Trans Couple Pregnancy: ಮಗುವಿನ ನಿರೀಕ್ಷೆಯಲ್ಲಿ ಕೇರಳದ ತೃತೀಯ ಲಿಂಗಿ ಜೋಡಿ, ಇದು ದೇಶದಲ್ಲೇ ಮೊದಲು - Vistara News

ದೇಶ

Trans Couple Pregnancy: ಮಗುವಿನ ನಿರೀಕ್ಷೆಯಲ್ಲಿ ಕೇರಳದ ತೃತೀಯ ಲಿಂಗಿ ಜೋಡಿ, ಇದು ದೇಶದಲ್ಲೇ ಮೊದಲು

Trans Couple Pregnancy: ಕೇರಳದ ತೃತೀಯ ಲಿಂಗಿ ಜೋಡಿಯು ಕಳೆದ ಮೂರು ವರ್ಷದಿಂದ ಲಿವಿಂಗ್‌ ಟುಗೆದರ್‌ನಲ್ಲಿದ್ದಾರೆ. ಈಗ ಇಬ್ಬರೂ ತಂದೆ-ತಾಯಿ ಆಗುತ್ತಿದ್ದು, ತೃತೀಯ ಲಿಂಗಿಯೊಬ್ಬರು ಗರ್ಭ ಧರಿಸುತ್ತಿರುವ ಪ್ರಕರಣ ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ.

VISTARANEWS.COM


on

Trans Couple Pregnancy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ದೇಶದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿ ಜೋಡಿಯೊಂದು (Trans Couple Pregnancy) ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೇರಳದ ಕಲ್ಲಿಕೋಟೆಯಲ್ಲಿ ತೃತೀಯ ಲಿಂಗಿಗಳಾದ ಜಿಯಾ ಪಾವಲ್‌ ಹಾಗೂ ಜಹಾದ್‌ ಜೋಡಿಯು ಮಾರ್ಚ್‌ನಲ್ಲಿ ತಂದೆ-ತಾಯಿ ಆಗಲಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಗರ್ಭ ಧರಿಸಿದ ಪ್ರಕರಣ ಇದಾಗಿರುವ ಕಾರಣ ಎಲ್ಲರ ಗಮನ ಸೆಳೆದಿದೆ. ಮಾರ್ಚ್‌ನಲ್ಲಿ ಹೆರಿಗೆಯಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹುಡುಗನಾಗಿ ಹುಟ್ಟಿದ ಜಯಾ ಪಾವಲ್‌ ಲಿಂಗ ಬದಲಾವಣೆ ಮೂಲಕ ಹೆಣ್ಣಾಗಿ ಬದಲಾಗಿದ್ದಾರೆ. ಅತ್ತ, ಹುಡುಗಿಯಾಗಿ ಹುಟ್ಟಿದ್ದ ಜಹಾದ್‌ ಹುಡುಗನಾಗಿ ಬದಲಾಗಿದ್ದಾರೆ. ಇಬ್ಬರೂ ಕಳೆದ ಮೂರು ವರ್ಷದಿಂದ ಒಟ್ಟಿಗೆ ಜೀವಿಸುತ್ತಿದ್ದು (Living Together), ಈಗ ಜಿಯಾ ಗರ್ಭಿಣಿಯಾಗಿದ್ದಾರೆ. ಲಿಂಗ ಪರಿವರ್ತನೆ ವೇಳೆ ಜಹಾದ್‌ ದೇಹದಲ್ಲಿದ್ದ ಗರ್ಭಕೋಶ ಸೇರಿ ಹಲವು ಅಂಗಗಳನ್ನು ತೆಗೆಯದ ಕಾರಣ ಅವರೀಗ ಗರ್ಭ ಧರಿಸಿದ್ದಾರೆ.

ಜಯಾ ಪಾವಲ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಸಂತಸ ಹಂಚಿಕೊಂಡಿದ್ದು, ಸಾವಿರಾರು ಜನ ಶುಭಾಶಯ ತಿಳಿಸಿದ್ದಾರೆ. ಆದರೆ, ಲಿಂಗ ಬದಲಾವಣೆ ವೇಳೆ ಜಹಾದ್‌ ಅವರ ಸ್ತನಗಳನ್ನು ತೆಗೆದ ಕಾರಣ ಮಗುವಿಗೆ ಸ್ತನಪಾನ ಮಾಡಿಸಲು ಆದರೆ, ಆಸ್ಪತ್ರೆಯಲ್ಲಿರುವ ಮಿಲ್ಕ್‌ ಬ್ಯಾಂಕ್‌ನಿಂದ ಮಗುವಿಗೆ ಹಾಲು ಕುಡಿಸಬಹುದಾಗಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಹಾಗಾಗಿ, ಜೋಡಿಯ ಸಂತಸ ಹೆಚ್ಚಾಗಿದೆ.

