Site icon Vistara News

Trans Couple Pregnancy: ಮಗುವಿನ ನಿರೀಕ್ಷೆಯಲ್ಲಿ ಕೇರಳದ ತೃತೀಯ ಲಿಂಗಿ ಜೋಡಿ, ಇದು ದೇಶದಲ್ಲೇ ಮೊದಲು

Trans Couple Pregnancy

#image_title

ತಿರುವನಂತಪುರಂ: ದೇಶದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿ ಜೋಡಿಯೊಂದು (Trans Couple Pregnancy) ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೇರಳದ ಕಲ್ಲಿಕೋಟೆಯಲ್ಲಿ ತೃತೀಯ ಲಿಂಗಿಗಳಾದ ಜಿಯಾ ಪಾವಲ್‌ ಹಾಗೂ ಜಹಾದ್‌ ಜೋಡಿಯು ಮಾರ್ಚ್‌ನಲ್ಲಿ ತಂದೆ-ತಾಯಿ ಆಗಲಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಗರ್ಭ ಧರಿಸಿದ ಪ್ರಕರಣ ಇದಾಗಿರುವ ಕಾರಣ ಎಲ್ಲರ ಗಮನ ಸೆಳೆದಿದೆ. ಮಾರ್ಚ್‌ನಲ್ಲಿ ಹೆರಿಗೆಯಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹುಡುಗನಾಗಿ ಹುಟ್ಟಿದ ಜಯಾ ಪಾವಲ್‌ ಲಿಂಗ ಬದಲಾವಣೆ ಮೂಲಕ ಹೆಣ್ಣಾಗಿ ಬದಲಾಗಿದ್ದಾರೆ. ಅತ್ತ, ಹುಡುಗಿಯಾಗಿ ಹುಟ್ಟಿದ್ದ ಜಹಾದ್‌ ಹುಡುಗನಾಗಿ ಬದಲಾಗಿದ್ದಾರೆ. ಇಬ್ಬರೂ ಕಳೆದ ಮೂರು ವರ್ಷದಿಂದ ಒಟ್ಟಿಗೆ ಜೀವಿಸುತ್ತಿದ್ದು (Living Together), ಈಗ ಜಿಯಾ ಗರ್ಭಿಣಿಯಾಗಿದ್ದಾರೆ. ಲಿಂಗ ಪರಿವರ್ತನೆ ವೇಳೆ ಜಹಾದ್‌ ದೇಹದಲ್ಲಿದ್ದ ಗರ್ಭಕೋಶ ಸೇರಿ ಹಲವು ಅಂಗಗಳನ್ನು ತೆಗೆಯದ ಕಾರಣ ಅವರೀಗ ಗರ್ಭ ಧರಿಸಿದ್ದಾರೆ.

ಜಯಾ ಪಾವಲ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಸಂತಸ ಹಂಚಿಕೊಂಡಿದ್ದು, ಸಾವಿರಾರು ಜನ ಶುಭಾಶಯ ತಿಳಿಸಿದ್ದಾರೆ. ಆದರೆ, ಲಿಂಗ ಬದಲಾವಣೆ ವೇಳೆ ಜಹಾದ್‌ ಅವರ ಸ್ತನಗಳನ್ನು ತೆಗೆದ ಕಾರಣ ಮಗುವಿಗೆ ಸ್ತನಪಾನ ಮಾಡಿಸಲು ಆದರೆ, ಆಸ್ಪತ್ರೆಯಲ್ಲಿರುವ ಮಿಲ್ಕ್‌ ಬ್ಯಾಂಕ್‌ನಿಂದ ಮಗುವಿಗೆ ಹಾಲು ಕುಡಿಸಬಹುದಾಗಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಹಾಗಾಗಿ, ಜೋಡಿಯ ಸಂತಸ ಹೆಚ್ಚಾಗಿದೆ.

ಇದನ್ನೂ ಓದಿ: Transgender Teacher | ತೃತೀಯ ಲಿಂಗಿ ಮೀಸಲಾತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಪೂಜಾ ಆಯ್ಕೆ

Exit mobile version