Site icon Vistara News

Viral News: 22 ವರ್ಷದ ಹಿಂದೆ ಕಾಣೆಯಾಗಿದ್ದ ಮಗ ಸನ್ಯಾಸಿಯಾಗಿ ಮರಳಿದ!

The son who was missing 22 years ago returned as a monk and Viral News

ನವದೆಹಲಿ: ಎರಡು ದಶಕಗಳ ನಂತರ ನಾಪತ್ತೆಯಾಗಿದ್ದ (Son Missing 22 Years Ago) ಮಗನ ನಿಗೂಢ ವಾಪಸಾತಿ ಉತ್ತರ ಪ್ರದೇಶದ (Uttar Pradesh) ಅಮೇಠಿ ಜಿಲ್ಲೆಯ (Amethi district) ಹಳ್ಳಿಯೊಂದರಲ್ಲಿ ಬೆಚ್ಚಿಬೀಳಿಸಿದೆ. 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಈಗ ಸನ್ಯಾಸಿಯಾಗಿ (Monk) ಮರಳಿದ್ದು ಮಾತ್ರವಲ್ಲದೇ, ತನ್ನ ಹೆತ್ತ ತಾಯಿಯಿಂದಲೇ ಭಿಕ್ಷೆ ಪಡೆದಿದ್ದಾನೆ(alms from mother). ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋದಲ್ಲಿ ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಪುನರ್ಮಿಲನವನ್ನು ಕಾಣಬಹುದು. ಯೋಗಿಯಾಗಿರುವ ಮಗನು ಸಾರಂಗಿಯನ್ನು ನುಡಿಸುತ್ತಾ, ತನ್ನ ತಾಯಿಂದಲೇ ಭಿಕ್ಷೆ ಬೇಡುವುದನ್ನು ನೋಡಬಹುದು(Viral News).

ಯೋಗಿಯು ಜನಪ್ರಿಯ ಜಾನಪದದ ಕೇಂದ್ರ ಪಾತ್ರವಾದ ರಾಜ ಭರ್ತಾರಿಯ ಬಗ್ಗೆ ಹಾಡುಗಳನ್ನು ಹಾಡುತ್ತಾನೆ. ರಾಜ ಭರ್ತರಿಯನ್ನು ಒಳಗೊಂಡಿರುವ ಒಂದು ಕಥೆಯು ಅವನು ಸನ್ಯಾಸಿಯಾಗಲು ಸಮೃದ್ಧ ರಾಜ್ಯವನ್ನು ಹೇಗೆ ತೊರೆದನು ಎಂಬುದರ ಬಗ್ಗೆ ವಿವರಿಸುತ್ತದೆ. ಬಹಳ ವರ್ಷಗಳ ಹಿಂದೆ ಕಳೆದು ಹೋಗಿದ್ದ ಪುತ್ರನನ್ನು ಕಂಡು ತಾಯಿ ಅಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ಕಥೆಯು 1920 ರ ಭಾವಲ್(ಇಂದಿನ ಬಾಂಗ್ಲಾದೇಶ) ಪ್ರಕರಣವನ್ನು ನೆನಪಿಸುತ್ತದೆ. ದಶಕಗಳ ಹಿಂದೆ ಸತ್ತಿದ್ದಾನೆಂದು ತಿಳಿಯಲಾಗಿದ್ದ ರಾಮೇಂದ್ರ ನಾರಾಯಣ್ ರಾಯ್ ಅವರು ತಾನು ಪುನರ್ಜನ್ಮ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದರು. ಬಳಿಕ ಈ ಕುರಿತು ಸುದೀರ್ಘ ಕಾನೂನು ಹೋರಾಟ ಕೂಡ ನಡೆದಿತ್ತು.

ಪ್ರಸ್ತುತ ಪ್ರಕರಣದಲ್ಲಿ, ರತಿಪಾಲ್ ಸಿಂಗ್ ಅವರ ಮಗ ಪಿಂಕು 2002ರಲ್ಲಿ ತನ್ನ 11 ನೇ ವಯಸ್ಸಿನಲ್ಲಿ ಗೋಲಿ ಆಡುವ ವಿಷಯದಲ್ಲಿ ತನ್ನ ತಂದೆಯೊಂದಿಗೆ ಜಗಳವಾಡಿ ದೆಹಲಿಯ ಅವರ ಮನೆಯಿಂದ ನಾಪತ್ತೆಯಾಗಿದ್ದ. ಅವನ ತಾಯಿ ಭಾನುಮತಿ ಆತನನ್ನು ಗದರಿಸಿದ್ದಳು. ಇದರಿಂದ ಕೋಪಗೊಂಡಿದ್ದ ರಿಂಕು ಮನೆಯನ್ನೇ ತೊರೆದು, ಎರಡು ದಶಕಗಳ ಬಳಿಕ ಹಿಂತಿರುಗಿದ್ದಾನೆ. ಆದರೆ, ಯೋಗಿಯಾಗಿ ಬಂದಿದ್ದಾನೆ.

