Site icon Vistara News

BBC Documentary On Modi | ಮೋದಿ ಕುರಿತ ಡಾಕ್ಯುಮೆಂಟರಿ ಏಕಪಕ್ಷೀಯ, ಬ್ರಿಟನ್‌ ಸಂಸದ ಆಕ್ರೋಶ, ಬಿಬಿಸಿಗೆ ಪತ್ರ

Lord Rami Ranger On BBC Documentary

ಲಂಡನ್‌: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಆಕ್ಷೇಪಾರ್ಹ ಅಂಶಗಳಿರುವ, ಗೋದ್ರಾ ಹತ್ಯಾಕಾಂಡಕ್ಕೆ ಮೋದಿ ಅವರೇ ಕಾರಣ ಎಂಬುದಾಗಿ ಚಿತ್ರಿಸಿರುವ ಬಿಬಿಸಿ ಡಾಕ್ಯುಮೆಂಟರಿ (BBC Documentary On Modi) ವಿರುದ್ಧ ಬ್ರಿಟನ್‌ನಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ. ಇಂಡಿಯಾ: ದಿ ಮೋದಿ ಕ್ವಶ್ಚನ್‌ (India: The Modi Question) ಡಾಕ್ಯುಮೆಂಟರಿ ವಿಷಯದಲ್ಲಿ ಪ್ರಧಾನಿ ರಿಷಿ ಸುನಕ್‌ ಅವರು ಮೋದಿ ಪರ ಮಾತನಾಡಿದ ಬೆನ್ನಲ್ಲೇ ಬ್ರಿಟನ್‌ ಸಂಸದರೊಬ್ಬರು ಬಿಬಿಸಿ ಡಾಕ್ಯುಮೆಂಟರಿಯನ್ನು ಏಕಪಕ್ಷೀಯ ಎಂದು ಜರಿದಿದ್ದಾರೆ.

ಹೌದು, ಬ್ರಿಟನ್‌ ಸಂಸತ್‌ನ ಹೌಸ್‌ ಆಫ್‌ ಲಾರ್ಡ್ಸ್‌ ಸದಸ್ಯರಾಗಿರುವ ಲಾರ್ಡ್‌ ರಾಮಿ ರೇಂಜರ್‌ ಅವರು ಬಿಬಿಸಿ ಡಾಕ್ಯುಮೆಂಟರಿಯನ್ನು ಟೀಕಿಸುವ ಜತೆಗೆ ಬಿಬಿಸಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. “ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ನಿರ್ಮಿಸಿದ ಡಾಕ್ಯುಮೆಂಟರಿ ಬಿಡುಗಡೆ ಮಾಡಿರುವ ಸಮಯವೇ ಅಸಮಂಜಸ. ಅದು ಏಕಪಕ್ಷೀಯವಾಗಿ ಕೂಡಿದೆ. ಹಾಗಾಗಿ, ಡಾಕ್ಯುಮೆಂಟರಿಯ ಎರಡನೇ ಭಾಗವನ್ನು ಪ್ರಸಾರ ಮಾಡಬಾರದು” ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

“ಬ್ರಿಟನ್‌ನಲ್ಲಿ ಹಿಂದುಗಳು ಹಾಗೂ ಮುಸ್ಲಿಮರ ಮಧ್ಯೆ ಸಂಘರ್ಷ ತರುವ ವಿಚಾರಗಳಗಳನ್ನು ದೂರವಿಡಬೇಕು. ಆದರೆ, ಬಿಬಿಸಿ ಡಾಕ್ಯುಮೆಂಟರಿಯು ಇಂತಹ ಅಂಶ ಹೊಂದಿದೆ. ಇದು ದುರುದ್ದೇಶಪೂರ್ವಕಾಗಿ ನಿರ್ಮಿಸಿದ ಸಾಕ್ಷ್ಯಚಿತ್ರ” ಎಂದು ಜರಿದಿದ್ದಾರೆ. ಈಗಾಗಲೇ ಡಾಕ್ಯುಮೆಂಟರಿಯನ್ನು ಯುಟ್ಯೂಬ್‌ ತೆಗೆದುಹಾಕಿದೆ. ಭಾರತದಲ್ಲಿ ಇದರ ಪ್ರಸಾರ ಮಾಡುತ್ತಿಲ್ಲ. ಬಿಬಿಸಿ ವಿರುದ್ಧ ಕೇಂದ್ರ ಸರ್ಕಾರವೂ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ | Rishi Sunak | ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ವಿಷಯದಲ್ಲಿ ಭಾರತ ಪ್ರಧಾನಿ ಪರ ನಿಂತ ಬ್ರಿಟನ್‌ ಪ್ರಧಾನಿ ರಿಷಿ ಸುನಕ್

Exit mobile version