ಚಂಡೀಗಢ : ಸ್ವಾತಂತ್ರ್ಯೋತ್ಸವದ (Amrit Mahotsav) ಸಂದರ್ಭದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಿದ್ಧತೆ ನಡೆಸಿದ್ದ ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಉಗ್ರರ ಜಾಲವೊಂದನ್ನು ಭೇದಿಸಿರುವ ಪಂಜಾಬ್ ಪೊಲೀಸರು ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಗ್ರೆನೇಡ್, ಆಧುನಿಕ ಸ್ಫೋಟಕ, ಎರಡು ಪಿಸ್ತೂಲ್ ಮತ್ತು 40 ಕಾಟ್ರೇಜ್ ವಶಕ್ಕೆ ಪಡೆಯಲಾಗಿದೆ. ಪಂಜಾಬ್ ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಈ ಉಗ್ರರನ್ನು ಬಂಧಿಸಿವೆ.
ಈ ವಿಷಯವನ್ನು ಟ್ವೀಟ್ ಮಾಡಿ ತಿಳಿಸಿರುವ ಪಂಜಾಬ್ ಪೊಲೀಸರು, ದೆಹಲಿ ಪೊಲೀಸರ ನೆರವಿನಿಂದ ಈ ಉಗ್ರರ ತಂಡವನ್ನು ಬಂಧಿಸಲಾಗಿದೆ. ಬಂಧಿತರು ಕೆನಡಾ ಹಾಗೂ ಆಸ್ಟ್ರೇಲಿಯಾ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ. ಇವರಿಗೆ ಪಾಕಿಸ್ತಾನದ ಐಎಸ್‌ಐ ಬೆಂಬಲ ನೀಡುತ್ತಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ| ಕಾಶ್ಮೀರದಲ್ಲಿ ವಲಸೆ ಕಾರ್ಮಿಕನನ್ನು ಕೊಂದ ಉಗ್ರರು; ಮಧ್ಯರಾತ್ರಿ ಗುಂಡಿನ ದಾಳಿ