ಇದನ್ನೂ ಓದಿ: Transgender Teacher | ತೃತೀಯ ಲಿಂಗಿ ಮೀಸಲಾತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಪೂಜಾ ಆಯ್ಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ರೈಲ್ವೇ ಇಲಾಖೆಯ ಸುಧಾರಣೆ ಕ್ರಮಗಳು ಪ್ರಶಂಸಾರ್ಹ

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳಲ್ಲೂ ಬದಲಾವಣೆ, ಹೊಸತನ ತರುತ್ತಿದ್ದಾರೆ. ಹೆದ್ದಾರಿ ಸಾರಿಗೆಯಲ್ಲಿ ನಿತಿನ್‌ ಗಡ್ಕರಿ ಅವರ ನೇತೃತ್ವದಲ್ಲಿ ಆಗಿರುವ ಸಾಧನೆಯೇ ಇದಕ್ಕೆ ಸಾಕ್ಷಿ. ಇದೇ ರೀತಿ ರೈಲ್ವೆಯಲ್ಲೂ ಆಗಬೇಕಿದೆ.

VISTARANEWS.COM


on

Modi
Koo

ಮುಂದಿನ 5 ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಯಾಣಿಕರಿಗೂ (Railway Ticket) ಕನ್ಫರ್ಮ್ಡ್‌ ಟಿಕೆಟ್‌ (Confirmed Tickets) ಸಿಗಲಿವೆ. ಇದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಗ್ಯಾರಂಟಿ- ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ದೇಶಾದ್ಯಂತ ರೈಲುಗಳನ್ನು ಹೆಚ್ಚಿಸಿ, ಪ್ರತಿಯೊಬ್ಬ ಪ್ರಯಾಣಿಕರಿಗೆ ಕನ್ಫರ್ಮ್ಡ್‌ ಟಿಕೆಟ್‌ ಸಿಗುವಂತೆ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರು ವೇಟಿಂಗ್‌ ಲಿಸ್ಟ್‌ ನೋಡುತ್ತ ಕಾಯುವುದು ತಪ್ಪುತ್ತದೆ. ಎಲ್ಲರಿಗೂ ಸುಲಭವಾಗಿ ರೈಲು ಟಿಕೆಟ್‌ ಕೊಡುವಂತೆ ಮಾಡುವುದು ನಮ್ಮ ಆದ್ಯತೆ ಎಂದಿದ್ದಾರೆ ಸಚಿವರು. ಇದು ದೇಶದ ರೈಲ್ವೇ ವ್ಯವಸ್ಥೆಯ ಸುಧಾರಣೆಗಳಲ್ಲಿ ಒಂದು ವಿಚಾರ ಮಾತ್ರ.

