ನವದೆಹಲಿ: ಚಂದ್ರಯಾನ-3 (Chandrayaan 3) ನೌಕೆಯ ಮೂರನೇ ಕಕ್ಷೆ ಎತ್ತರಿಸುವ (Orbit-Raising Manoeuvre) ಕೆಲಸವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯು ಯಶಸ್ವಿಯಾಗಿ ಪೂರೈಸಿದೆ. ಮುಂದಿನ ಕಕ್ಷೆ ಏರಿಸುವ ಪ್ರಕ್ರಿಯೆಯು ಜುಲೈ 20ರಂದು ಮಧ್ಯಾಹ್ನಹ 2ರಿಂದ 3 ಗಂಟೆಯವರೆಗೆ ನಡೆಯಲಿದೆ. 5 ಬಾರಿ ಭೂಮಿಯನ್ನು ಸುತ್ತ ಹಾಕಲಿರುವ ಚಂದ್ರಯಾನ ನೌಕೆ ಬಳಿಕ ಭೂಮಿಯ ಗುರುತ್ವಾಕರ್ಷಣೆಯಿಂದ ಬೇರ್ಪಡಲಿದೆ ಎಂದು ಇಸ್ರೋ ಹೇಳಿದೆ.
ಮೂರನೇ ಕಕ್ಷೆ ಏರಿಸುವ ಪ್ರಕ್ರಿಯೆಯನ್ನು (ಭೂಮಿಗೆ ಸುತ್ತುವರಿದ ಪೆರಿಜಿ ಫೈರಿಂಗ್) ISTRAC (ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್) ಇಸ್ರೋದ ಬೆಂಗಳೂರು ಕೇಂದ್ರದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ತಿಳಿಸಲಾಗಿದೆ. ಚಂದ್ರಯಾನ 3 ಮಿಷನ್‌ಗೆ ಜುಲೈ 14ರಂದು ಚಾಲನೆ ನೀಡಲಾಗಿತ್ತು.
ಚಂದ್ರಯಾನ-3 ನೌಕೆಯನ್ನು ಹೊತ್ತ ಜಿಎಸ್ಎಲ್‌ವಿ ಮಾರ್ಕ್ 3 ರಾಕೆಟ್ ಕಳೆದ ವಾರ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಭವಿಷ್ಯದ ಶೋಧನೆಗಳಿಗೆ ಚಂದ್ರಯಾನ-3 ನೌಕೆ ಲ್ಯಾಂಡಿಂಗ್ ಮಹತ್ವದ್ದಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಅವರು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಚಂದ್ರಯಾನ 3, ಮನುಕುಲದ ಇನ್ನೊಂದು ಮಹಾ ಜಿಗಿತ
ಚಂದ್ರಯಾನ-3 ತುಂಬಾ ಮಹತ್ವದ ಹೆಜ್ಜೆಯಾಗಿದೆ. ಅದು ಲ್ಯಾಂಡಿಂಗ್ ಸಮಯವೂ ಅಷ್ಟೇ ಮಹತ್ವದ್ದಾಗಿದೆ. ನೀವು ಸರಿಯಾಗಿ ಲ್ಯಾಂಡ್ ಆಗದಿದ್ದರೆ, ನೀವು ಯಾವುದೇ ಸ್ಯಾಂಪಲ್ ತೆಗೆದುಕೊಳ್ಳಲಾಗುವುದಿಲ್ಲ, ಮಾನವರನ್ನು ಅಲ್ಲಿಗೆ ಕಳುಹಿಸಲಾಗುವುದಿಲ್ಲ. ಅಲ್ಲದೇ, ಚಂದ್ರನಲ್ಲಿ ನೆಲೆ ಕೂಡ ಸ್ಥಾಪಿಸಲು ಆಗುವುದಿಲ್ಲ. ಹಾಗಾಗಿ ಚಂದ್ರಯಾನ-3 ನೌಕೆ ಲ್ಯಾಂಡ್ ಆಗುವುದು ಬಹಳ ಮಹತ್ವದ್ದಾಗಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.