ನವದೆಹಲಿ: ಆಗಸ್ಟ್ 23ರಂದು ಚಂದ್ರಯಾನ-3 (Chandrayaan 3) ವಿಕ್ರಮ್ ಲ್ಯಾಂಡರ್ (Vikram Lander) ಚಂದ್ರನ ದಕ್ಷಿಣ ಭಾಗದಲ್ಲಿ (South pole of moon) ಸುರಕ್ಷಿತವಾಗಿ ಲ್ಯಾಂಡ್ ಆಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿತ್ತು. ವಿಕ್ರಮ್ ಲ್ಯಾಂಡ್ ಆಗುವ ಕ್ಷಣದ ಲೈವ್ ಸ್ಟ್ರೀಮ್ (YouTube Live Stream) ಅನ್ನು ಯುಟ್ಯೂಬ್‌ನಲ್ಲಿ (YouTube) ಏಕಕಾಲಕ್ಕೆ ಸುಮಾರು 80 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಆ ಮೂಲಕ ಜಾಗತಿಕವಾಗಿ ಅತಿ ಹೆಚ್ಚು ಲೈವ್ ಸ್ಟ್ರೀಮ್ ವೀಕ್ಷಣೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಯುಟ್ಯೂಬ್ ಇಂಡಿಯಾ (YouTube India) ಹೇಳಿದ್ದು, ಇಸ್ರೋಗೆ (ISRO) ಅಭಿನಂದನೆ ಸಲ್ಲಿಸಿದೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಯುಟ್ಯೂಬ್, ಭಾರತವು ಚಂದ್ರನ ಮೇಲೆ ಇಳಿದಿದ್ದು, ನಮ್ಮನ್ನು ವಾಹ್ ಎನ್ನುವ ರೀತಿ ಮಾಡಿದ ವಿಷಯವಾಗಿದೆ ಎಂದು ಬರೆದುಕೊಂಡಿದೆ.
ಇದು ವೀಕ್ಷಿಸಲು ತುಂಬಾ ಎಕ್ಸೈಟಿಂಗ್ ಆಗಿತ್ತು. ಇಡೀ ಇಸ್ರೋ ತಂಡಕ್ಕೆ ಅಭಿನಂದನೆಗಳು. ಏಕಕಾಲಕ್ಕೆ 80 ಲಕ್ಷ ವೀಕ್ಷಕರು ಎಂಬುದನ್ನು ನಂಬಲಾಗದು ಎಂದು ಯುಟ್ಯೂಬ್ ಇಂಡಿಯಾ ಅಧ್ಯಕ್ಷ ನೀಲ್ ಮೋಹನ್ ಅವರು ಯೂಟ್ಯೂಬ್ ಇಂಡಿಯಾದ ಪೋಸ್ಟ್ ಅನ್ನು ಉಲ್ಲೇಖಿಸಿ ಮರು ಟ್ವೀಟ್ ಮಾಡಿದ್ದಾರೆ.
ಉಡಾವಣಾ ದಿನದ 16 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ಇಸ್ರೋ ನಿಯಂತ್ರಣ ಕೇಂದ್ರದ ದೃಶ್ಯಗಳ ಸಂಗ್ರಹವಿದೆ. ಪ್ರಸಾರದ ಆರಂಭದಿಂದ ಚಂದ್ರಯಾನ-3 ಅಂತಿಮ ಲ್ಯಾಂಡಿಂಗ್ ಮತ್ತು ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳ ನಡುವೆ ಸಂಭ್ರಮಾಚರಣೆಯನ್ನು ಇದರಲ್ಲಿ ಕಾಣಬಹುದು. ಚಂದ್ರಯಾನ-3ರ ವಿಕ್ರಮ್ ಲ್ಯಾಂಡ್ ಚಂದ್ರನ ದಕ್ಷಿಣ ಭಾಗದಲ್ಲಿ ಸ್ಲೀಪ್ ಮೋಡ್‌ನಲ್ಲಿದೆ.
This was so exciting to watch – congratulations to the whole team at @isro. 8M concurrent viewers is incredible! https://t.co/PM3MJgkPrE
— Neal Mohan (@nealmohan) September 14, 2023
Chandrayaan 3: ಸ್ಲೀಪ್ ಮೋಡ್‌ಗೆ ಜಾರಿದ ವಿಕ್ರಮ್ ಲ್ಯಾಂಡರ್ ಸೆರೆ ಹಿಡಿದ ಚಂದ್ರಯಾನ-2 ಆರ್ಬಿಟರ್
‘ಸ್ಲೀಪ್ ಮೋಡ್’ಗೆ (Sleep Mode) ಜಾರಿದ ಮಾರನೇ ದಿನವೇ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ (Chandrayaan 3 Vikram Lander) ಅನ್ನು ಚಂದ್ರಯಾನ-2 ಆರ್ಬಿಟರ್ (Chandrayaan 2 Orbiter) ತನ್ನ ಡ್ಯುಯಲ್-ಫ್ರಿಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರೆಡಾರ್(Dual-frequency Synthetic Aperture Radar – DFSAR) ಮೂಲಕ ಸೆರೆ ಹಿಡಿದು, ಚಿತ್ರವನ್ನು ಭೂಮಿಗೆ ರವಾನಿಸಿದೆ. 2023ರ ಸೆಪ್ಟೆಂಬರ್ 6ರಂದು ಈ ಚಿತ್ರವನ್ನು ಚಂದ್ರಯಾನ-2 ಆರ್ಬಿಟರ್ ತೆಗೆದಿದೆ. ಈ ಮಾಹಿತಿಯನ್ನು ಇಸ್ರೋ(ISRO) ಹಂಚಿಕೊಂಡಿದೆ.
