ಮಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇ ಕಾಮರ್ಸ್ ಕಂಪನಿಗಳು ಗ್ರಾಹಕರಿಗೆ ನೀಡುವ ಬಿಗ್ ದಿವಾಳಿ ಸೇಲ್ (Big Diwali Sale) ಮುಕ್ತಾಯಗೊಂಡಿದೆ. ಏತನ್ಮಧ್ಯೆ, ಮಂಗಳೂರಿನ ಗ್ರಾಹಕರೊಬ್ಬರು ಫ್ಲಿಪ್‌ಕಾರ್ಟ್‌ನಲ್ಲಿ ಲ್ಯಾಪ್‌ಟಾಪ್ ಬುಕ್ ಮಾಡಿದ ತಮಗೆ ಕಲ್ಲು ಗುಂಡು ಪಾರ್ಸೆಲ್ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಕಡೆಯಿಂದ ಆದ ತಪ್ಪನ್ನು ಒಪ್ಪಿಕೊಂಡ ಫ್ಲಿಪ್‌ಕಾರ್ಟ್ ಅವರಿಗೆ ಹಣವನ್ನು ಮರುಪಾವತಿ ಮಾಡಿದೆ ಎಂದು ಹೇಳಲಾಗಿದೆ.
ಈ ಕುರಿತು ಮಿರರ್ ನೌ ವರದಿ ಮಾಡಿದ್ದು, ಗ್ರಾಹಕರು ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಬುಕ್ ಮಾಡಿದ್ದರು. ಅಂತೆಯೇ ಅವರ ಆರ್ಡರ್ ಮನೆಗೆ ತಲುಪಿತ್ತು. ಬಿಡಿಸಿ ನೋಡುವಾಗ ಕಲ್ಲು ಗುಂಡು ಹಾಗೂ ಈ ತ್ಯಾಜ್ಯಗಳು ಇದ್ದವು ಎಂದು ಆರೋಪಿಸಿದ್ದಾರೆ. ವಿಷಯವನ್ನು ಫ್ಲಿಪ್‌ಕಾರ್ಟ್‌ಗೆ ತಿಳಿಸಿದ ಬಳಿಕ ಅವರು ಹಣವನ್ನು ಮರುಪಾವತಿ ಮಾಡಿದ್ದಾರೆ.
ಇಂಥ ಪ್ರಸಂಗಗಳು ಆಗಾಗ ನಡೆಯುತ್ತಿರುವ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಗ್ರಾಹಕರು ತಪ್ಪುಗಳನ್ನು ಪುನರಾವರ್ತನೆ ಮಾಡುವ ಫ್ಲಿಪ್‌ಕಾರ್ಟ್‌ನ ಲೈಸೆನ್ಸ್ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Shopping | ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಆರಂಭ