ಚಂಡೀಗಢ: ಕೆಲವೇ ತಿಂಗಳ ಹಿಂದೆ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಭಗವಂತ್ ಮಾನ್ ಇದೀಗ ಜೀವನದಲ್ಲಿ ಎರಡನೇ ಬಾರಿ ವೈವಾಹಿಕ ಬದುಕಿಗೆ ಕಾಲಿಡಲು ಸಿದ್ಧರಾಗಿದ್ದಾರೆ. ಜುಲೈ ೭ರಂದು (ಗುರುವಾರ) ತಮ್ಮ ಖಾಸಗಿ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಅವರು ವಿವಾಹವಾಗಲಿದ್ದಾರೆ.
೪೯ ವರ್ಷದ ಭಗವಂತ್ ಮಾನ್ ಮೊದಲ ಪತ್ನಿ ಇಂದ್ರಜೀತ್ ಕೌರ್ ಜೊತೆ ವಿಚ್ಚೇದನಾವಾದ 6 ವರ್ಷಗಳ ಬಳಿಕ ಎರಡನೇ ಮದುವೆಗೆ ತಯಾರಾಗಿದ್ದು, ಚಂಡಿಗಡದಲ್ಲಿರುವ ಅವರ ಖಾಸಗಿ ನಿವಾಸದಲ್ಲಿ ಮದುವೆ ಕಾರ್ಯಕ್ರಮ ನೇರವೇರಲಿದೆ. ಅವರೀಗ ಎಂಬಿಬಿಎಸ್ ಪದವಿಧರೆಯಾಗಿರುವ ಡಾ. ಗುರ್ಪ್ರೀತ್ ಕೌರ್ ಅವರನ್ನು ಕೈ ಹಿಡಿಯಲಿದ್ದು. ಇವರ ವಿವಾಹ ಸಮಾರಂಭದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಭಾಗಿಯಾಗಲಿದ್ದಾರೆ. ವರದಿಗಳ ಪ್ರಕಾರ ಸಿಎಂ ಭಗವಂತ್ ಮಾನ್‌ಗೆ ತಾಯಿ ಮತ್ತು ತಂಗಿಯೇ ಹುಡುಗಿಯನ್ನು ಹುಡುಕಿ ಮದುವೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ| ಆಪ್‌ಗೆ ಮುಖಭಂಗ; ಭಗವಂತ್ ಮಾನ್ ಸಂಸದರಾಗಿದ್ದ ಕ್ಷೇತ್ರದಲ್ಲಿ ಎಸ್‌ಎಡಿ-ಎ ಅಭ್ಯರ್ಥಿಗೆ ಗೆಲುವು
ಭಗವಂತ್ ಮಾನ್ ಮೊದಲನೆ ಪತ್ನಿ ಯುಎಸ್ಎನಲ್ಲಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಇಬ್ಬರು ಮಕ್ಕಳು ಭಗವಂತ್ ಮಾನ್ ಪಂಜಾಬ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಪಂಜಾಬ್ನ ನೂತನ ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣ ವಚನ ತೆಗೆದುಕೊಂಡಿದ್ದರು. ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಪಂಜಾಬ್ನಲ್ಲಿ ಎಎಪಿ ಪಕ್ಷ ಹೊಸ ಮೈಲಿಗಲ್ಲನ್ನು ಸೃಷ್ಟಿಸಿತ್ತು. ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಭಗವಂತ್ ಮಾನ್ರನ್ನೇ ಸಿಎಂ ಆಗಿ ಘೋಷಣೆ ಮಾಡಿದ್ದರು. ಪದಗ್ರಹಣ ಕೂಡ ನೇರವೇರಿತ್ತು. ಅಲ್ಲದೆ ಇತ್ತೀಚೆಗಷ್ಟೇ ತಮ್ಮ ಸಂಪುಟವನ್ನು ವಿಸ್ತರಣೆ ಮಾಡಿದ್ದರು. ಈಗ ಕುಟುಂಬವನ್ನು ವಿಸ್ತರಿಸಿಕೊಳ್ಳುತ್ತಿದ್ದು, ನಾಳೆ ವೈದ್ಯೆಯಾಗಿರುವ ಗುರುಪ್ರೀತ್ ಕೌರ್ ಜೊತೆ ಹಸೆಮಣೆ ಏರಲಿದ್ದಾರೆ.
ಇದನ್ನು ಓದಿ| ಪಂಜಾಬ್ ಆಮ್ ಆದ್ಮಿ ಸರ್ಕಾರದ ಮೊದಲ ಬಜೆಟ್ ಮಂಡನೆ; ರೈತರು, ವಿದ್ಯಾರ್ಥಿಗಳಿಗೆ ಬಂಪರ್