ಆರ್ಬಿಟರ್‌ನಲ್ಲಿರುವ ಎಸ್ಎಆರ್ ಉಪಕರಣವು ನಿರ್ದಿಷ್ಟ ಆವರ್ತನ ಬ್ಯಾಂಡ್‌ನಲ್ಲಿ ಮೈಕ್ರೋವೇವ್‌ಗಳನ್ನು ರವಾನಿಸುತ್ತದೆ ಮತ್ತು ಮೇಲ್ಮೈಯಿಂದ ಚದುರಿದ ಅದನ್ನೇ ಪಡೆಯುತ್ತದೆ. ರೆಡಾರ್ ಆಗಿರುವುದರಿಂದ, ಇದು ಬೆಳಕು ಇಲ್ಲದೆಯೂ ಚಿತ್ರಿಸಬಹುದು. ಇದು ಗುರಿ ವೈಶಿಷ್ಟ್ಯಗಳ ದೂರ ಮತ್ತು ಭೌತಿಕ ಗುಣಲಕ್ಷಣಗಳನ್ನು ಒದಗಿಸುತ್ತದೆ. ಆದ್ದರಿಂದ, ಎಸ್‌ಎಆರ್ ಅನ್ನು ಭೂಮಿ ಮತ್ತು ಇತರ ಆಕಾಶಕಾಯಗಳ ರಿಮೋಟ್ ಸೆನ್ಸಿಂಗ್ಗಾಗಿ ಬಳಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರನ 3ಡಿ ಇಮೇಜ್ ಕ್ಲಿಕ್ಕಿಸಿದ ಪ್ರಜ್ಞಾನ್ ರೋವರ್! ಇದರಲ್ಲೇನು ವಿಶೇಷವಿದೆ?
ಡಿಎಫ್‌ಎಸ್ಎಆರ್ ಚಂದ್ರಯಾನ-2 ಆರ್ಬಿಟರ್‌ನಲ್ಲಿರುವ ಪ್ರಮುಖ ಉಪಕರಣವಾಗಿದೆ. ಇದು L ಮತ್ತು S ಬ್ಯಾಂಡ್ ಬ್ಯಾಂಡ್‌ಗಳಲ್ಲಿ ಮೈಕ್ರೋವೇವ್‌ಗಳನ್ನು ಬಳಸಿಕೊಳ್ಳುತ್ತದೆ. ಈ ಅತ್ಯಾಧುನಿಕ ಉಪಕರಣವು ಪ್ರಸ್ತುತ ಯಾವುದೇ ಗ್ರಹಗಳ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ರೆಸಲ್ಯೂಶನ್ ಪೋಲಾರಿಮೆಟ್ರಿಕ್ ಚಿತ್ರಗಳನ್ನು ನೀಡುತ್ತಿದೆ. ದೀರ್ಘವಾದ ರೇಡಾರ್ ತರಂಗಾಂತರವು ಡಿಎಫ್‌ಎಸ್ಎಆರ್ ಅನ್ನು ಕೆಲವು ಮೀಟರ್‌ಗಳವರೆಗೆ ಚಂದ್ರನ ಉಪಮೇಲ್ಮೈ ವೈಶಿಷ್ಟ್ಯಗಳನ್ನು ಅನ್ವೇಷಿಸಲು ಶಕ್ತಗೊಳಿಸುತ್ತದೆ. ಡಿಎಫ್ಎಸ್ಎಆರ್ ಕಳೆದ 4 ವರ್ಷಗಳಿಂದ ಚಂದ್ರನ ಧ್ರುವ ವಿಜ್ಞಾನದ ಮೇಲೆ ಮುಖ್ಯ ಗಮನಹರಿಸುವ ಮೂಲಕ ಚಂದ್ರನ ಮೇಲ್ಮೈಯನ್ನು ಚಿತ್ರಿಸುವ ಮೂಲಕ ಉತ್ತಮ-ಗುಣಮಟ್ಟದ ಡೇಟಾವನ್ನು ಭೂಮಿಗೆ ರವಾನಿಸುತ್ತಿದೆ.