ಕಳೆದ 10 ವರ್ಷಗಳಲ್ಲಿ ದೇಶದ ರೈಲ್ವೇ ವ್ಯವಸ್ಥೆಯನ್ನು ಸಾಕಷ್ಟು ಆಧುನೀಕರಣಗೊಳಿಸಲಾಗಿದೆ. ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ವಂದೇ ಭಾರತ್‌ನಂತಹ ಅತ್ಯಾಧುನಿಕ ರೈಲುಗಳನ್ನು ಪರಿಚಯಿಸಲಾಗಿದೆ. ದೇಶಾದ್ಯಂತ ರೈಲ್ವೆ ಪ್ರಯಾಣಿಕರಿಗೆ ಹೊಸ ಸೌಲಭ್ಯ, ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಪ್ರಯತ್ನಪಡುತ್ತಿದೆ. ಅದೇ ರೀತಿ ಪ್ರಯಾಣಿಕರು ಸುಲಭವಾಗಿ ಹಾಗೂ ಕ್ಷಿಪ್ರವಾಗಿ ರೈಲು ಟಿಕೆಟ್‌ಗಳನ್ನು ಪಡೆಯುವಂತೆ ಮಾಡುವುದು ಮೊದಲ ಆದ್ಯತೆ. ಇದಕ್ಕಾಗಿ ಇನ್ನಷ್ಟು ರೈಲುಗಳ ಓಡಾಟ, ದೇಶಾದ್ಯಂತ ರೈಲುಗಳ ವಿಸ್ತರಣೆ, ರೈಲ್ವೆ ಲೇನ್‌ಗಳನ್ನು ವಿಸ್ತರಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. 2014ರಿಂದ 2024ರ ಅವಧಿಯಲ್ಲಿ ದೇಶಾದ್ಯಂತ 31 ಸಾವಿರ ಹೊಸ ಟ್ರ್ಯಾಕ್‌ಗಳನ್ನು ಅಳವಡಿಸಲಾಗಿದೆ. 2004ರಿಂದ 2014ರ ಅವಧಿಯಲ್ಲಿ 5 ಸಾವಿರ ಕಿಲೋಮೀಟರ್‌ ರೈಲು ಮಾರ್ಗ ವಿದ್ಯುದ್ದೀಕರಣವಾಗಿದ್ದರೆ, 2014ರಿಂದೀಚೆಗೆ ವಿದ್ಯುದ್ದೀಕರಣದ ಪ್ರಮಾಣವು 44 ಸಾವಿರ ಕಿಲೋಮೀಟರ್‌ಗೆ ಏರಿಕೆಯಾಗಿದೆ. ಕಳೆದ 10 ವರ್ಷದಲ್ಲಿ 54 ಸಾವಿರ ಬೋಗಿಗಳನ್ನು ತಯಾರಿಸಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿಯವರು 41 ಸಾವಿರ ಕೋಟಿ ರೂ. ವೆಚ್ಚದ 2000 ರೈಲ್ವೆ ಪ್ರಾಜೆಕ್ಟ್‌ಗಳನ್ನು ದೇಶಾದ್ಯಂತ ಲೋಕಾರ್ಪಣೆ ಮಾಡಿದ್ದರು. ಈ ಮೊದಲು ರೈಲ್ವೆ ಇಲಾಖೆ ಎಂದರೆ ನಷ್ಟ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಅದೇ ರೈಲ್ವೆಯು ಪರಿವರ್ತನೆಯ ಬಹುದೊಡ್ಡ ಶಕ್ತಿಯಾಗಿ ಬದಲಾಗಿದೆ. ಬುಲೆಟ್‌ ರೈಲು ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಬುಲೆಟ್‌ ರೈಲು ಯೋಜನೆಯು ಸಂಪರ್ಕ ಕ್ರಾಂತಿ ಜತೆಗೆ ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಬುಲೆಟ್‌ ರೈಲು ಸಂಚರಿಸುವ ಮುಂಬೈ, ವಾಪಿ, ಬರೋಡಾ, ಸೂರತ್‌, ಆನಂದ್‌ ಹಾಗೂ ಅಹಮದಾಬಾದ್‌ ನಗರಗಳು ಆರ್ಥಿಕ ನಗರಗಳಾಗಿ ಬದಲಾಗಲಿವೆ. ಈ ನಗರಗಳಲ್ಲಿ ಪ್ರತ್ಯೇಕ ಆರ್ಥಿಕತೆಯೇ ಸೃಷ್ಟಿಯಾಗಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದರು. ಮೊದಲ ಬುಲೆಟ್‌ ರೈಲು ಯೋಜನೆಗೆ 1.08 ಲಕ್ಷ ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದಕ್ಕೆ ಜಪಾನ್‌ ಸರ್ಕಾರ ಕೇವಲ 0.1ರ ಬಡ್ಡಿದರದಲ್ಲಿ ಸಾಲ ನೀಡಿದೆ.

ಸಣ್ಣಪುಟ್ಟ ಸಂಗತಿಗಳಲ್ಲೂ ರೈಲ್ವೇ ಇಲಾಖೆ ಸುಧಾರಣೆ ತರುತ್ತಿದೆ. ಉದಾಹರಣೆಗೆ, ಐಆರ್‌ಟಿಸಿ (Indian Railway Catering and Tourism Corporation) ವೆಬ್‌ಸೈಟ್‌ನಿಂದ ಕಾಯ್ದಿರಿಸಿದ ಆರ್‌ಎಸಿ (Reservation Against Cancellation) ಟಿಕೆಟ್‌ಗಳನ್ನು ರದ್ದುಗೊಳಿಸಲು ಕನಿಷ್ಠ ಶುಲ್ಕವನ್ನು (60 ರೂ. ಮಾತ್ರ) ವಿಧಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಅಂದರೆ ಈ ಮೊದಲಿನ ಅನಿಯಂತ್ರಿತ ಶುಲ್ಕ ಇನ್ನು ಇರುವುದಿಲ್ಲ. ಕಳೆದ ಮೂರು ವರ್ಷಗಳಲ್ಲಿ ರೈಲ್ವೇಯು ವೈಟಿಂಗ್‌ ಟಿಕೆಟ್‌ಗಳ ರದ್ದತಿಯಿಂದ ಬರೋಬ್ಬರಿ 1,230 ಕೋಟಿ ರೂ. ಆದಾಯ ಗಳಿಸಿದೆ. ಈ ಹಣದುಬ್ಬರದ ಕಾಲದಲ್ಲೂ ಕನಿಷ್ಠ ಪ್ರಯಾಣಿಕ ಹಾಗೂ ಸರಕು ಸಾಗಣೆ ಶುಲ್ಕವನ್ನು ರೈಲ್ವೇಯು ಹೊಂದಿರುವುದರಿಂದ, ಸಾರ್ವಜನಿಕ ಸೇವೆಯ ಮಾಧ್ಯಮವೂ ಆಗಿದೆ. ಹೀಗಾಗಿ ರೈಲ್ವೆಯಲ್ಲಿ ಆಗುವ ಸುಧಾರಣೆಯು ಇನ್ನೊಂದು ರೀತಿಯಲ್ಲಿ ಬಡ- ಮಧ್ಯಮ- ಕೆಳವರ್ಗದ ಜನತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯವನ್ನು ನೀಡುವ ಉಪಕ್ರಮವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳಲ್ಲೂ ಬದಲಾವಣೆ, ಹೊಸತನ ತರುತ್ತಿದ್ದಾರೆ. ಹೆದ್ದಾರಿ ಸಾರಿಗೆಯಲ್ಲಿ ನಿತಿನ್‌ ಗಡ್ಕರಿ ಅವರ ನೇತೃತ್ವದಲ್ಲಿ ಆಗಿರುವ ಸಾಧನೆಯೇ ಇದಕ್ಕೆ ಸಾಕ್ಷಿ. ಇದೇ ರೀತಿ ರೈಲ್ವೆಯಲ್ಲೂ ಆಗಬೇಕಿದೆ.

