Site icon Vistara News

ಉರಿಯಲ್ಲಿ ಉಗ್ರರ ಕಮಾಂಡರ್ ಬಶೀರ್ ಮಲಿಕ್ ಹತ್ಯೆ! ‘ಕಾಳಿ’ ಜಂಟಿ ಕಾರ್ಯಾಚರಣೆ ಸಕ್ಸೆಸ್

Kulgam

Terrorist killed in fresh gunfight with security forces in Jammu Kashmir's Kulgam

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉರಿ ಸೆಕ್ಟರ್‌ನಲ್ಲಿ (Uri Sector) ಗಡಿಯೊಳಗೆ ನುಸುಳುತ್ತಿದ್ದ ಉಗ್ರರ ಪ್ರಮುಖ ಕಮಾಂಡರ್ ಬಶೀರ್ ಅಹ್ಮದ್ ಮಲಿಕ್‌ನನ್ನು(Terrorist Commander Bashir Ahmad Malik) ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಸೇನೆ ಗುರುವಾರ ಹೇಳಿದೆ(Indian Army). ಈ ಮೂಲಕ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ವ್ಯವಸ್ಥೆ ಮತ್ತು ಭಯೋತ್ಪಾದಕರ ಸಹಾನುಭೂತಿ ಹೊಂದಿದವರಿಗೆ ಭಾರತೀಯ ಭದ್ರತಾ ಪಡೆಗಳು ದೊಡ್ಡ ಹೊಡೆತವನ್ನು ನೀಡಿವೆ. ಮಲಿಕ್ ಮತ್ತು ಮತ್ತೊಬ್ಬ ಭಯೋತ್ಪಾದಕ ಅಹ್ಮದ್ ಗನಿ ಶೇಖ್‌ನನ್ನು ಗಡಿ ನಿಯಂತ್ರಣ ರೇಖೆಯಲ್ಲಿ (LOC) ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ್ ಪೊಲೀಸ್ ಪೊಲೀಸರು ನಡೆಸಿದ ಆಪರೇಷನ್ ಕಾಲಿ ಜಂಟಿ ಕಾರ್ಯಾಚರಣೆಯಲ್ಲಿ ಬುಧವಾರ ಕೊಲ್ಲಲಾಗಿದೆ.

ಮಲಿಕ್ ಮೂರು ದಶಕಗಳಿಂದ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲದೊಂದಿಗೆ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ. ಉತ್ತರದ ಲೀಪಾದಿಂದ ದಕ್ಷಿಣದ ರಜೌರಿ ಎದುರು ಪಾಕಿಸ್ತಾನ ಆಕ್ರಮಿತ-ಕಾಶ್ಮೀರದ ಪ್ರದೇಶಗಳವರೆಗೆ ಭಯೋತ್ಪಾದಕ ಸಂಘಟನೆಗಳಿಗೆ ಪ್ರಮುಖ ಭಯೋತ್ಪಾದಕ ಕಮಾಂಡರ್ ಆಗಿದ್ದ ಎಂದು ಸೇನೆಯ 8 ರಾಷ್ಟ್ರೀಯ ರೈಫಲ್ಸ್ ಕಮಾಂಡಿಂಗ್ ಅಧಿಕಾರಿ ಕರ್ನಲ್ ರಾಘವ್ ಉರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಗ್ರ ಮಲಿಕ್ ನಿಯಂತ್ರಣ ರೇಖೆಯಾದ್ಯಂತ ಅಸಂಖ್ಯಾತ ಭಯೋತ್ಪಾದಕರ ಒಳನುಸುಳುವಿಕೆಯನ್ನು ಯಶಸ್ವಿಗೊಳಿಸಿದ್ದಾನೆ. ಇದರ ಪರಿಣಾಮವಾಗಿ ಅನೇಕ ಭಾರತೀಯ ನಾಗರಿಕರು, ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕರ್ನಲ್ ರಾಘವ್ ಅವರು ತಿಳಿಸಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಅದೇ ಪ್ರದೇಶದ ಮೂಲಕ ಪುನರಾವರ್ತಿತ ಒಳನುಸುಳುವಿಕೆ ಪ್ರಯತ್ನಗಳು ನಡೆಯುತ್ತಿವೆ. ಆ ಮೂಲಕ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡಲು ಕಾಶ್ಮೀರ ಕಣಿವೆಗೆ ಇನ್ನಷ್ಟು ಭಯೋತ್ಪಾದಕರನ್ನು ಒಳನುಗ್ಗಿಸುವುದು ಹತಾಶ ಪ್ರಯತ್ನಗಳು ನಡೆಯುತ್ತಿವೆ ಎಂದು ಕರ್ನಲ್ ರಾಘವ್ ಅವರು ಹೇಳಿದರು.

ನಾವು ಗಡಿಯಲ್ಲಿ ಭಾರೀ ಬಂದೋಬಸ್ತ್ ಪಹರೆ ವ್ಯವಸ್ಥೆಯನ್ನು ಹೊಂದಿದ್ದೇವೆ. ಜಾಗೃತವಾಗಿರುತ್ತೇವೆ. ಯಾವುದೇ ರೀತಿಯ ಉಗ್ರರ ಒಳನುಸಳವಿಕೆಯ ಪ್ರಯತ್ನವನ್ನು ವಿಫಲಗೊಳಿಸಲು ಭಾರತೀಯ ಸೇನೆ ಸನ್ನದ್ಧವಾಗಿರುತ್ತದೆ. ಅಲ್ಲದೇ, ಶತ್ರುಗಳ ವಂಚಕ ಪ್ರಯತ್ನಗಳನ್ನು ಯಶಸ್ವಿಗೊಳಿಸಲು ಭಾರತೀಯ ಸೇನೆ ಬಿಡುವುದಿಲ್ಲ ಎಂದು ಕರ್ನಲ್ ರಾಘವ್ ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: ಪಾಕ್‌ನಲ್ಲಿ ‘ಅಪರಿಚಿತರ’ ಗುಂಡಿಗೆ ಜೈಶೆ ಮೊಹಮ್ಮದ್‌ ಉಗ್ರ ಬಲಿ; ವಾರದಲ್ಲಿ ಇಬ್ಬರು ಉಗ್ರರ ಹತ್ಯೆ!

Exit mobile version