿಕಾರಿಗಳು ಇದಕ್ಕೂ ಮೊದಲೇ ಜಾಮೀನು ರಹಿತ ವಾರಂಟ್‌ ಹೊರಡಿಸಿದ್ದರು. ಅದರಂತೆ, ಯುಎಇ ಅಧಿಕಾರಿಗಳು, ಇಂಟರ್‌ಪೋಲ್‌ ಜತೆ ಸಂಪರ್ಕ ಸಾಧಿಸಿ, ಹಸ್ತಾಂತರ ಪ್ರಕ್ರಿಯೆ ಮುಗಿಸಿ, ತರ್ಸೇಮ್‌ ಸಿಂಗ್‌ನನ್ನು ಅಬುಧಾಬಿಯಲ್ಲಿ ಬಂಧಿಸಿದ್ದಾರೆ.

ಪಂಜಾಬ್‌ನವನಾದ ತರ್ಸೇಮ್‌ ಸಿಂಗ್‌, ಉಗ್ರ ಲಖಬೀರ್‌ ಲಾಂಡಾನ ಸಹೋದರನಾಗಿದ್ದಾನೆ. ಈತನು ಮತ್ತೊಬ್ಬ ಉಗ್ರ ಹರ್ವಿಂದರ್‌ ಸಿಂಗ್‌ ರಿಂಡಾನ ಆಪ್ತನೂ ಆಗಿದ್ದಾನೆ. ಈತನು ಬಬ್ಬರ್‌ ಖಲಿಸ್ತಾನ ಇಂಟರ್‌ನ್ಯಾಷನಲ್‌ (BKI) ಉಗ್ರ ಸಂಘಟನೆಯ ಸದಸ್ಯನೂ ಆಗಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. 2023ರ ನವೆಂಬರ್‌ನಲ್ಲಿ ಅಬುಧಾಬಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಎನ್‌ಐಎ ವಿಶೇಷ ನ್ಯಾಯಾಲಯವು ವಾರಂಟ್‌ ಹೊರಡಿಸಿದ ಬಳಿಕ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು.

ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿದ ಬಳಿಕ 2023ರಲ್ಲಿ ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರನನ್ನು ವಶಪಡಿಸಿಕೊಳ್ಳಲಾಗಿತ್ತು ಇದಾದ ಬಳಿಕ ಎನ್‌ಐಎ ಅಧಿಕಾರಿಗಳು ಯುಎಇ, ಇಂಟರ್‌ಪೋಲ್‌ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಸಮರ್ಪಕ ದಾಖಲೆಗಳನ್ನು ಒದಗಿಸಿ, ಯುಎಇಗೆ ತೆರಳಿ, ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ತರ್ಸೇಮ್‌ ಸಿಂಗ್‌ನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಎನ್‌ಐಎ ಅಧಿಕಾರಿಗಳು ಆತನನ್ನು ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಉಗ್ರ ಚಟುವಟಿಕೆಗಳ ಹಿನ್ನೆಲೆಯಲ್ಲಿ ತರ್ಸೇಮ್‌ ಸಿಂಗ್‌ ವಿರುದ್ಧ ಎನ್‌ಐಎ 2022ರ ಆಗಸ್ಟ್‌ನಲ್ಲಿ ಸುಮೋಟೊ (ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದು) ಕೇಸ್‌ ದಾಖಲಿಸಿಕೊಂಡಿತ್ತು. ಖಲಿಸ್ತಾನ ಲಿಬರೇಷನ್‌ ಫೊರ್ಸ್‌, ಬಿಕೆಐ, ಇಂಟರ್‌ನ್ಯಾಷನಲ್‌ ಸಿಖ್‌ ಯೂತ್‌ ಫೆಡರೇಷನ್‌ ಸೇರಿ ಹಲವು ಉಗ್ರ ಸಂಘಟನೆಗಳು ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುಮೋಟೊ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ತರ್ಸೇಮ್‌ ಸಿಂಗ್‌ ಕೃತ್ಯಗಳು ಬಯಲಾಗಿವೆ. ಇದಾದ ಬಳಿಕ ಎನ್‌ಐಎ ತನಿಖೆ ಚುರುಕುಗೊಳಿಸಿದೆ.

ಇದನ್ನೂ ಓದಿ: Khalistani Terrorist: ಖಲಿಸ್ತಾನಿ ಭಯೋತ್ಪಾದಕ ಲಾಂಡಾನ ಪ್ರಮುಖ ಸಹಾಯಕ ಬಲ್ಜೀತ್ ಸಿಂಗ್ ಬಂಧನ

Exit mobile version