ಇದನ್ನೂ ಓದಿ: Railway Ticket: ಎಲ್ಲರಿಗೂ ರೈಲ್ವೆ ಟಿಕೆಟ್‌, ವೇಟಿಂಗ್‌ ಮಾತೇ ಇಲ್ಲ; ಕೇಂದ್ರ ಮಹತ್ವದ ಘೋಷಣೆ!

Continue Reading

ದೇಶ

ಪ್ರಧಾನಿ ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

ವಕೀಲ ಜೈ ಅನಂತ್‌ ದೇಹದ್ರಾಯಿ ವಿರುದ್ಧ ಬಿಜು ಜನತಾ ದಳ (BJD) ಸಂಸದ ಪಿನಾಕಿ ಮಿಶ್ರಾ ಅವರು ದಾಖಲಿಸಿದ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ ಮಹತ್ವದ ಪ್ರಸ್ತಾಪ ಮಾಡಿದೆ. ದೇಶದ ಪ್ರಧಾನಿ ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹಕ್ಕೆ ಸಮನಾಗಿದೆ. ಇದು ಗಂಭೀರ ಅಪರಾಧ ಪ್ರಕರಣವಾಗಿದೆ ಎಂದು ಕೋರ್ಟ್‌ ತಿಳಿಸಿದೆ.

VISTARANEWS.COM


on

PM
Koo

ನವದೆಹಲಿ: “ಭಾರತದ ಪ್ರಧಾನಿ (Prime Minister) ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹಕ್ಕೆ (Treason) ಸಮನಾಗಿದೆ” ಎಂದು ದೆಹಲಿ ಹೈಕೋರ್ಟ್‌ (Delhi High Court) ಮೌಖಿಕವಾಗಿ ಉಲ್ಲೇಖಿಸಿದೆ. ವಕೀಲ ಜೈ ಅನಂತ್‌ ದೇಹದ್ರಾಯಿ ಅವರ ವಿರುದ್ಧ ಹಿರಿಯ ವಕೀಲರೂ ಆಗಿರುವ ಬಿಜು ಜನತಾ ದಳ (BJD) ಸಂಸದ ಪಿನಾಕಿ ಮಿಶ್ರಾ (Pinaki Mishra) ಅವರು ದಾಖಲಿಸಿದ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರು ಈ ರೀತಿ ಹೇಳಿದ್ದಾರೆ.

