ಹೈದರಾಬಾದ್: ಶತಮಾನಗಳ ಹಿಂದೆ ಶೀಲವತಿ ಎಂಬುದನ್ನು ಸಾಬೀತುಪಡಿಸಲು, ಪತಿ ತೀರಿಕೊಂಡ ಬಳಿಕ ಮಹಿಳೆಯರು ಅಗ್ನಿ ಪರೀಕ್ಷೆ ಎದುರಿಸುತ್ತಿದ್ದರು, ಅಗ್ನಿ ಪ್ರವೇಶ ಮಾಡುತ್ತಿದ್ದರು. ಶ್ರೀರಾಮನ ಪತ್ನಿ ಸೀತೆಯೂ ಅಗ್ನಿಪರೀಕ್ಷೆ ಎದುರಿಸಿದ್ದರು. ಆಧುನಿಕ ಕಾಲದಲ್ಲಿ ಇಂತಹ ಪದ್ಧತಿಗಳೆಲ್ಲ ಗೌಣವಾಗಿವೆ. ಆದರೆ, ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ತಾನು ಸಹೋದರನ ಹೆಂಡತಿ (ಅತ್ತಿಗೆ) ಜತೆ ಸಂಬಂಧ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಲು ಅಗ್ನಿಪ್ರವೇಶ (Man Takes Agnipariksha) ಮಾಡಿದ್ದಾನೆ.
ತೆಲಂಗಾಣದ ಬಂಜಾರುಪಳ್ಳಿ ಗ್ರಾಮದಲ್ಲಿ ಅತ್ತಿಗೆ ಜತೆ ಸಂಬಂಧ ಹೊಂದಿರುವ ಕುರಿತು ವ್ಯಕ್ತಿ ವಿರುದ್ಧ ಆರೋಪಗಳು ಕೇಳಿಬಂದಿವೆ. ಬಳಿಕ ಗ್ರಾಮದಲ್ಲಿ ಪಂಚಾಯಿತಿ ನಡೆಸಿ ವಿಚಾರಣೆ ಮಾಡಲಾಗಿದ್ದು, ವ್ಯಕ್ತಿಯು ತಾನು ಸಂಬಂಧ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಲು ಅಗ್ನಿಪ್ರವೇಶ ಮಾಡಬೇಕು ಎಂಬುದಾಗಿ ಮುಖಂಡರು ತೀರ್ಪು ಹೊರಡಿಸಿದ್ದಾರೆ. ಅದರಂತೆ ವ್ಯಕ್ತಿಯು ಅಗ್ನಿ ಪ್ರವೇಶ ಮಾಡಿ, ಬೆಂಕಿಯಲ್ಲಿದ್ದ ರಾಡ್‌ಅನ್ನು ಕೈಯಿಂದಲೇ ತೆಗೆದುಹಾಕಿದ್ದಾನೆ.
ಅಗ್ನಿ ಪ್ರವೇಶದ ಬಳಿಕವೂ ಗ್ರಾಮದ ಮುಖಂಡರು ಸುಮ್ಮನಾಗಿಲ್ಲ. ನೀನು ಸಂಬಂಧ ಹೊಂದಿರುವುದನ್ನು ಒಪ್ಪಿಕೊ ಎಂಬುದಾಗಿ ಒತ್ತಾಯಿಸಿದ್ದಾರೆ. ಇದಾದ ಬಳಿಕ ಆರೋಪ ಹೊತ್ತ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ಬಳಿಕ ಗ್ರಾಮದಲ್ಲಿ ಪರಿಸ್ಥಿತಿ ತಣ್ಣಗಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: IND VS AUS: ತಂಡದ ಕಳಪೆ ಪ್ರದರ್ಶನದ ಮಧ್ಯೆಯೂ ಮೈದಾನದಲ್ಲಿ ನೃತ್ಯ ಮಾಡಿದ ವಿರಾಟ್ ಕೊಹ್ಲಿ; ವಿಡಿಯೊ ವೈರಲ್