Site icon Vistara News

Answer Sheet: ಪಾಸು ಮಾಡುವಂತೆ ಉತ್ತರ ಪತ್ರಿಕೆಯಲ್ಲಿ ನೋಟುಗಳನ್ನಿಟ್ಟ ವಿದ್ಯಾರ್ಥಿ

Notes

ನವದೆಹಲಿ: ಪರೀಕ್ಷೆ ಪಾಸಾಗಲು ವಿದ್ಯಾರ್ಥಿಗಳು ನಕಲು ಮಾಡುವ ಪ್ರಯತ್ನಗಳು ನಡೆಯುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವಿದ್ಯಾರ್ಥಿಯು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು(Answer Sheet) ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ (Teacher) ಲಂಚ ನೀಡುವ ಪ್ರಯತ್ನ ಮಾಡಿದ್ದಾನೆ. ತಾನು ಬರೆದ ಉತ್ತರ ಪತ್ರಿಕೆಯಲ್ಲಿ ನೋಟು ಇಟ್ಟು(Currency in Answer Sheet), ಪಾಸು ಮಾಡುವಷ್ಟು ಅಂಕಗಳನ್ನು ನೀಡುವಂತೆ ವಿನಂತಿಸಿಕೊಂಡಿದ್ದಾನೆ. ಈ ಸಂಬಂಧ ಪೋಸ್ಟ್ ಟ್ವಿಟರ್‌ನಲ್ಲಿ(ಈಗ ಎಕ್ಸ್- X App) ವೈರಲ್ ಆಗಿದೆ(Viral News). ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ಅವರು ಈ ಕುರಿತಾದ ಮಾಹಿತಿಯನ್ನು ಟ್ವಿಟರ್‌ನಲ್ಲಿ ಷೇರ್ ಮಾಡಿದ್ದಾರೆ. ಅವರ ಪೋಸ್ಟ್‌ನಲ್ಲಿ ವಿದ್ಯಾರ್ಥಿ ಲಗತಿಸಿದ್ದ ನೋಟುಗಳನ್ನು ಕಾಣಬಹುದಾಗಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮಧ್ಯೆ ಚರ್ಚೆಗೆ ಕಾರಣವಾಗಿದೆ.

ಈ ಚಿತ್ರವನ್ನು ಟೀಚರ್ ಕಳುಹಿಸಿದ್ದಾರೆ. ಪಾಸಿಂಗ್ ಮಾರ್ಕ್ಸ್ ಕೊಡುವಂತೆ ಟೀಚರ್‌ಗೆ ವಿನಂತಿಯೊಂದಿಗೆ ಈ ನೋಟುಗಳನ್ನು ಉತ್ತರ ಪ್ರತಿಕೆಯಲ್ಲಿ ಇಡಲಾಗಿತ್ತು. ಈ ಚಿತ್ರವು ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಾಕಷ್ಟು ಮಾತನಾಡುತ್ತದೆ ಎಂದು ಐಪಿಎಸ್ ಅಧಿಕಾರಿ ಬೋಥ್ರಾ ಅವರು ಟ್ವೀಟ್ ಮಾಡಿದ್ದಾರೆ.

ಈ ಪೋಸ್ಟ್ ಆಗಸ್ಟ್ 21ರಂದು ಷೇರ್ ಮಾಡಲಾಗಿದೆ. ಈವರೆಗೂ ಒಂದು ಲಕ್ಷ ವಿವ್ಸ್ ದಾಟಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. 1200ಕ್ಕೂ ಹೆಚ್ಚು ಲೈಕ್ಸ್ ದೊರೆತಿದ್ದು, ಸಾಕಷ್ಟು ಜನರು ಈ ಪೋಸ್ಟ್‌ಗೆ ಕಮೆಂಟ್ ಮಾಡುತ್ತಿದ್ದಾರೆ.

ನನ್ನ ಪೇಪರ್ ತಿದ್ದುಪಡಿ ದಿನಗಳಲ್ಲಿ ಇದು ನನಗೆ ಕನಿಷ್ಠ ಮೂರು ಬಾರಿ ಸಂಭವಿಸಿದೆ! 20 ವರ್ಷಗಳ ಹಿಂದೆ ನನ್ನ ಸಹೋದ್ಯೋಗಿಗಳಿಗೆ ಇದೇ ರೀತಿಯಾಗಿತ್ತು. ಹಣವು ಸಾಮಾನ್ಯವಾಗಿ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಗಳ ಬದಲಿಗೆ ದುಃಖದ ಕಥೆಯ ನಿರೂಪಣೆಯೊಂದಿಗೆ ಇರುತ್ತದೆ. ಅಂತಹ ವಿದ್ಯಾರ್ಥಿಗಳು ಸಾಮಾನ್ಯವಾಗಿ ವಿಫಲರಾಗುತ್ತಾರೆ ಎಂದು ಹೇಳಬೇಕಾಗಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral video: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಬೆಂಕಿ ಎಸೆದು ಕೋಲಾಹಲ ಸೃಷ್ಟಿಸಿದ ಮಹಿಳೆ!