“ದೇಶದ ಪ್ರಧಾನಿ ವಿರುದ್ಧ ಷಡ್ಯಂತ್ರ ಮಾಡುವುದು ದೇಶದ್ರೋಹಕ್ಕೆ ಸಮನಾಗಿದೆ. ಇದು ಐಪಿಸಿ ಅಡಿಯಲ್ಲಿ ಗಂಭೀರ ಅಪರಾಧ ಎನಿಸಲಿದೆ” ಎಂದು ಹೈಕೋರ್ಟ್‌ ತಿಳಿಸಿತು. “ದೇಶದ ಪ್ರಧಾನಿ ಬಗ್ಗೆ ಪಿತೂರಿ ನಡೆಸುತ್ತಿದ್ದಾರೆ ಎಂದು ಯಾರೂ ಕೂಡ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಪ್ರಧಾನಿ ವಿರುದ್ಧ ಪಿತೂರಿ ನಡೆಸಲಾಗಿದೆ ಎಂಬ ಆರೋಪವು ಜವಾಬ್ದಾರಿತನದಿಂದಲೂ, ಸಮಂಜಸ ಕಾರಣಗಳಿಂದಲೂ ಕೂಡಿರಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಜೈ ಅನಂತ್‌ ದೇಹದ್ರಾಯಿ ಅವರ ಪರ ವಾದ ಮಂಡಿಸಿದ ವಕೀಲರು, “ಪಿನಾಕಿ ಮಿಶ್ರಾ ಅವರು ಪ್ರಧಾನಿ ಅವರನ್ನು ಗುರಿಯಾಗಿಸಿ ಪಿತೂರಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು. ಆಗ ನ್ಯಾಯಾಲಯವು, “ನೀವು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿದರೆ ಪರವಾಗಿಲ್ಲ. ಆದರೆ, ಪಿನಾಕಿ ಮಿಶ್ರಾ ಅವರು ದೇಶದ ಪ್ರಧಾನಿ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂಬುದು ಗಂಭೀರ ಆರೋಪವಾಗಿದೆ. ಇದು ದೇಶದ ಪ್ರಮುಖ ಹುದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿ ಆರೋಪ ಮಾಡುವ ಮುನ್ನ ಯೋಚಿಸಬೇಕು” ಎಂದು ಸ್ಪಷ್ಟಪಡಿಸಿತು.

“ಪಿನಾಕಿ ಮಿಶ್ರಾ ಅವರು ದೇಶದ ರಾಜಕಾರಣಿಯಾಗಿದ್ದಾರೆ. ಅವರು ವಕೀಲರು ಕೂಡ ಆಗಿದ್ದಾರೆ. ಅವರ ವಿರುದ್ಧ ಇಂತಹ ಆರೋಪ ಮಾಡಲು ಯಾವ ಸಾಕ್ಷ್ಯಾಧಾರಗಳಿವೆ? ಸುಖಾಸುಮ್ಮನೆ ಆರೋಪ ಮಾಡುವುದು ಸಮಂಜಸವಲ್ಲ. ಹೀಗೆಯೇ ಆರೋಪಿಸಿದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ” ಎಂದು ನ್ಯಾಯಾಲಯವು ಖಡಕ್‌ ಎಚ್ಚರಿಕೆ ನೀಡಿತು. “ಪಿನಾಕಿ ಮಿಶ್ರಾ ಅವರು ಪ್ರಧಾನಿ ವಿರುದ್ಧ ಹೇಗೆ ಪಿತೂರಿ ನಡೆಸಿದ್ದಾರೆ ಎಂಬುದರ ಕುರಿತು ಸಾಕ್ಷ್ಯಾಧಾರ ಒದಗಿಸಲಾಗುವುದು” ಎಂದು ದೇಹದ್ರಾಯ್‌ ಪರ ವಕೀಲರು ತಿಳಿಸಿದಾಗ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿಗೆ ‘ಪ್ರಾಮಿಸ್ಡ್ ನೇಷನ್’ ಪುಸ್ತಕ ಅರ್ಪಣೆ

Continue Reading

ದೇಶ

PUBG Love: ಪಬ್ಜಿ ಆಡುವಾಗ ಸಿಕ್ಕ ಮುಸ್ಲಿಂ ಯುವಕನ ಜತೆ ಹಿಂದು ಯುವತಿ ಮದುವೆ; ಈಗ ಬಾಳೇ ನರಕ!

PUBG Love: ಮಹಾರಾಷ್ಟ್ರದ ಮುಂಬೈನವರಾದ ಹಿಂದು ಯುವತಿಯು ಪಬ್ಜಿ ಆಡುವಾಗ ಪರಿಚಯವಾದ ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಾರೆ. ಇವರ ಜತೆ ಪ್ರೀತಿಯ ನಾಟಕವಾಡಿದ ಮುಸ್ಲಿಂ ಯುವಕನು ಆಕೆಯನ್ನು ಮದುವೆಯಾಗಿದ್ದಾನೆ. ಅಲ್ಲದೆ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ಇದಾದ ಬಳಿಕ ಮುಸ್ಲಿಂ ಯುವಕನ ಕಿರುಕುಳ ತಾಳದ ಯುವತಿಯು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

