ತಮಿಳುನಾಡು: ಬಿಜೆಪಿ, ಪ್ರಧಾನಿ ಮೋದಿ(PM Narendra Modi) ಹಾಗೂ ಆರ್‌ಎಸ್‌ಎಸ್ ಅನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳ ನಾಯಕರು ಸನಾತನ ಧರ್ಮದ(Sanatan Dharma) ಅಸ್ಥಿತ್ವವನ್ನೇ ಪ್ರಶ್ನಿಸಿ ವಿವಾದಕ್ಕೀಡುವುದು ಇದೆ. ಇದೀಗ ಕಾಂಗ್ರೆಸ್(Congress) ನೇತೃತ್ವದ ಇಂಡಿಯಾ ಒಕ್ಕೂಟ(I.N.D.I. Alliance)ದ ಮಿತ್ರ ಪಕ್ಷ ವಿದುತಲೈ ಚಿರುತೈಗಲ್ ಕಚ್ಛಿ(VCK) ಪಕ್ಷ ಸಂಸ್ಥಾಪಕ ತಿರುಮಾವಲವನ್(Thirumavalavan Controversy) ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ತಾವು ಆಯೋಜಿಸಿದ್ದ ವಾರ್ಷಿಕ VCK ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ನಿರ್ಭೀತಿಯಿಂದ ಸಂಚರಿಸುತ್ತಿದ್ದಾರೆ. ಶಸ್ತ್ರ ಸಜ್ಜಿತ ಮಾವೋವಾದಿಗಳು ಅರಣ್ಯಗಳಲ್ಲಿ ಅಡಗಿ ಕುಳಿತಿದ್ದಾರೆ. ಸನಾತನ ಉಗ್ರರು ಕೇಂದ್ರ ಸಚಿವರ ಜೊತೆಯಲ್ಲಿಯೇ ಓಡಾಡುತ್ತಿದ್ದಾರೆ. ಅವರಿಗೆ ಎಷ್ಟು ದೊಡ್ಡ ಹುದ್ದೆಯಾದರೂ ಸಿಗುತ್ತದೆ. ಮತ್ತು ಯಾವ ನಿರ್ಧಾರಗಳಾದರೂ ಅವರೇ ತಗೆದುಕೊಳ್ಳುತ್ತಾರೆ ಎಂದಿದ್ದಾರೆ.
ಸನಾತನ ಉಗ್ರರು ನಮ್ಮ ಜೊತೆಯಲ್ಲಿಯೇ ನಮ್ಮ ಮನೆಯಲ್ಲಿಯೇ ವಾಸಿಸುತ್ತಾರೆ. ಯಾವುದೇ ಸಮಯದಲ್ಲೂ ನಿಮ್ಮ ಮನೆಗೆ ನುಗ್ಗಿ ನಿಮ್ಮನ್ನು ಕೊಲ್ಲಬಹುದು. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ಅಲ್ಲದೇ ಬಿಜೆಪಿ ನಾಯಕರ ಜೊತೆಗೇ ವೇದಿಕೆಯಲ್ಲಿ ರಾಜಾರೋಷವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಎಲ್ಲೂ ಅಡಗಿ ಕೂರುವುದು ಅಥವಾ ಓಡುವುದು ಇದೆಲ್ಲಾ ಮಾಡುವುದೇ ಇಲ್ಲ. ಸಚಿವರ ಜಿತೆ ವೇದಿಕೆಯಲ್ಲೇ ಕಾಣಿಸಿಕೊಳ್ಳುವ ಕಾರಣ ಅವರಿಗೆ ಯಾವ ಭಯವೂ ಇರುವುದಿಲ್ಲ. ಇನ್ನು ಪ್ರಕಾಶ್ ರಾಜ್‌ರಂತಹ ವ್ಯಕ್ತಿಗಳನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಅವರ ಧೈರ್ಯವನ್ನ ಮೆಚ್ಚಲೇ ಬೇಕು ಎಂದು ಹೇಳಿದರು.
ಚೆನ್ನೈನಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ಅಂಬೇಡ್ಕರ್ ಸುದಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಷ್ಟೇ ಅಲ್ಲದೇ ಅನೇಕ ಎಡಪಂಥೀಯ ನಾಯಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಮಾತನಾಡಿ ಪ್ರಕಾಶ್ ರಾಜ್, ಪ್ರಧಾನಿ ಮೋದಿ ಅವರ ದೈವಾಂಶ ಸಂಭೂತ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದರು. ಇಲ್ಲಿಗೆ ನಮ್ಮ ಕೆಲಸ ಮುಗಿಯುವುದಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂಬುದಕ್ಕೆ ಎಂದಿಗೂ ನಾನು ಹೆದರುವುದಿಲ್ಲ. ಅವರು (ಪ್ರಧಾನಿ ನರೇಂದ್ರ ಮೋದಿ) ಈಗ ಭಯಗೊಂಡಿದ್ದಾರೆ. ಅವರಂತಹವರು ಮತ್ತೆ ಬರದಂತೆ ನೋಡಿಕೊಳ್ಳಲು ನಾವು ಕೆಲಸ ಮಾಡಬೇಕು. ರಾಜಕೀಯ ಪಕ್ಷಗಳು ಬರುತ್ತವೆ ಹೋಗುತ್ತವೆ, ಆದರೆ ಜನರು ಶಾಶ್ವತ. ತಪ್ಪು ಪಕ್ಷವನ್ನು ಆರಿಸಿದರೆ ನಷ್ಟವಾಗುವುದು ಜನರಿಗೇ ಎಂದರು.
”அவர் தெய்வ குழந்தை இல்ல..TEST TUBE BABY” மோடியை கலாய்த்த பிரகாஷ் ராஜ் #PrakashRaj #Modi #BJP pic.twitter.com/BvrJJEOGae
— ABP Nadu (@abpnadu) May 26, 2024
ಇದನ್ನೂ ಓದಿ: Comedy Khiladigalu: ನನ್ನ ಮಗ ಚಿನ್ನುವನ್ನು ಇದೇ ಕೈಯಲ್ಲಿ ಕಳ್ಕೊಂಡೆ: ಅನುಶ್ರೀ ಭಾವುಕ!