Site icon Vistara News

B L Santosh | ಬಿ.ಎಲ್‌.‌ ಸಂತೋಷ್‌ಗೆ ತೆಲಂಗಾಣ ಎಸ್‌ಐಟಿ ಸಮನ್ಸ್, ಏನಿದು ಪ್ರಕರಣ?

Summons To BL Santosh

ಹೈದರಾಬಾದ್‌: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರಿಗೆ ತೆಲಂಗಾಣದ ವಿಶೇಷ ತನಿಖಾ ತಂಡ (SIT) ಸಮನ್ಸ್‌ (B L Santosh) ಜಾರಿಗೊಳಿಸಿದೆ. ನವೆಂಬರ್‌ 21ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ಸೂಚಿಸಿದೆ.

ತೆಲಂಗಾಣದಲ್ಲಿ ಬಿಜೆಪಿಯು “ಆಪರೇಷನ್‌ ಕಮಲ”ಕ್ಕೆ ಯತ್ನಿಸುತ್ತಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ನಾಲ್ವರು ಶಾಸಕರಿಗೆ 100 ಕೋಟಿ ರೂ. ಆಫರ್‌ ನೀಡಲಾಗಿದೆ ಎಂದು ಟಿಆರ್‌ಎಸ್‌ ಶಾಸಕರೇ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಲಾಗಿದೆ.

ಶಾಸಕರ ಖರೀದಿಗೆ ಆಫರ್‌ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದಾದ ಬಳಿಕ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ತನಿಖೆ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದ್ದಲ್ಲದೆ, ಒಬ್ಬ ನ್ಯಾಯಮೂರ್ತಿಯು ಪ್ರಕರಣದ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿದೆ. ಇದರ ಬೆನ್ನಲ್ಲೇ ಎಸ್‌ಐಟಿಯು ಸಮನ್ಸ್‌ ಜಾರಿಗೊಳಿಸಿದೆ.

ಇದನ್ನೂ ಓದಿ | Operation TRS MLAs | ತೆಲಂಗಾಣದಲ್ಲಿ ಟಿಆರ್‌ಎಸ್‌ನ 4 ಶಾಸಕರ ಖರೀದಿಗೆ 150 ಕೋಟಿ ರೂ. ಆಫರ್‌, ಯಾವ ಪಕ್ಷ ಸಾರಥಿ?

Exit mobile version