VISTARANEWS.COM


on

PUBG Love
Koo

ಲಖನೌ: ಪಬ್ಜಿ ಆನ್‌ಲೈನ್‌ ಗೇಮ್‌ (PUBG Game) ಗೀಳಿಗೆ ಸಿಲುಕಿ ಪ್ರಾಣ ಕಳೆದುಕೊಂಡವರಿದ್ದಾರೆ. ದಿನವಿಡೀ ಪಬ್ಜಿ ಗೇಮ್‌ ಆಡಿ ಪರೀಕ್ಷೆಯಲ್ಲಿ ಫೇಲ್‌ ಆದವರಿದ್ದಾರೆ. ಗೆಳೆಯರ ಜತೆ ಜಗಳ ಆಡಿದವರಿದ್ದಾರೆ. ಆದರೆ, ಮಹಾರಾಷ್ಟ್ರದ ಯುವತಿಯೊಬ್ಬರ ಬಾಳನ್ನೇ ಪಬ್ಜಿ ಆನ್‌ಲೈನ್‌ ಗೇಮ್‌ ನರಕ ಮಾಡಿದೆ. ಹೌದು, ಪಬ್ಜಿ ಆಡುವಾಗ ಪರಿಚಯವಾದ ಮುಸ್ಲಿಂ ಯುವಕನನ್ನು (PUBG Love) ಮದುವೆಯಾದ ಮಹಾರಾಷ್ಟ್ರದ (Maharashtra) ಯುವತಿಯು ಈಗ ಆತನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಮಹಾರಾಷ್ಟ್ರದ ಮುಂಬೈನವರಾದ ಹರ್ಷದಾ ಹಾಗೂ ಉತ್ತರ ಪ್ರದೇಶದ ಮೊಹಮ್ಮದ್‌ ಫುಜೈಲ್‌ ಅವರು ಆನ್‌ಲೈನ್‌ನಲ್ಲಿ ಪಬ್ಜಿ ಆಡುವಾಗ ಪರಿಚಯ ಮಾಡಿಕೊಂಡಿದ್ದಾರೆ. ಇಬ್ಬರ ನಡುವಿನ ಪರಿಚಯವು ಪ್ರೇಮಕ್ಕೆ ತಿರುಗಿದೆ. ಮನೆಯವರ ವಿರೋಧದ ಮಧ್ಯೆಯೂ ಹರ್ಷದಾ ಅವರು ಮೊಹಮ್ಮದ್‌ ಫುಜೈಲ್‌ನನ್ನು ಮದುವೆಯಾಗಿದ್ದಾರೆ. ಅಷ್ಟೇ ಅಲ್ಲ, ಮದುವೆಗೂ ಮುನ್ನ ಹರ್ಷದಾ ಅವರು ಇಸ್ಲಾಂಗೆ ಮತಾಂತರಗೊಂಡಿದ್ದು, ಫಾತಿಮಾ ಎಂಬುದಾಗಿ ಹೆಸರು ಬದಲಾಯಿಸಿಕೊಂಡಿದ್ದಾರೆ.

Love jihad

ಬಳಿಕ ನಡೆದಿದ್ದೇ ದುರಂತ

ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯ ಗಲ್‌ಶಾಹಿದ್‌ ಥಾಣಾ ಪ್ರದೇಶದಲ್ಲಿ ಮೊಹಮ್ಮದ್‌ ಫುಜೈಲ್‌ ಹಾಗೂ ಫಾತಿಮಾ ವಾಸವಿದ್ದರು. ಆದರೆ, ಕೆಲ ತಿಂಗಳಿಂದ ಮೊಹಮ್ಮದ್‌ ಫುಜೈಲ್‌ ಫಾತಿಮಾಗೆ ಕಿರುಕುಳ ನೀಡಿದ್ದಾನೆ. ಆಕೆಯ ಮೇಲೆ ನಿರಂತರವಾಗಿ ಹಲ್ಲೆ ನಡೆಸಿದ್ದಾನೆ. ಕೆಲ ದಿನಗಳ ಹಿಂದೆ ಫಾತಿಮಾ ಅವರ ತಾಯಿ ಮಾಧುರಿ ಮಿತ್ರ ಅವರಿಗೆ ಕರೆ ಮಾಡಿದ ಮೊಹಮ್ಮದ್‌ ಫುಜೈಲ್‌, “ನಿಮ್ಮ ಪುತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅವರ ಸ್ಥಿತಿ ಗಂಭೀರವಾಗಿದೆ. ಕೂಡಲೇ ಬನ್ನಿ” ಎಂಬುದಾಗಿ ಹೇಳಿದ್ದಾನೆ. ಮಾಧುರಿ ಮಿತ್ರ ಅವರು ಕೂಡಲೇ ಮೊರಾದಾಬಾದ್‌ಗೆ ತೆರಳಿದಾಗ ಮಗಳ ಸ್ಥಿತಿ ಗಂಭೀರವಾಗಿರುವುದನ್ನು ಕಂಡಿದ್ದಾರೆ.

