Site icon Vistara News

Tata Tech: ‘ಟಾಟಾ’ ಐಪಿಒ ಖರೀದಿಸಿದವರಿಗೆ ಧಮಾಕಾ; ಷೇರುಗಳ ಮೌಲ್ಯ ಡಬಲ್!

Tata Tech

Tata Tech doubles investors' wealth, lists at 140% premium over IPO price

ಮುಂಬೈ: ಟಾಟಾ ಗ್ರೂಪ್‌ನ (Tata Group) ಟಾಟಾ ಟೆಕ್ನಾಲಜೀಸ್‌ ಕಂಪನಿಯು ಷೇರು ಪೇಟೆ ಪ್ರವೇಶಿಸಿದ ಮೊದಲ ದಿನವೇ ಹೂಡಿಕೆದಾರರ ಖುಷಿಯನ್ನು ಹೆಚ್ಚಿಸಿದೆ. ಟಾಟಾ ಟೆಕ್‌ (Tata Tech) ಆರಂಭಿಕ ಸಾರ್ವಜನಿಕ ಕೊಡುಗೆ (IPO) ಆರಂಭಿಸಿದ ಮೊದಲ ದಿನವೇ ಹೂಡಿಕೆದಾರರ ಷೇರುಗಳ ಮೌಲ್ಯವು ಖರೀದಿಗಿಂತ (Premium) ಎರಡು ಪಟ್ಟು ಹೆಚ್ಚಾಗಿದೆ. ಇದರಿಂದಾಗಿ, ಟಾಟಾ ಐಪಿಒ (Tata IPO) ಆರಂಭಿಸಿದ ಕೂಡಲೇ ಷೇರುಗಳನ್ನು ಖರೀದಿಸಿದವರಿಗೆ ಭರ್ಜರಿ ಲಾಭವಾಗಿದೆ.

ಟಾಟಾ ಟೆಕ್ನಾಲಜೀಸ್‌ ಕಂಪನಿಯು ನವೆಂಬರ್‌ 22ರಿಂದ 24ರವರೆಗೆ ಐಪಿಒ ಬಿಡ್‌ ಸಲ್ಲಿಸಲು ಅವಕಾಶ ನೀಡಿತ್ತು. ಅದರಂತೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದ್ದು, ಲಕ್ಷಾಂತರ ಜನ ಬಿಡ್‌ ಸಲ್ಲಿಸಿದ್ದರು. ಅದರಂತೆ ಷೇರುಗಳ ಹಂಚಿಕೆಯಾಗಿ, ಗುರುವಾರ (ನವೆಂಬರ್‌ 30) ಟಾಟಾ ಟೆಕ್ನಾಲಜೀಸ್‌ ಕಂಪನಿಯು ಷೇರುಪೇಟೆ ಪ್ರವೇಶಿಸಿದೆ. ಇದಾದ ಕೆಲವೇ ಗಂಟೆಗಳಲ್ಲಿ ಟಾಟಾ ಟೆಕ್ನಾಲಜೀಸ್‌ನ ಒಂದು ಷೇರಿನ ಮೌಲ್ಯವು ಎನ್‌ಎಸ್‌ಇನಲ್ಲಿ (NSE) 1,200 ರೂ. ಆದರೆ, ಬಿಎಸ್‌ಇನಲ್ಲಿ (BSE) 1,199 ರೂ. ಆಗಿದೆ. ಇದರೊಂದಿಗೆ ಹೂಡಿಕೆದಾರರ ಷೇರುಗಳ ಮೌಲ್ಯವು ದ್ವಿಗುಣವಾದಂತಾಗಿದೆ.

ಐಪಿಒ ಮೂಲಕ ಟಾಟಾ ಗ್ರೂಪ್‌ನ ಟಾಟಾ ಟೆಕ್ನಾಲಜೀಸ್‌ ಕಂಪನಿಯು ಸುಮಾರು 3 ಸಾವಿರ ಕೋಟಿ ರೂ.ಗಿಂತ ಅಧಿಕ ಹಣ ಸಂಗ್ರಹಿಸುವ ಗುರಿಯೊಂದಿಗೆ ಷೇರು ಮಾರುಕಟ್ಟೆ ಪ್ರವೇಶಿಸಿದೆ. ಟಾಟಾ ಟೆಕ್ನಾಲಜೀಸ್‌ ಕಂಪನಿಯ ಬಿಡ್‌ಗೆ ಭಾರಿ ಸ್ಪಂದನೆ ವ್ಯಕ್ತವಾಗಿ, 73.38 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಒಂದು ಷೇರಿಗೆ 475 ರೂ.ನಿಂದ 500 ರೂ. ನಿಗದಿಪಡಿಸಲಾಗಿತ್ತು. ಅದರಂತೆ, ಜನ ಷೇರು ಖರೀದಿಸಿದ್ದರು. ಈಗ ಮೊದಲ ದಿನವೇ ಷೇರುಗಳ ಮೌಲ್ಯವು ದ್ವಿಗುಣಗೊಂಡಿರುವುದು ಷೇರು ಖರೀದಿದಾರರ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: Raja Marga Column : ಸುಧಾಮೂರ್ತಿ ಚೇಂಬರಿನಲ್ಲಿ ಟಾಟಾ ಅವರ ಫೋಟೊ ಯಾಕಿದೆ?

ಸುಮಾರು ಎರಡು ದಶಕಗಳಲ್ಲಿಯೇ ಟಾಟಾ ಗ್ರೂಪ್‌ನ ಕಂಪನಿಯೊಂದು ಐಪಿಒ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸಿದಂತಾಗಿದೆ. 2004ರಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ ಐಪಿಒ ಪ್ರವೇಶಿಸಿತ್ತು. ಇದಾದ ಬಳಿಕ ಟಾಟಾ ಗ್ರೂಪ್‌ನ ಯಾವುದೇ ಕಂಪನಿಯು ಐಪಿಒ ಪ್ರವೇಶಿಸಿರಲಿಲ್ಲ. ಪ್ರಸಕ್ತ ವಿತ್ತೀಯ ವರ್ಷದ ಮೊದಲಾರ್ಧದಲ್ಲಿ ಐಪಿಒ ಮೂಲಕ ಕಂಪನಿಗಳು ಬಂಡವಾಳ ಸಂಗ್ರಹಿಸುವ ಪ್ರಮಾಣವು ಶೇ.26ರಷ್ಟು ಕುಸಿದಿದೆ ಎಂದು ಅಕ್ಟೋಬರ್‌ನಲ್ಲಿ ಪ್ರೈಮ್‌ ಡೇಟಾಬೇಸ್‌ ಸಂಸ್ಥೆ ವರದಿ ನೀಡಿತ್ತು. ಆದರೆ, ಟಾಟಾ ಟೆಕ್‌ ಐಪಿಒಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ.

Exit mobile version