Site icon Vistara News

Tomato Price: ಕೆಜಿಗೆ 200 ರೂ. ಇದ್ದ ಟೊಮೆಟೋ ಬೆಲೆ ಈಗ ಕೇವಲ 2 ರೂಪಾಯಿ!

Tomato Price heavily come down and settled at RS 2 KG

ನವದೆಹಲಿ: ತಿಂಗಳ ಹಿಂದೆಯಷ್ಟೇ ಬಂಗಾರದ ಬೆಲೆ ಕಂಡಿದ್ದ ಟೊಮೆಟೋ (Tomato Price) ಈಗ ಬೀದಿಪಾಲಾಗುತ್ತಿದೆ! 200 ಕೆ.ಜಿ ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೋ ಈಗ ಬೆಲೆ ಕೇಳಿದ್ರೆ ನೀವು ಬೆಚ್ಚಿಬೀಳುತ್ತಿರಿ. ಟೊಮೆಟೋ ಬೆಲೆ ಈಗ ಎಷ್ಟು ಕುಸಿದಿದೆ ಎಂದರೆ, ಕೇವಲ 2 ರೂ.ಗೆ ಕೆ ಜಿ ಟೊಮೆಟೋ ಸಿಗುತ್ತಿದೆ. ಟೊಮೆಟೋ ಬೆಲೆ ತೀವ್ರವಾಗಿ ಕುಸಿದಿದ್ದರೆ ರೈತರು (Farmers) ಟೊಮೆಟೋವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಭಾರತದಲ್ಲಿ (India)ಅಸ್ಥಿರ ಬೆಲೆ ಏರಿಕೆ-ಇಳಿಕೆಯಿಂದಾಗಿ ರೈತರು ಮತ್ತು ಗ್ರಾಹಕರು (Consumers) ಹೇಗೆ ನಷ್ಟ ಅನುಭವಿಸುತ್ತಾರೆಂಬುದಕ್ಕೆ ಇದು ಮತ್ತೊಂದು ಉದಾಹರಣೆಯಷ್ಟೇ.

ಜುಲೈ ತಿಂಗಳಲ್ಲಿ ಹಣದುಬ್ಬರ ಏರಿಕೆಗೆ ಭಾರೀ ಕೊಡುಗೆಯನ್ನು ಟೊಮೆಟೋ ನೀಡಿತ್ತು. ಆದರೆ, ಅತಿಯಾದ ಪೂರೈಕೆಯಿಂದ ಪ್ರಮುಖ ಮಾರುಕಟ್ಟೆಗಳಲ್ಲಿ ಟೊಮೆಟೋ ಬೆಲೆ ಕುಸಿತ ಕಂಡಿವೆ. ಕೆಲವು ವಾರಗಳಲ್ಲಿ ಕೆಲವು ಮಾರುಕಟ್ಟೆಗಳಲ್ಲಿ ಕ್ವಿಂಟಲ್‌ಗೆ ಸುಮಾರು 8000 ರೂ.ನಿಂದ 200-300 ರೂ.ಕ್ಕೆ ತಲುಪಿದೆ ಎನ್ನುತ್ತಾರೆ ರೈತರು. ರೈತರಿಗೆ ಬೆಲೆ ಮಾಹಿತಿಯ ಕೊರತೆ, ಕಡಿಮೆ ಮಟ್ಟದ ಆಹಾರ ಸಂಸ್ಕರಣೆ ಟೊಮೆಟೋ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಟೊಮೆಟೋ ವಿಷಯದಲ್ಲಾಗುತ್ತಿರುವ ಈ ಬೆಳವಣಿಗೆಯನ್ನು ಅರ್ಥಶಾಸ್ತ್ರಜ್ಞರು ಕೋವೆಬ್ ಫೆನೋಮೆನನ್(ಜೈಡನ ಜಾಲ ವಿದ್ಯಮಾನ) ಎಂದು ಗುರುತಿಸುತ್ತಾರೆ.

ಜುಲೈನಲ್ಲಿ ಸರಾಸರಿ ಚಿಲ್ಲರೆ ಟೊಮೆಟೊ ಬೆಲೆ ಜೂನ್‌ನಲ್ಲಿ ತಿಂಗಳಲ್ಲಿ ಕೆಜಿ 30ರಿಂದ 109 ರೂ.ಗೆ ಏರಿಕೆಯಾಗಿತ್ತು. ಇದರಿಂದಾಗಿ ಗ್ರಾಹಕರ ಹಣದುಬ್ಬರದಲ್ಲಿ 7.44% ಹೆಚ್ಚಳವಾಯಿತು. ಇದು 15 ತಿಂಗಳ ಗರಿಷ್ಠ ಎನಿಸಿಕೊಂಡಿತು. ತರಕಾರಿಗಳ ಬೆಲೆಯನ್ನು ತಗ್ಗಿಸಿದ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರವು 6.83% ಕ್ಕೆ ಇಳಿದಿದೆ.

ಈ ಸುದ್ದಿಯನ್ನೂ ಓದಿ: Tomatoes: ಟೊಮೆಟೋ ದರ ಇಳಿಕೆಯಾಗಬೇಕಿದ್ದರೆ, ಟೊಮೆಟೋ ತಿನ್ನಬೇಡಿ! ಉತ್ತರ ಪ್ರದೇಶ ಸಚಿವೆ ಸಲಹೆ

ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಟೊಮೆಟೋಗೆ ಬಂಗಾರದ ಬೆಲೆ ಬಂದಿತ್ತು. ವಿಶೇಷವಾಗಿ ಉತ್ತರ ಭಾರತದಲ್ಲಿ ಕೆಜಿ ಟೊಮೆಟೋಗೆ 200 ರೂಪಾಯಿ ಇತ್ತು. ದಿಲ್ಲಿಯಲ್ಲಿ ಮುಗಿಲು ಮುಟ್ಟಿದ ಟೊಮೆಟೋ ದರವನ್ನು ತಗ್ಗಿಸಲು ಕೇಂದ್ರ ಸರ್ಕಾರವು ದಕ್ಷಿಣ ಭಾರತದಿಂದ ಟೊಮೆಟೋ ಆಮದು ಮಾಡಿಕೊಂಡಿತ್ತು. ಅಲ್ಲದೇ, ಕೆಲವು ಕ್ರಮಗಳನ್ನು ಕೈಗೊಂಡು ಬೆಲೆ ನಿಯಂತ್ರಣಕ್ಕೆ ಮುಂದಾಗಿತ್ತು. ಆ ನಂತರದ ದಿನದಲ್ಲಿ ಟೊಮೆಟೋ ಬೆಲೆ ನಿಯಂತ್ರಣಕ್ಕೆ ಬಂದಿತ್ತಾದರೂ, ಈಗ ಸಂಪೂರ್ಣವಾಗಿ ನಲೆ ಕಚ್ಚಿದೆ. ರೈತರು ತೀವ್ರ ನಷ್ಟವನ್ನು ಅನಭವಿಸುತ್ತಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version