Site icon Vistara News

Terrorist Attack: ಕಾಶ್ಮೀರದಲ್ಲಿ ಬಿಹಾರದ ಕಾರ್ಮಿಕನನ್ನು ಹತ್ಯೆಗೈದ ಉಗ್ರರು; ತಿಂಗಳಲ್ಲಿ 2ನೇ ದಾಳಿ

Terrorist Attack

Terrorists Kill Migrant Worker From Bihar In Targeted Attack In Jammu Kashmir

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ವಲಸೆ ಕಾರ್ಮಿಕರ ಮೇಲೆ ದಾಳಿ ಮಾಡುವುದನ್ನು ಉಗ್ರರು ಮುಂದುವರಿಸಿದ್ದಾರೆ. ಅನಂತನಾಗ್‌ (Anantnag) ಜಿಲ್ಲೆಯ ಜಬ್ಲಿಪೋರಾ ಗ್ರಾಮದ ಬಳಿ ವಲಸೆ ಕಾರ್ಮಿಕರೊಬ್ಬರನ್ನು (Migrant Worker) ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ (Terrorist Attack) ನಡೆಸಿದ್ದಾರೆ. ಗುಂಡಿನ ದಾಳಿಗೆ ಬಿಹಾರ ಮೂಲದ ರಾಜಾ ಶಾಹ್‌ ಎಂಬುವರು ಮೃತಪಟ್ಟಿದ್ದಾರೆ. ಗುಂಡಿನ ದಾಳಿಯ ಬೆನ್ನಲ್ಲೇ ಭದ್ರತಾ ಸಿಬ್ಬಂದಿಯು ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾರೆ.

ಬಿಹಾರ ಮೂಲದ ರಾಜಾ ಶಾಹ್‌ ಅವರು ಕೆಲಸಕ್ಕೆಂದು ಜಮ್ಮು-ಕಾಶ್ಮೀರಕ್ಕೆ ಆಗಮಿಸಿದ್ದರು. ಇವರು ಜಬ್ಲಿಪೋರಾ ಗ್ರಾಮದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಉಗ್ರರು ಇವರ ಮೇಲೆ ಗುಂಡಿನ ದಾಳಿ ಮಾಡಿದ್ದು, ಇಡೀ ಕುಟುಂಬವೀಗ ದುಃಖತಪ್ತವಾಗಿದೆ. ರಾಜಾ ಶಾಹ್‌ ಅವರ ಹೊಟ್ಟೆ ಹಾಗೂ ಕುತ್ತಿಗೆಗೆ ಎರಡು ಗುಂಡು ತಗುಲಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದಾಳಿ ಖಂಡಿಸಿದ ಗುಲಾಂ ನಬಿ

ಬಿಹಾರ ಮೂಲದ ರಾಜಾ ಶಾಹ್‌ ಎಂಬ ವಲಸೆ ಕಾರ್ಮಿಕನ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸುತ್ತೇನೆ. ಗಾಯಗೊಂಡವರು ಕ್ಷಿಪ್ರವಾಗಿ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ಕಣಿವೆಯಲ್ಲಿ ಇಂತಹ ಉಗ್ರ ಕೃತ್ಯಗಳು ನಿಲ್ಲಬೇಕು. ಕಾಶ್ಮೀರದ ಜನರಿಗೆ ಶಾಂತಿ ಬೇಕಾಗಿದೆ. ಆದರೆ, ಉಗ್ರರಿಗೆ ಶಾಂತಿ ನೆಲೆಸುವುದು ಬೇಕಾಗಿಲ್ಲ. ಇಂತಹ ಕೃತ್ಯಗಳ ವಿರುದ್ಧ ಹೋರಾಡಲು ನಾವೆಲ್ಲರೂ ಒಗ್ಗೂಡಬೇಕಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನಲ್ಲಿ ಕೆಲ ದಿನಗಳ ಹಿಂದಷ್ಟೇ ಭಯೋತ್ಪಾದಕರು ವಲಸೆ ಕಾರ್ಮಿಕರ ಮೇಲೆ ಗುಂಡು ಹಾರಿಸಿದ್ದರು. ಉಗ್ರರ ಗುಂಡಿನ ದಾಳಿಯಲ್ಲಿ ಉತ್ತರಾಖಂಡದ ಡೆಹ್ರಾಡೂನ್ ನಿವಾಸಿ ದಿಲ್​ರಂಜಿತ್​ ಸಿಂಗ್ ಎಂಬುವರು ಗಾಯಗೊಂಡಿದ್ದರು. ದಕ್ಷಿಣ ಕಾಶ್ಮೀರ ಜಿಲ್ಲೆಯ ಹೆರ್ಪೊರಾ ಪ್ರದೇಶದಲ್ಲಿ ರಾತ್ರಿ ಗುಂಡಿನ ದಾಳಿ ನಡೆದಿತ್ತು. ಇದಾದ ಬಳಿಕ ಭದ್ರತಾ ಸಿಬ್ಬಂದಿಯು ಇಡೀ ಪ್ರದೇಶವನ್ನು ಸುತ್ತುವರಿದು ಕಾರ್ಮಿಕರ ರಕ್ಷಣೆ ಮಾಡಿದ್ದರು.

ಇದನ್ನೂ ಓದಿ: Boat Capsize: ಕಾಶ್ಮೀರದಲ್ಲಿ ಮುಳುಗಿದ ದೋಣಿ; ನಾಲ್ವರು ಶಾಲಾ ಮಕ್ಕಳು ಜಲಸಮಾಧಿ

Exit mobile version