Site icon Vistara News

Terror Module Bust: ಪಂಜಾಬ್‌ನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಸಿಖ್ ಉಗ್ರರ ಜತೆ ನಂಟು ಹೊಂದಿದ್ದ ನಾಲ್ವರು ಅರೆಸ್ಟ್‌

terror module

ಚಂಡೀಗಢ: ಪಂಜಾಬ್‌ನಲ್ಲಿ ದರೋಡೆಕೋರ ವಿರೋಧಿ ಕಾರ್ಯಪಡೆ(AGTF) ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆ(Terror Module Bust) ಜೊತೆಗೆ ನಂಟು ಹೊಂದಿದ್ದ ನಾಲ್ವರನ್ನು ಹೆಡೆಮುರಿ ಕಟ್ಟಲಾಗಿದೆ. ಕಳೆದ ವರ್ಷ ಹತ್ಯೆಯಾಗಿದ್ದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌(Hardeep Singh Nijjar) ಆಪ್ತನ ನಿಯಂತ್ರಣದಲ್ಲಿದ್ದ ಉಗ್ರ ಸಂಘಟನೆ ಜೊತೆಗೆ ಈ ನಾಲ್ವರು ನಂಟು ಹೊಂದಿರುವವುದು ಖಚಿತವಾಗಿದೆ. ಇನ್ನು ಪ್ರಮುಖ ಆರೋಪಿ ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರನ್ನು ಅರೆಸ್ಟ್‌ ಮಾಡಿದ್ದಾರೆ.

ಪಂಜಾಬ್‌ ಡಿಜಿಪಿ ಗೌರವ್‌ ಯಾದವ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಗ್ರ ಸಂಘಟನೆ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಅರೆಸ್ಟ್‌ ಮಾಡಲಾಗಿದೆ. ಸಂಘಟನೆಯ ಮಾಸ್ಟರ್‌ ಮೈಂಡ್‌ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಿದೇಶದಲ್ಲಿ ನೆಲೆಸಿದ್ದ ಇಕ್ಬಾಲ್‌ಪ್ರಿತ್‌ ಸಿಂಗ್‌ ಅಲಿಯಾಸ್‌ ಬುಚಿ ಎಂಬಾತ ನಡೆಸುತ್ತಿದ್ದ ಉಗ್ರ ಸಂಘಟನೆಯ ಜೊತೆಗೆ ಬಂಧಿತ ನಾಲ್ವರು ನಂಟು ಹೊಂದಿದ್ದರು. ಬಂಧಿತ ಪ್ರಮುಖ ಆರೋಪಿಯನ್ನು ಗುರ್ವಿಂದರ್‌ ಸಿಂಗ್‌ ಅಲಿಯಾಸ್‌ ಶೆರಾ ಎಂದು ಗುರುತಿಸಲಾಗಿದೆ. ರಾಜಪುರದ ಲಿಬರ್ಟಿ ಚೌಕ್‌ನಲ್ಲಿ ಈ ನಾಲ್ವರನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ಆರೋಪಿಗಳು ತಂಗಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ AGTF ತಂಡ ಹೆಚ್ಚುವರಿ ಡಿಜಿಪಿ ಪ್ರಮೋದ್‌ ಬನ್‌ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಕಾರ್ಯಾಚರಣೆಗೆ ಪೊಲೀಸ್‌ ಅಧಿಕಾರಿಗಳಾದ ಗುರ್ಮಿತ್‌ ಸಿಂಗ್‌ ಚೌಹಾಣ್‌ ಮತ್ತು ಬ್ರಿಕಮ್‌ಜಿತ್‌ ಸಿಂಗ್‌ ಬ್ರಾರ್‌ ಸಾಥ್‌ ಕೊಟ್ಟಿದ್ದಾರೆ. ಪಂಜಾಬ್‌ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಎಸಗಲೆಂದೇ ಬುಚಿ ಈ ಗ್ಯಾಂಗ್‌ ಅನ್ನು ನಡೆಸುತ್ತಿದ್ದ ಎಂಬ ವಿಚಾರವನ್ನು ಬಂಧಿತ ಶೆರಾ ಬಾಯ್ಬಿಟ್ಟಿದ್ದಾನೆ. ಇನ್ನು ಬಂಧಿತರಿಂದ ಮೂರು ಪಿಸ್ತೂಲ್‌ ಮತ್ತು ಜೀವಂತ ಗುಂಡುಗಳು ಹಾಗೂ ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಇತರ ಮೂವರನ್ನು ಪಟಿಯಾಲ ಮೂಲದ ಗುರುಪ್ರಿತ್‌ ಸಿಂಗ್‌, ರಂಜಿತ್‌ ಸಿಂಗ್‌ ಅಲಿಯಾಸ್‌ ಸೋನು ಮತ್ತು ಜಗಜಿತ್‌ ಸಿಂಗ್‌ ಅಲಿಯಾಸ್‌ ಜಶನ್‌ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:Stone Pelting: ಉತ್ತರಪ್ರದೇಶದಲ್ಲಿ ಗುಂಪು ಘರ್ಷಣೆ; ಕಲ್ಲು ತೂರಾಟ, ಕೇಳಿಬಂತು ಗುಂಡಿನ ಸಪ್ಪಳ

ಖಲಿಸ್ತಾನ ಪ್ರತ್ಯೇಕತಾವಾದಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ. 2016-2017ರಲ್ಲಿ ನಡೆದಿದ್ದ ಕೊಲೆ ಪ್ರಕರಣಗಳ ರೂವಾರಿ ರಮಣ್‌ದೀಪ್‌ ಬಗ್ಗಾ ಅಲಿಯಾಸ್‌ ಕೆನೇಡಿಯನ್‌ನ ಆಪ್ತ ಕೂಡ ಹೌದು. ಬಗ್ಗಾ 11 ಕ್ರಿಮಿನಲ್‌ ಕೇಸ್‌ಗಳಲ್ಲಿ ಅರೆಸ್ಟ್‌ ಆಗಿದ್ದು, ಸದ್ಯ ತಿಹಾರ್‌ ಜೈಲಿನಲ್ಲಿದ್ದಾನೆ.

Exit mobile version