ನವ ದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರ(Terrorist)ನೊಬ್ಬನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಜೈಷೆ ಸಂಘಟನೆಯ ಎ ಕೆಟಗರಿಯ ಉಗ್ರನಾಗಿದ್ದ ಅಬು ಹುರಾ ಹತ್ಯೆಗೀಡಾದವ ಮತ್ತು ಈ ಪಾಕಿಸ್ತಾನದ ನಿವಾಸಿಯಾಗಿದ್ದಾನೆ. ಹತನ ಬಳಿ ಇದ್ದ ಪಿಸ್ತೂಲ್, ಮೂರು ಗ್ರೆನೇಡ್, ನಾಲ್ಕು ಮ್ಯಾಗಜೀನ್ ವಶಪಡಿಸಿಕೊಳ್ಳಲಾಗಿದೆ. ಈ ಎನ್‌ಕೌಂಟರ್ ವೇಳೆ, ಇಬ್ಬರು ನಾಗರಿಕರು ಹಾಗೂ ಸೈನಿಕರು ಗಾಯಗೊಂಡಿದ್ದಾರೆ.
ಬೇಹುಗಾರಿಕೆ ನೀಡಿದ ನಿಖರ ಮಾಹಿತಿಯ ಆಧಾರ ಹಾಗೂ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಹಾಗೂ 15 ಕಾರ್ಪ್ಸ್ ಕಮಾಂಡರ್ ಸಮನ್ವಯದೊಂದಿಗೆ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.
ಈಗಾಗಲೇ ಗೊತ್ತಿರುವಂತೆ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಉಗ್ರ ಚಟುವಟಿಕೆಗಳಿಗೆ ಆಶ್ರಯ ನೀಡುವ ತಾಣವಾಗಿದೆ. 2019ರ ಪುಲ್ವಾಮಾ ದಾಳಿಗಿಂತಲೂ ಮುಂಚಿನಿಂದಲೂ ಇಲ್ಲಿ ಜೈಷೆ ಉಗ್ರ ಸಂಘಟನೆ ತನ್ನ ಬೇರುಗಳನ್ನು ಹೊಂದಿದೆ. ಮೌಲಾನಾ ಮಸೂದ್ ಅಝರ್‌ನ ಸಹೋದರ ರೌಫ್ ಅಝರ್ ನೇತೃತ್ವದಲ್ಲಿ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯು ಕಾರ್ಯ ನಿರತವಾಗಿದೆ.
ಜೈಷೆ ಉಗ್ರ ಸಂಘಟನೆಯ ಔರಂಗಜೇಬ್ ಅಲಮ್ಗೀರ್ ಮತ್ತು ಅಲಿ ಕಾಶೀಫ್ ಜಾನ್ ಅವರನ್ನು ಭಾರತದ ಕೇಂದ್ರ ಗೃಹ ಸಚಿವಾಲಯವು ಉಗ್ರರೆಂದು ಘೋಷಿಸಿದೆ. ಅಲಮ್ಗೀರ್ ಬಹವಾಲ್ಪುರ್‌ದ ನಿವಾಸಿಯಾಗಿದ್ದಾನೆ. 2019ರ ಪುಲ್ವಾಮಾ ಅಟ್ಯಾಕ್‌ಗೆ ಪಾಕಿಸ್ತಾನದಿಂದ ಉಗ್ರರ ನುಸುಳಲು ನೆರವು ನೀಡಿದ್ದ ಅಲ್ಲದೇ, ಫಂಡ್ ರೈಸರ್ ಕೂಡ ಹೌದು. ಜಮ್ಮು ಮತ್ತು ಕಾಶ್ಮೀರದಲ್ಲಿ ಅಫಘಾನಿಸ್ತಾನ ಉಗ್ರರನ್ನು ಕಳುಹಿಸುವ ಸಂಚಿನಲ್ಲಿ ಈತ ಭಾಗಿಯಾಗಿದ್ದಾನೆ.
ಅದೇ ರೀತಿ ಕಾಶೀಫ್ ಕೂಡ ಖೈಬರ್ ಪಖ್ತುನಾಖ್ವ ಪ್ರದೇಶದ ಚಾರ್ಸದಾ ನಿವಾಸಿಯಾಗಿದ್ದಾನೆ. ಈತ ಆಪರೇಷನಲ್ ಕಮಾಂಡರ್. 2016ರಲ್ಲಿ ಪಠಾಣಕೋಟ್ ಏರ್‌ಫೋರ್ಸ್ ಸ್ಟೇಷನ್ ಮೇಲೆ ಉಗ್ರ ದಾಳಿ ನಡೆದಿತ್ತು. ಈ ದಾಳಿಯನ್ನು ಕೈಗೊಂಡ ಉಗ್ರರ ಹ್ಯಾಂಡ್ಲರ್ ಈತ.
ಇದನ್ನೂ ಓದಿ | NIA raid | ಶಂಕಿತ ಉಗ್ರ ಯಾಸಿರ್ ಅರಾಫತ್‌ನನ್ನು ಹಿಡಿದ ಕಾರ್ಯಾಚರಣೆ ಹೀಗಿತ್ತು