ಎರಡು ದಶಕಗಳಿಂದ ಕಾಣೆಯಾಗಿದ್ದ ಪಿಂಕು, ತಪಸ್ವಿಯಾಗಿ ವಾಪಸ್ ಆಗಿದ್ದನ್ನು ಕಂಡು ಕಳೆದ ವಾರ ಅಮೇಠಿಯ ಖರೌಲಿ ಗ್ರಾಮವು ದಿಗ್ಭ್ರಮೆಗೊಂಡಿತು. ದಿಲ್ಲಿಯಲ್ಲಿ ನೆಲೆಸಿರುವ ಆತನ ಪೋಷಕರಿಗೆ ಈ ವಿಷಯವನ್ನು ಗ್ರಾಮಸ್ಥರು ತಿಳಿಸಿದರು. ಕೂಡಲೇ ತಂದೆ ತಾಯಿಗಳು ಆಗಮಿಸಿದರು. ಆತನ ದೇಹದ ಮೇಲಿದ್ದ ಗಾಯದ ಮೂಲಕ ಪಿಂಕುವನ್ನು ಗುರುತಿಸಿದರು. ಆದರೆ, ಈ ಪುನರ್ಮಿಲನವು ಕ್ಷಣಿಕವಾಗಿತ್ತಷ್ಟೇ. ಯಾಕೆಂದರೆ, ತಪಸ್ವಿಯಾಗಿ ಹಿಂದಿರುಗಿರುವ ಪಿಂಕು ತಾಯಿಯಿಂದಲೇ ಭಿಕ್ಷೆಯನ್ನು ಬೇಡಿದ ಮತ್ತು ಹಳ್ಳಿಯನ್ನು ತೊರೆದು ಹೋದ. ಹಾಗಾಗಿ, ತಂದೆ ತಾಯಿ ಖುಷಿ ಕೇವಲ ಕ್ಷಣಗಳಿಗೆ ಮಾತ್ರವೇ ಸೀಮಿತವಾಯಿತು.

ತನ್ನ ಮಗ ಸೇರಿರುವ ಧಾರ್ಮಿಕ ಪಂಡಡವು ಆತನನ್ನು ಬಿಡುಗಡೆ ಮಾಡಲು 11 ಲಕ್ಷ ಕೇಳುತ್ತಿದೆ ಎಂದು ಪಿಂಕು ತಂದೆ ಆರೋಪಿಸಿದ್ದಾರೆ. ನನ್ನ ಜೇಬಿನಲ್ಲಿ 11 ರೂಪಾಯಿ ಕೂಡ ಇಲ್ಲ. ನಾನು ಹೇಗೆ 11 ಲಕ್ಷ ರೂ. ನೀಡಲಿ ಎಂದು ಅವರು ಪ್ರಶ್ನಿಸಿದ್ದಾರೆ.

ಪಿಂಕು ಕೂಡ ತನ್ನ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ. ನಾನು ಕುಟುಂಬದ ಸಂಬಂಧಗಳಿಗಾಗಿ ಊರಿಗೆ ಮರಳಿ ಬರಲಿಲ್ಲ. ಬದಲಿಗೆ ಧಾರ್ಮಿಕ ಆಚರಣೆಗಾಗಿ ಬಂದಿದ್ದೇನೆ. ಸಂಪ್ರದಾಯದ ಪ್ರಕಾರ, ಸನ್ಯಾಸಿಯಾಗ ಬಯಸುವವರು ತಮ್ಮ ತಾಯಿಂದಲೇ ಭಿಕ್ಷೆಯನ್ನು ಸ್ವೀಕರಿಸಬೇಕಾಗುತ್ತದೆ. ಈ ಪದ್ಧತಿಯನ್ನು ಪೂರ್ಣಗೊಳಿಸುವುದಕ್ಕಾಗಿ ನಾನು ಹಳ್ಳಿಗೆ ಮರಳಿದ್ದೆ ಎಂದು ಪಿಂಕು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಚಲಿಸುತ್ತಿದ್ದ ಬಸ್‌ನ ತಳಭಾಗ ಕುಸಿದು ರಸ್ತೆಗೆ ಬಿದ್ದ ಮಹಿಳೆ!; ವಿಡಿಯೊ ಇಲ್ಲಿದೆ

Exit mobile version