ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ (Tata Motors) ಟ್ರಕ್ ಗಳ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಲು ಸಹಕಾರಿಯಾಗುವ ತಂತ್ರಜ್ಞಾನ –ಸುಧಾರಿತ ಎಂಜಿನ್ ಆದ ಟರ್ಬೋಟ್ರಾನ್ 2.0(Turbotronn 2.0) ಅನ್ನು ಪರಿಚಯಿಸಿದೆ. ಈ ಮೂಲಕ ಟ್ರಕ್ಕಿಂಗ್ ವ್ಯವಸ್ಥೆಯ ಶ್ರೇಷ್ಠತೆಯನ್ನು ಹೆಚ್ಚಿಸಲಿದೆ. ಹೆಚ್ಚು ಇಂಧನ ದಕ್ಷತೆ ಮತ್ತು ವಿಶ್ವಾಸಾರ್ಹವಾದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಈ ಬಹುಮುಖ ಎಂಜಿನ್ ಟಾಟಾ ಟ್ರಕ್ ಗಳಿಗೆ 19-42 ಟನ್ ಶ್ರೇಣಿಯಾದ್ಯಂತ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್, ಲಾಜಿಸ್ಟಿಕ್ಸ್, ಪಾರ್ಟೆಲ್ ಮತ್ತು ಕೊರಿಯರ್ ವಿಭಾಗಗಳಿಗೆ ಸಂಪೂರ್ಣವಾಗಿ ಸಹಕಾರಿಯಾಗಿರುವ ಎಂಜಿನ್ ಇದಾಗಿದೆ.
ಟರ್ಬೋಟ್ರಾನ್ 2.0 ಎಂಜಿನ್ ಅನ್ನು ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಚಾಲನಾ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಮಾಲೀಕತ್ವದ ವೆಚ್ಚವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಅಂತರ್ಗತ ಪ್ರಯೋಜನಗಳೊಂದಿಗೆ ದೃಢವಾದ ಕಾರ್ಯಕ್ಷಮತೆಯನ್ನು ನೀಡುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಎಂಜಿನ್ ಅನ್ನು ಸುಮಾರು 70,000 ಗಂಟೆಗಳು ಮತ್ತು 30 ಲಕ್ಷ ಕಿಲೋಮೀಟರ್ ವರೆಗೆ ದುರ್ಗಮ ರಸ್ತೆಗಳು ಸೇರಿದಂತೆ ಎಲ್ಲಾ ಬಗೆಯ ಭೂಪ್ರದೇಶಗಳಲ್ಲಿ ಕಠಿಣವಾದ ರೀತಿಯಲ್ಲಿ ಪರೀಕ್ಷಿಸಲಾಗಿದೆ. BS6 ನ 2 ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಸಂಪೂರ್ಣವಾಗಿ ಅನುಸರಿಸಲಾಗಿರುವ ಈ ಟರ್ಬೋಟ್ರಾನ್ 2.0 ಒಂದು ಅತ್ಯುತ್ಕೃಷ್ಠತೆಯನ್ನು ಹೊಂದಿರುವ ಎಂಜಿನ್ ಆಗಿದೆ. ಇದಲ್ಲದೇ, ಸಿಗ್ನಾ, ಅಲ್ಟ್ರಾ, LPT ಮತ್ತು ಕೌಲ್ ಪ್ಲಾಟ್ ಫಾರ್ಮ್ ನೊಂದಿಗೆ ನೀಡಲಾಗುತ್ತದೆ. ಇದಕ್ಕೆ 6 ವರ್ಷಗಳು/6 ಲಕ್ಷ ಕಿಲೋಮೀಟರ್ ವಾರಂಟಿ ಇರುತ್ತದೆ.
5 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ದಕ್ಷ ಮತ್ತು ಬಹುಮುಖ ಟರ್ಬೋಟ್ರೋನ್ 2.0 ಅನ್ನು 180-204 PS ವರೆಗಿನ ಟ್ಯೂನ್ ನ ಬಹು ಸ್ಥಿತಿಗಳಲ್ಲಿ ನೀಡಲಾಗುತ್ತದೆ. ಅಲ್ಲದೇ ಉತ್ತ, ಡ್ರೈವಿಬಿಲಿಟಿಗಾಗಿ 700-850 Nm ವ್ಯಾಪ್ತಿಯಲ್ಲಿ ಫ್ಲಾಟರ್ ಟಾರ್ಕ್ ಕರ್ವ್ ಅನ್ನು ನೀಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ದೀರ್ಘ ಇಂಧನ ಹರಿವು ಮತ್ತು 1 ಲಕ್ಷ ಕಿಲೋಮೀಟರ್ ಸೇವಾ ಮಧ್ಯಂತರಗಳಂತಹ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದು, ಹೆಚ್ಚಿನ ಆದಾಯವನ್ನು ಗಳಿಸುವ ದಿಸೆಯಲ್ಲಿ ಹೆಚ್ಚಿನ ವಾಹನದ ಸಮಯವನ್ನು ಖಚಿತಪಡಿಸುತ್ತದೆ.
ಈ ಹೊಸ ಟರ್ಬೋರ್ಟಾನ್ 2.0 ಅನ್ನು ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಮೋಟರ್ಸ್ ನ ಅಧ್ಯಕ್ಷ ಮತ್ತು ಚೀಫ್ ಟೆಕ್ನಾಲಜಿ ಆಫೀಸರ್ ರಾಜೇಂದ್ರ ಪೇಟ್ಕರ್ ಅವರು, “ಟರ್ಬೋಟ್ರಾನ್ 2.0 ನಮ್ಮ ಅತ್ಯಾಧುನಿಕ ಆಂತರಿಕ ಕಂಬಷನ್ ಎಂಜಿನ್ ಗಳಲ್ಲಿ ಒಂದಾಗಿದೆ. ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಎಂಜಿನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಕಡಿಮೆ ಸಮಯದಲ್ಲಿ ಹೆಚ್ಚು ದೂರವನ್ನು ಕ್ರಮಿಸಲು ಟ್ರಕ್ ಗಳನ್ನು ಶಕ್ತಗೊಳಿಸುತ್ತದೆ. ಇದರ ದೃಢವಾದ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಇಂಧನ ದಕ್ಷತೆಯು ಭಾರತದಲ್ಲಿ ಟ್ರಕ್ ಸಂಚಾರಕ್ಕೆ ಹೊಸ ಉದ್ಯಮ ಮಾನದಂಡಗಳನ್ನು ಹೊಂದಿಸಿದಂತಾಗಿದೆ’’ ಎಂದರು.
ಟಾಟಾ ಮೋಟರ್ಸ್ ನ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಬ್ಯುಸಿನೆಸ್ ಹೆಡ್ ರಾಜೇಶ್ ಕೌಲ್ ಅವರು ಮಾತನಾಡಿ, “ಟಾಟಾ ಮೋಟರ್ಸ್ ನಲ್ಲಿ ನಾವು ಗ್ರಾಹಕರೊಂದಿಗೆ ನಿಕಟ ಪಾಲುದಾರಿಕೆಯನ್ನು ಹೊಂದಿದ್ದು, ಅವರ ವ್ಯವಹಾರಗಳನ್ನು ಏಳಿಗೆ ಆಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಟರ್ಬೋಟ್ರಾನ್ 2.0 ಅನ್ನು ಸಾರಿಗೆ ಉದ್ಯಮಿಗಳ ಅಭಿಲಾಷೆಯಂತೆ ವ್ಯಾಪಕವಾದ ಒಳಹರಿವಿನೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಹೆಚ್ಚು ಸ್ಪರ್ಧಾತ್ಮಕ ಉದ್ಯಮಕ್ಕೆ ಅವುಗಳನ್ನು ಒದಗಿಸುತ್ತಿದ್ದೇವೆ. ಈ ಎಂಜಿನ್ ನ ಉತ್ಕೃಷ್ಟ ಮೌಲ್ಯವು ಟ್ರಕ್ಕಿಂಗ್ ಅನ್ನು ಹೆಚ್ಚು ತಡೆರಹಿತ, ದಕ್ಷ ಮತ್ತು ವಿಶ್ವಾಸಾರ್ಹವಾಗಿಸುತ್ತದೆ. ಈ ಮೂಲಕ ಟ್ರಕ್ ಚಾಲಕರಿಗೆ ಮತ್ತು ಮಾಲೀಕರಿಗೆ ಹೆಚ್ಚಿನ ಆದಾಯ ತರುತ್ತದೆ ಹಾಗೂ ವೆಚ್ಚವನ್ನು ಕಡಿಮೆ ಮಾಡುತ್ತದೆ’’ ಎಂದು ಹೇಳಿದರು.
