ನವದೆಹಲಿ: ಹವಾಮಾನ ಬದಲಾವಣೆಯ ಪರಿಣಾಮಗಳು ಗೋಚರವಾಗುತ್ತಿವೆ. 1901ರ ಬಳಿಕ ಅಂದರೆ, 122 ವರ್ಷದಲ್ಲೇ ಈ ಫೆಬ್ರವರಿ ಅತಿ ಹೆಚ್ಚು ಉಷ್ಣಾಂಶ ಕಂಡ ತಿಂಗಳವಾಗಿದೆ. ಭಾರತದ ಮಾಸಿಕ ಸರಾಸರಿ ಪ್ರಕಾರ ಫೆಬ್ರವರಿ ತಿಂಗಳಲ್ಲಿ 29.54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ಬೆಳವಣಿಗೆಯು ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಪರಿಣಾಮ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಕನಿಷ್ಠ ತಾಪಮಾನ ದಾಖಲಾದ ಬಗ್ಗೆಯೂ ಈ ಫೆಬ್ರವರಿ ದಾಖಲೆ ಬರೆದಿದೆ(Warmest February).
ಸರಾಸರಿ ಗರಿಷ್ಠ ಅಥವಾ ದಿನದ ತಾಪಮಾನವು ದೇಶಾದ್ಯಂತ ಸಾಮಾನ್ಯಕ್ಕಿಂತ 1.73 ಡಿಗ್ರಿ ಸೆಲ್ಸಿಯಸ್ ಮತ್ತು ಸರಾಸರಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 0.81 ಡಿಗ್ರಿ ಸೆಲ್ಸಿಯಸ್ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಭಾರತದಲ್ಲಿ ಫೆಬ್ರವರಿ ತಿಂಗಳನ್ನು ಸಾಮಾನ್ಯವಾಗಿ ಚಳಿಗಾಲದ ಮುಕ್ತಾಯದ ಅವಧಿ ಎಂದು ಭಾವಿಸಲಾಗುತ್ತದೆ. ಅಲ್ಲದೇ ಬೇಸಿಗೆ ಕಾಲದ ಆರಂಭ ಎನಿಸಿಕೊಳ್ಳುತ್ತದೆ. 2000ದಿಂದ ಈಚೆಗೆ ಈ ಫೆಬ್ರವರಿ ತಿಂಗಳಲ್ಲೇ ತಾಪಮಾನ ಹೆಚ್ಚುತ್ತಲೇ ಇದೆ.
ಇದನ್ನೂ ಓದಿ: Cold Wave | ಮರುಭೂಮಿ ರಾಜಸ್ಥಾನದಲ್ಲಿ ಮೈ ಹೆಪ್ಪುಗಟ್ಟುವಷ್ಟು ಚಳಿ; ಮೈನಸ್ 4.7 ಡಿಗ್ರಿ ತಾಪಮಾನ ದಾಖಲು
ಹಗಲಿನಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವ ಟ್ರೆಂಡ್ ಈ ವರ್ಷಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಕಳೆದ ದಶಕದಲ್ಲಿ ಫೆಬ್ರವರಿ ತಿಂಗಳಲ್ಲಿ ಗರಿಷ್ಠ ತಾಪಮಾನವು ಹಲವಾರು ಸಂದರ್ಭಗಳಲ್ಲಿ ಈ ಪ್ರದೇಶದಲ್ಲಿ 30-ಡಿಗ್ರಿ ಸೆಲ್ಸಿಯಸ್ ಗಡಿಯನ್ನು ಅನ್ನು ದಾಟಿದೆ ಎಂದು ಹೇಳಲಾಗಿದೆ.