Site icon Vistara News

Terrorist Attack: “ಉಗ್ರರ ದಾಳಿ ಬಿಜೆಪಿ ಚುನಾವಣಾ ಪೂರ್ವ ಸ್ಟಂಟ್‌”; ನಾಲಿಗೆ ಹರಿಬಿಟ್ಟ ಪ್ರತಿಪಕ್ಷದ ಇಬ್ಬರು ನಾಯಕರು

Terrorist attack

ಚಂಡೀಗಡ: ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಪೂಂಚ್‌ನಲ್ಲಿ ಎರಡು ದಿನಗಳ ಹಿಂದೆ ಭಾರತೀಯ ವಾಯುಪಡೆ(IAF) ಯೋಧರ ಮೇಲೆ ನಡೆದಿದ್ದ ಭಯೋತ್ಪಾದನಾ ದಾಳಿ(Terrorist Attack)ಯನ್ನು ಪ್ರತಿಪಕ್ಷದ ಇಬ್ಬರು ನಾಯಕರು ಇದೊಂದು ಬಿಜೆಪಿಯ ಚುನಾವಣಾ ಪೂರ್ವ ಸ್ಟಂಟ್‌(Poll Stunt) ಎಂದು ಕರೆಯುವ ಮೂಲಕ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಮುಖಂಡ ಚರಣ್‌ಪ್ರಿತ್‌ ಸಿಂಗ್‌ ಚನ್ನಿ(Charanprit Singh Channi) ಮತ್ತು ರಾಷ್ಟ್ರೀಯ ಜನತಾದಳದ ತೇಜ್‌ ಪ್ರತಾಪ್‌ ಯಾದವ್‌ ಈ ದಾಳಿ ಯನ್ನು 2019ರಲ್ಲಿ ನಡೆದಿದ್ದ ಪುಲ್ವಾಮಾ ಭಯೋತ್ಪಾದನಾ ದಾಳಿಯ ಜೊತೆ ಹೋಲಿಸಿ ಇದೊಂದು ಬಿಜೆಪಿ ನಡೆಸುತ್ತಿರುವ ಚುನಾವಣಾ ಪೂರ್ವ ಸ್ಟಂಟ್‌ ಆಗಿದ್ದು ಬಿಜೆಪಿ ಇದನ್ನು ತನ್ನ ಗೆಲುವಿಗಾಗಿ ಬಳಸಿಕೊಳ್ಳುತ್ತದೆ ಎಂದು ಟೀಕಿಸಿದ್ದಾರೆ.

ಪ್ರತಿಪಕ್ಷ ನಾಯಕರು ಹೇಳಿದ್ದೇನು?

ಪೂಂಚ್‌ನಲ್ಲಿ ನಡೆದ ದಾಳಿ ಬಗ್ಗೆ ಜಲಂಧರ್‌ ಕ್ಷೇತ್ರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಚರಣ್‌ ಪ್ರಿತ್‌ ಸಿಂಗ್‌ ಚನ್ನಿ, ಚುನಾವಣೆ ಬಂದಾಗ ಬಿಜೆಪಿಯವರು ನಡೆಸುವ ಸ್ಟಂಟ್‌ ಇದು. ಇದು ಉದ್ದೇಶಪೂರ್ವವಾಗಿ ನಡೆಸುತ್ತಿರುವ ದಾಳಿ. ಬಿಜೆಪಿಯನ್ನು ಗೆಲ್ಲಿಸಲು ಮಾಡುತ್ತಿರುವ ಸ್ಟಂಟ್‌. ಇದರಲ್ಲಿ ಯಾವುದೇ ನಿಜಾಂಶ ಇಲ್ಲ. ಜನರ ಶವದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಬಿಹಾರದಲ್ಲಿ ಆರ್‌ಜೆಡಿ ಮುಖಂಡ ತೇಜ್‌ ಪ್ರತಾಪ್‌ ಯಾದವ್‌ ಕೂಡ ಇಂತಹದ್ದೇ ಹೇಳಿಕೆ ನೀಡಿದ್ದು, ಪುಲ್ವಾಮಾ ದಾಳಿಯಯನ್ನೂ ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ. ಚುನಾವಣೆ ಬಂದಾಗಲೆಲ್ಲಾ ಭಯೋತ್ಪಾದನಾ ದಾಳಿ ನಡೆದೇ ನಡೆಯುತ್ತದೆ

ಬಿಜೆಪಿ ನಾಯಕರು ಕಿಡಿ

ಪ್ರತಿಪಕ್ಷ ನಾಯಕರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಬಿಜೆಪಿ ಕೆಂಡಾಮಂಡಲವಾಗಿದ್ದು, ವಾಗ್ದಾಳಿ ನಡೆಸಿದೆ. ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪ್ರತಿಕ್ರಿಯಿಸಿದ್ದು, ಇದು ಕಾಂಗ್ರೆಸ್‌ ಮತ್ತು ಅದರ ಜೊತೆಗಿರುವ ಪಕ್ಷಗಳ ಮನಸ್ಥಿತಿಯನ್ನು ತೋರಿಸುತ್ತಿದೆ. ಕಳೆದ 70 ವರ್ಷಗಳಲ್ಲಿ ಸೇನೆಯನ್ನು ಬಲಪಡಿಸುವ ಬದಲು ಅದರ ಬಲವನ್ನು ಕುಗ್ಗಿಸುವ ಕೆಲಸವನ್ನೇ ಕಾಂಗ್ರೆಸ್‌ ಮಾಡಿತ್ತು. ನಾವು ಕಳೆದ 10ವರ್ಷಗಳಲ್ಲಿ ಸೇನೆಗೆ ಬಲ ತುಂಬಿದ್ದೇವೆ. ಪುಲ್ವಾಮಾದ ಬಳಿಕ ನಾವು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದೇವೆ. ಆದರೆ ಇವರು ಸಂಸತ್‌ ದಾಳಿಕೋರನ ಗಲ್ಲುಶಿಕ್ಷೆಯನ್ನು ತಪ್ಪಿಸಲು ಹಲವು ರೀತಿಯಲ್ಲಿ ಪ್ರಯತ್ನಿಸಿದವರು ಜನ ಇದನ್ನು ಎಂದಿಗೂ ಮರೆಯಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಭಾರತೀಯ ವಾಯುಪಡೆ(IAF)ಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದರು.

Exit mobile version