ನನ್ನ ಅಜ್ಜಿ ಶಿಕ್ಷಕರಾಗಿದ್ದರು. ನಾನು ಚಿಕ್ಕವನಿದ್ದಾಗ ಮತ್ತು ಒಂದು ಬೇಸಿಗೆಯಲ್ಲಿ ಭೇಟಿ ನೀಡಿದಾಗ ಅವರು ಮನೆಗೆ ಬೋರ್ಡ್ ಪರೀಕ್ಷೆಯ ಉತ್ತರದ ಪ್ರತಿಗಳನ್ನು ಪರೀಕ್ಷಿಸಲು ತರುತ್ತಿದ್ದರು. ಇದು 15-20 ವರ್ಷಗಳ ಹಿಂದಿನ ಮಾತು. ಆಗ 20ರಿಂದ 100 ರೂ.ವರೆಗೆ ನೋಟುಗಳು ಉತ್ತರ ಪತ್ರಿಕೆಯಲ್ಲಿ ಇರುವುದನ್ನು ಗಮನಿಸಿದ್ದೇನೆ. ಆದರೂ , ಅವರ ಬರೆದ ಉತ್ತರಕ್ಕೆ ಅನುಗುಣವಾಗಿಯೇ ಅವರು ಮಾರ್ಕ್ಸ್ ನೀಡುತ್ತಿದ್ದರು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದರು.

Viral News : ಅಂತ್ಯಸಂಸ್ಕಾರ ಮಾಡಲಾಗಿದ್ದ ಮಗಳು ವಿಡಿಯೊ ಕಾಲ್‌ ಮಾಡಿದಳು!

ಅಂತ್ಯಸಂಸ್ಕಾರವಾಗಿದ್ದ ಮಗಳು ಕೆಲವು ದಿನಗಳ ನಂತರ ಕುಟುಂಬಕ್ಕೆ ವಿಡಿಯೊ ಕಾಲ್‌ ಮಾಡಿ ತಾನಿನ್ನೂ ಬದುಕಿದ್ದೇನೆ ಎಂದು ಹೇಳಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ವೈರಲ್‌ (Viral News) ಆಗಿದೆ.

ಪುರ್ಣಿಯಾ ಪಟ್ಟಣದಲ್ಲಿ ವಾಸವಾಗಿದ್ದ ಅಂಶು ಕುಮಾರಿ ಹೆಸರಿನ ಯುವತಿ ತಿಂಗಳ ಹಿಂದೆ ತನ್ನ ಪ್ರಿಯತಮನೊಂದಿಗೆ ಓಡಿ ಹೋಗಿದ್ದಳು. ಆಕೆ ಓಡಿಹೋದ ನಂತರ ಆಕೆಗಾಗಿ ಇಡೀ ಕುಟುಂಬ ಎಲ್ಲ ಕಡೆಗಳಲ್ಲಿ ಹುಡುಕಾಡಿತ್ತು. ಮಗಳು ಕಾಣೆಯಾಗಿರುವುದಾಗಿ ಪೊಲೀಸರಿಗೂ ದೂರು ನೀಡಲಾಗಿತ್ತು. ಕಳೆದ ವಾರ ಸ್ಥಳೀಯ ನೀರಿನ ಕಾಲುವೆಯಲ್ಲಿ ಯುವತಿಯ ದೇಹವೊಂದು ಸಿಕ್ಕಿತ್ತು. ಶವದ ಗುರುತು ಹಿಡಿಯುವ ಪರಿಸ್ಥಿತಿಯಲ್ಲಿ ಇರಲಿಲ್ಲವಾದ್ದರಿಂದ ಪೊಲೀಸರು ಅಂಶು ಕುಮಾರಿ ಕುಟುಂಬವನ್ನು ಕರೆಸಿದ್ದರು. ಸ್ಥಳಕ್ಕೆ ಬಂದ ಅಂಶು ಕುಮಾರಿ ಕುಟುಂಬ ಶವ ತೊಟ್ಟಿದ್ದ ಉಡುಪನ್ನು ನೋಡಿ ಅದು ತಮ್ಮದೇ ಮಗಳು ಎಂದು ಹೇಳಿದ್ದರು.

ನಂತರ ಶವವನ್ನು ಅಂಶು ಕುಮಾರಿ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಮಗಳ ಸಾವಿನಿಂದಾಗಿ ಅಂಶು ಕುಮಾರಿ ತಂದೆ ತೀವ್ರ ನೊಂದಿದ್ದರು. ಅವರ ಕೈನಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೂ ಸಾಧ್ಯವಾಗಿಲ್ಲವಾದ್ದರಿಂದ ಯುವತಿಯ ಅಜ್ಜನೇ ಅಂತಿಮ ಕಾರ್ಯಗಳನ್ನು ನಡೆಸಿದ್ದರು.

ಇದಾದ ಕೆಲ ದಿನಗಳಲ್ಲಿ ಅಂಶು ಕುಮಾರಿ ತನ್ನ ಕುಟುಂಬಸ್ಥರಿಗೆ ವಿಡಿಯೊ ಕಾಲ್‌ ಮಾಡಿದ್ದಾಳೆ. “ನಾನಿನ್ನೂ ಬದುಕೇ ಇದ್ದೇನೆ” ಎಂದು ಅಂಶು ಕುಮಾರಿ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ತಾನು ಹುಡುಗನೊಬ್ಬನನ್ನು ಪ್ರೀತಿಸಿದ್ದು, ಆತನನ್ನು ಮದುವೆಯಾಗಲೆಂದು ಆತನೊಂದಿಗೆ ಓಡಿಬಂದಿರುವುದಾಗಿ ತಿಳಿಸಿದ್ದಾಳೆ. ಸದ್ಯ ಅತ್ತೆ ಮಾವ ಮತ್ತು ಆ ಯುವಕನೊಂದಿಗೆ ಜಾನಕಿ ನಗರದಲ್ಲಿ ವಾಸವಿರುವುದಾಗಿ ತಿಳಿಸಿದ್ದಾಳೆ. ಪೊಲೀಸರು ಕೂಡ ಆಕೆಗೆ ಕರೆ ಮಾಡಿ ವಿಚಾರವನ್ನು ಸ್ಪಷ್ಟಪಡಿಸಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ನ್ಯೂಸ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version