ಪ್ಯಾರಿಸ್/ನವದೆಹಲಿ: ಬೃಹತ್ ಏರ್‌ಬಸ್ ಮತ್ತು ಬೋಯಿಂಗ್ ಸೇರಿದಂತೆ ಸುಮಾರು 500 ಪ್ರಯಾಣಿಕ ವಿಮಾನಗಳ ಖರೀದಿಗೆ ಟಾಟಾ ಒಡೆತನದ(TATA Group) ಏರ್ ಇಂಡಿಯಾ (Air India) ಮುಂದಾಗಿದೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಕಂಪನಿಯು ನೂರಾರು ಕೋಟಿ ಡಾಲರ್ ಮೌಲ್ಯದ ಆರ್ಡರ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಟಾಟಾ ಕಂಪನಿಯು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖರೀದಿಸಿದ ಬಳಿಕ, ಅದನ್ನು ಪುನಃಶ್ಚೇತನಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಈ ಬೃಹತ್ ವಿಮಾನಗಳ ಖರೀದಿ ಆರ್ಡರ್‌ನಲ್ಲಿ 400 ಚಿಕ್ಕ ಗಾತ್ರದ ವಿಮಾನಗಳು ಮತ್ತು ಏರ್ ಬಸ್ ಎ350ಎಬಸ್ ಮತ್ತು ಬೋಯಿಂಗ್ 787ಎಸ್ ಮತ್ತು 777ಎಸ್ ಸೇರಿದಂತೆ 100 ಬೃಹತ್ ರೆಕ್ಕೆಯ ವಿಮಾನಗಳಿವೆ. ಈ ಬೃಹತ್ ಮೌಲ್ಯದ ಆರ್ಡರ್ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಟಾಟಾ ಗ್ರೂಪ್, ಏರ್‌ಬಸ್ ಮತ್ತು ಬೋಯಿಂಗ್ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಇದನ್ನೂ ಓದಿ | Air India-Vistara | ಏರ್ ಇಂಡಿಯಾದಲ್ಲಿ ವಿಸ್ತಾರ ವಿಲೀನಕ್ಕೆ ಅಂತಿಮ ಒಪ್ಪಿಗೆ ನೀಡಿದ ಸಿಂಗಪುರ ಏರ್‌ಲೈನ್ಸ್