ದುರುಳನ ವಿರುದ್ಧ ದೂರು

ಮೊಹಮ್ಮದ್‌ ಫುಜೈಲ್‌ ವಿರುದ್ಧ ಮಾಧುರಿ ಮಿತ್ರ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ನನ್ನ ಮಗಳಿಗೆ ಇದಕ್ಕೂ ಮೊದಲು ಮದುವೆಯಾಗಿತ್ತು. ಆದರೆ, ದಾಂಪತ್ಯ ಸುಖಕರವಾಗಿರದೆ ಆಕೆ ವಿಚ್ಛೇದನ ಪಡೆದಳು. ಇದಾದ ಬಳಿಕ ಮೊಹಮ್ಮದ್‌ ಫುಜೈಲ್‌ ಆಕೆಗೆ ಪರಿಚಯವಾದ. ಎಷ್ಟು ಬೇಡವೆಂದರೂ ಕೇಳದೆ ಆತನನ್ನು ಮದುವೆಯಾದಳು. ಈಗ ನೋಡಿದರೆ ಆಕೆ ಪತಿಯಿಂದ ಕಿರುಕುಳ ಅನುಭವಿಸಿದ್ದಾಳೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮೊಹಮ್ಮದ್‌ ಫುಜೈಲ್‌ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Murder Case : ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಮುಸ್ಲಿಂ ಯುವಕನ ಕೊಂದ ಅರ್ಚಕ

Continue Reading

ದೇಶ

Sunetra Pawar: 25 ಸಾವಿರ ಕೋಟಿ ರೂ. ಹಗರಣ; ಅಜಿತ್‌ ಪವಾರ್‌ ಪತ್ನಿ ಸುನೇತ್ರಾಗೆ ಕ್ಲೀನ್‌ಚಿಟ್!

Sunetra Pawar: ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ನಲ್ಲಿ ಸುಮಾರು 25 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಡಿಸಿಎಂ ಅಜಿತ್‌ ಪವಾರ್‌ ಅವರ ಪತ್ನಿ ಸುನೇತ್ರಾ ಪವಾರ್‌ ಅವರಿಗೆ ಕ್ಲೀನ್‌ಚಿಟ್‌ ಸಿಕ್ಕಿದೆ. ಇದು ಸಹಜವಾಗಿಯೇ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

Sunetra Pawar
Koo

ಮುಂಬೈ: ಬಿಜೆಪಿ ಬಳಿ ವಿಶೇಷ ವಾಷಿಂಗ್‌ ಮಷೀನ್‌ ಇದೆ, ಭ್ರಷ್ಟಾಚಾರದ ಕೇಸ್‌ ಇರುವ ಯಾವುದೇ ಪಕ್ಷದ ನಾಯಕರು ಬಿಜೆಪಿ ಸೇರಿದರೆ, ಅವರು ಎಲ್ಲ ಪ್ರಕರಣಗಳಿಂದಲೂ ಮುಕ್ತರಾಗುತ್ತಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಇವೆ. ಇದರ ಮಧ್ಯೆಯೇ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ (Ajit Pawar) ಅವರ ಪತ್ನಿ ಸುನೇತ್ರಾ ಪವಾರ್‌ (Sunetra Pawar) ಅವರಿಗೆ ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ನಲ್ಲಿ (MSCB) 25 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ಸಿಕ್ಕಿದೆ.

ಹೌದು, 25 ಸಾವಿರ ಕೋಟಿ ರೂ. ಮೊತ್ತದ ಹಗರಣದ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕವು (EOW) ಸುನೇತ್ರಾ ಪವಾರ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಿದೆ. “ಎಂಎಸ್‌ಸಿಬಿ ಬ್ಯಾಂಕ್‌ನ ಸಾಲ ಪ್ರಕರಣದಲ್ಲಿ ಸುನೇತ್ರಾ ಪವಾರ್‌ ಸೇರಿ ಹಲವರ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ತನಿಖೆ ನಡೆಸಲಾಗಿದೆ. ಆದರೆ, ಯಾವುದೇ ರೀತಿಯ ಅಪರಾಧ, ಹಗರಣ ನಡೆದಿಲ್ಲ. ಇದರಿಂದ ಬ್ಯಾಂಕ್‌ಗೂ ಯಾವುದೇ ರೀತಿಯಲ್ಲಿ ನಷ್ಟವಾಗಿಲ್ಲ” ಎಂಬುದಾಗಿ ಕಳೆದ ಜನವರಿಯಲ್ಲಿಯೇ ಇಒಡಬ್ಲ್ಯೂ ತಯಾರಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಜಿತ್‌ ಪವಾರ್‌, ಸುನೇತ್ರಾ ಪವಾರ್‌ ಸೇರಿ ಹಲವರ ಕಾರ್ಖಾನೆಗಳಿಗೆ ಸಾಲ ನೀಡಿದ್ದು, ಇದರಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಉದ್ಧವ್‌ ಬಣದ ಶಿವಸೇನೆ ಟೀಕೆ

