ನ್ಯೂಯಾರ್ಕ್: ಕೋವಿಡ್-19 ಬಿಕ್ಕಟ್ಟಿನಿಂದ ಬಳಲುತ್ತಿರುವ ಚೀನಾ ಈಗಿನ ಪರಿಸ್ಥಿತಿ ಬಗ್ಗೆ ನಿರ್ದಿಷ್ಟ ಮಾಹಿತಿಗಳನ್ನು ನಿಯಮಿತವಾಗಿ ಬಿಡುಗಡೆಗೊಳಿಸಬೇಕು ಎಂದು (Covid updates ) ವಿಶ್ವ ಆರೋಗ್ಯ ಸಂಸ್ಥೆ (WHO) ಒತ್ತಾಯಿಸಿದೆ.
ಕೋವಿಡ್ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ, ಆಸ್ಪತ್ರೆಗೆ ದಾಖಲಾಗಿರುವವರು, ಮೃತಪಟ್ಟಿರುವವರು, ಲಸಿಕೆ ತೆಗೆದುಕೊಂಡವರ ಬಗ್ಗೆ ಹೆಚ್ಚಿನ ಹಾಗೂ ನಿರ್ದಿಷ್ಟ ಮಾಹಿತಿಗಳನ್ನು ಬಿಡುಗಡೆಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸಿದೆ.
ಚೀನಾ ಇತ್ತೀಚೆಗೆ ತನ್ನ ಝೀರೊ ಕೋವಿಡ್ ನೀತಿಯನ್ನು ಸಡಿಲಗೊಳಿಸಿದ ಬಳಿಕ ಸೋಂಕಿನ ಪ್ರಮಾಣ ವ್ಯಾಪಕವಾಗಿದೆ. ಪರಿಸ್ಥಿತಿ ಉಲ್ಬಣಿಸಿದೆ. ಆದರೆ ಸರಿಯಾದ ವಿವರವನ್ನು ಚೀನಾ ನೀಡುತ್ತಿಲ್ಲ. ಚೀನಾದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಅನ್ನು ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ಭಾರತ, ಇಟಲಿ, ತೈವಾನ್ ಕಡ್ಡಾಯಗೊಳಿಸಿದೆ.