Site icon Vistara News

New Year 2024: ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ, ಭಾರತ ಸೇರಿ ವಿಶ್ವದಾದ್ಯಂತ ಮುಗಿಲು ಮುಟ್ಟಿದ ಸಂಭ್ರಮಾಚಾರಣೆ

The world welcomed new year 2024 with joys and Check details

ಬೆಂಗಳೂರು: ಭಾರತವು (India) ಸೇರಿದಂತೆ ವಿಶ್ವದಾದ್ಯಂತ ಜನರು 2023ಕ್ಕೆ ವಿದಾಯ ಹೇಳಿ(Good bye 2023), 2024 ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು(Welcome to 2024). ಡಿಸೆಂಬರ್ 31ರ ಮಧ್ಯ ರಾತ್ರಿಯಲ್ಲಿ ಜನರು ವಿವಿಧ ನಗರಗಳಲ್ಲಿ ಪ್ರಮುಖ ರಸ್ತೆಗಿಳಿದು ಸಂಭ್ರಮಪಟ್ಟರು. ಮೋಜು ಮಸ್ತಿಯಲ್ಲಿ ತೊಡಗಿ ಯುವ ಜನತೆ ಹುಚ್ಚೆದ್ದು ಕುಣಿಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಬೆಂಗಳೂರು(Bengaluru), ದಿಲ್ಲಿ(New Delhi), ಮುಂಬೈ (Mumbai) ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸಂಭ್ರಮದ ಕೇಕೆ ಮುಗಿಲು ಮುಟ್ಟಿತ್ತು. ಅಲ್ಲಲ್ಲಿ ಕೆಲವು ಸಣ್ಣ ಪುಟ್ಟ ಗಲಾಟೆಗಳು ನಡೆದ ಬಗ್ಗೆ ವರದಿಯಾಗಿವೆ.

ಮುಂಬೈನಲ್ಲಿ ಹೊಸ ವರ್ಷದ ಆಚರಣೆ

ಪಣಜಿಯಲ್ಲಿ ಹೊಸ ವರ್ಷದ ಆಚರಣೆ

ಸಿನಿಮಾ ನಟರು, ರಾಜಕಾರಣಿಗಳು ಸೇರಿದಂತೆ ಹಲವರು ಗಣ್ಯರು ಎಕ್ಸ್‌ ವೇದಿಕೆಯಲ್ಲಿ ಹೊಸ ವರ್ಷದ ಆಗಮನದ ಶುಭಾಶಯಗಳನ್ನು ಕೋರಿದರು. ಅವರ ಟ್ವೀಟ್‌ಗಳು ಸಾಕಷ್ಟು ವೈರಲ್ ಕೂಡಾ ಆದವು. ಹಾಂಕಾಂಗ್, ಆಸ್ಟ್ರೇಲಿಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಭರ್ಜರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು.

ಪಂಜಾಬ್‌ನಲ್ಲೂ ಸಂಭ್ರಮಾಚರಣೆ

ಹಾಂಕಾಂಗ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ

ಪೆಸಿಫಿಕ್ ರಾಷ್ಟ್ರವಾದ ಕಿರಿಬಾಟಿಯು 2024 ರ ಹೊಸ ವರ್ಷವನ್ನು ಬರಮಾಡಿಕೊಂಡ ಮೊದಲ ದೇಶವಾಗಿದೆ ಕ್ರಿಸ್‌ಮಸ್ ದ್ವೀಪ ಎಂದೂ ಕರೆಯಲ್ಪಡುವ ದೇಶದ ಅತಿದೊಡ್ಡ ದ್ವೀಪವು 10:00(ಭಾರತೀಯ ಕಾಲಮಾನ)ಕ್ಕೆ 2024 ಅನ್ನು ಪ್ರವೇಶಿಸಿತು.

ಕಿರಿಬಾತಿಯಲ್ಲಿ ಹೊಸ ವರ್ಷದ ಸ್ವಾಗತದ ಸಂಭ್ರಮ

ಆಸ್ಟ್ರೇಲಿಯಾದಲ್ಲಿ ವರ್ಷಕ್ಕೆ ಅದ್ಧೂರಿಯ ಸ್ವಾಗತ

ನ್ಯೂಜಿಲೆಂಡ್‌ನಲ್ಲಿ ಹೊಸ ವರ್ಷಕ್ಕೆ ಸ್ವಾಗತ

ಮುಗಿಲು ಮುಟ್ಟಿದ ಸಂಭ್ರಮಾಚರಣೆ

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೊಸ ವರ್ಷಕ್ಕೆ ಸ್ವಾಗತ

ಸ್ವಾಗತ ಕೋರಿದ ತಮಿಳುನಾಡು ಸಿಎಂ

Exit mobile version