ವಿಶ್ವಾಸಾರ್ಹತೆಯ ಪರೀಕ್ಷೆಯ ಭಾಗವಾಗಿ ಟಾಟಾ ಮೋಟರ್ಸ್ ತನ್ನ ಟಾಟಾ ಅಲ್ಟ್ರಾ T.19 ನೊಂದಿಗೆ 30 ದಿನಗಳ ಸಹಿಷ್ಣುತೆಯ ಸಂಚಾರವನ್ನು ಆರಂಭಿಸಿತು. ಇದು ಟರ್ಬೋಟ್ರಾನ್ 2.0 ಎಂಜಿನ್ ನಿಂದ ಚಲಾಯಿಸಲ್ಪಡುತ್ತದೆ. ಬಾಳಿಕೆ ಮತ್ತು ದಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಸ್ಥಾಪಿಸವು ಭಾರತದ ಮಹಾನಗರಗಳನ್ನು ಸಂಪರ್ಕಿಸುವ ನಿರ್ಣಾಯಕ ರಾಷ್ಟ್ರೀಯು ಹೆದ್ದಾರಿ ಜಾಲವಾದ ಗೋಲ್ಡನ್ ಕ್ವಾಡ್ರಿಲ್ಯಾಟರಲ್ ನಲ್ಲಿ ತಡೆರಹಿತ ಸಂಚಾರವನ್ನು ಮಾಡುವುದು ಗುರಿಯಾಗಿತ್ತು. ಟಾಟಾ ಅಲ್ಟ್ರಾ T.19 ಗೋಲ್ಡನ್ ಕ್ವಾಂಡ್ರ್ಯಾಂಗಲ್ ನಲ್ಲಿ 9 ರೌಂಡ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದಲ್ಲದೇ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಎರಡರಲ್ಲೂ 9 ದಾಖಲೆಗಳನ್ನು ಪಡೆದುಕೊಂಡಿದೆ. ಈ ಅಸಾಧಾರಣ ಸಾಧನೆಗಳು ದಕ್ಷ ಮತ್ತು ವಿಶ್ವಾಸಾರ್ಹ ಟರ್ಬೋಟ್ರಾನ್ 2.0 ಎಂಜಿನ್ ಚಾಲಿತ ಟಾಟಾ ಅಲ್ಟ್ರಾ T.19 ನಿಂದ ಸಾಧ್ಯವಾಗಿದೆ. ಇದು ವಾಣಿಜ್ಯ ವಾಹನಗಳ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಲ್ಪಟ್ಟಿದೆ.
ಈ ಸುದ್ದಿಯನ್ನೂ ಓದಿ: EXCON 2023: ಎಕ್ಸ್‌ಕಾನ್‌ನಲ್ಲಿ ಟಾಟಾ ಮೋಟರ್ಸ್‌ನ ಎಲ್‌ಎನ್‌ಜಿ ಚಾಲಿತ ವಾಣಿಜ್ಯ ವಾಹನಗಳು ಲಾಂಚ್