ಸುನೇತ್ರಾ ಪವಾರ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಿರುವ ಕುರಿತು ಉದ್ಧವ್‌ ಠಾಕ್ರೆ ಬಣದ ಶಿವಸೇನೆಯು ಟೀಕೆ ಮಾಡಿದೆ. “ಪವಾರ್‌ ಅವರದ್ದು ಭ್ರಷ್ಟಾಚಾರದ ಕುಟುಂಬ ಎಂದು ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದರು. ಆದರೆ ಈಗ ಸುನೇತ್ರಾ ಪವಾರ್‌ ಅವರಿಗೆ ಕ್ಲೀನ್‌ ಚಿಟ್ ನೀಡಲಾಗಿದೆ. ಆರೋಪಿಗಳಾಗಿದ್ದವರು ಬಿಜೆಪಿ ಸೇರಿದರೆ, ಅವರಿಗೆ ಕ್ಲೀನ್‌ಚಿಟ್‌ ಸಿಗುತ್ತಿದೆ. ಸುನೇತ್ರಾ ಪವಾರ್‌ ಅವರು ಯಾವುದೇ ಅಪರಾಧ ಮಾಡಿಲ್ಲ ಎಂಬುದಾಗಿ ವರದಿ ತಯಾರಿಸಿ, ಅವರನ್ನು ದೋಷಮುಕ್ತರನ್ನಾಗಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ” ಎಂದು ಶಿವಸೇನೆ ಟೀಕಿಸಿದೆ.

ಬಾರಾಮತಿಯಲ್ಲಿ ಪವಾರ್‌ ಬಳಗದ ಕಾದಾಟ

ಮಹಾರಾಷ್ಟ್ರದ ಬಾರಾಮತಿ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಪವಾರ್‌ ಕುಟುಂಬಸ್ಥರ ಮಧ್ಯೆಯೇ ತೀವ್ರ ಪೈಪೋಟಿ ಎದುರಾಗಿದೆ. ಎನ್‌ಸಿಪಿಯಿಂದ (ಶರದ್‌ ಪವಾರ್‌ ಬಣ) ಹಾಲಿ ಸಂಸದೆ, ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಸ್ಪರ್ಧಿಸುತ್ತಿದ್ದರೆ, ಇವರ ವಿರುದ್ಧ ಅಜಿತ್‌ ಪವಾರ್‌ ಬಣದ ಎನ್‌ಸಿಪಿಯಿಂದ ಸುನೇತ್ರಾ ಪವಾರ್‌ ಅವರು ಸ್ಪರ್ಧಿಸುತ್ತಿದ್ದಾರೆ. ಎನ್‌ಸಿಪಿ ಇಬ್ಭಾಗವಾದ ಬಳಿಕ ಎರಡೂ ಬಣಗಳ ನಡುವಿನ ಮೊದಲ ಕಾದಾಟ ಇದಾದ ಕಾರಣ ಚುನಾವಣೆ ಫಲಿತಾಂಶವು ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Maoist Links Case: ಮಾವೋವಾದಿಗಳೊಂದಿಗೆ ನಂಟು ಪ್ರಕರಣ; ಸಾಯಿಬಾಬಾ, ಇತರ ಐವರನ್ನು ದೋಷಮುಕ್ತಗೊಳಿಸಿದ ಕೋರ್ಟ್‌

Continue Reading
Advertisement
Modi
ಪ್ರಮುಖ ಸುದ್ದಿ12 mins ago

ವಿಸ್ತಾರ ಸಂಪಾದಕೀಯ: ರೈಲ್ವೇ ಇಲಾಖೆಯ ಸುಧಾರಣೆ ಕ್ರಮಗಳು ಪ್ರಶಂಸಾರ್ಹ

Baking Soda
ಆರೋಗ್ಯ13 mins ago

Baking Soda: ಅಡುಗೆ ಸೋಡಾ ನಿಜಕ್ಕೂ ಆರೋಗ್ಯಕ್ಕೆ ಕೆಟ್ಟದ್ದಾ?

World Malaria Day
ಆರೋಗ್ಯ1 hour ago

World Malaria Day: ಭಾರತದಲ್ಲಿ ಮಲೇರಿಯಾಗೆ ಪ್ರತಿವರ್ಷ 20 ಸಾವಿರ ಬಲಿ; ಸೊಳ್ಳೆಗಳು ಭಾರಿ ಡೇಂಜರ್‌!

dina bhavishya read your daily horoscope predictions for April 25 2024
ಭವಿಷ್ಯ5 hours ago

Dina Bhavishya : ಇಂದು ಈ ನಾಲ್ಕು ರಾಶಿಯವರಿಗೆ 4 ಲಕ್ಕಿ ನಂಬರ್!

PM
ದೇಶ6 hours ago

ಪ್ರಧಾನಿ ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

Union Minister Pralhad Joshi Statement in Unakal
ಹುಬ್ಬಳ್ಳಿ7 hours ago

Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ

DC vs GT
ಕ್ರೀಡೆ7 hours ago

DC vS GT: ಗುಜರಾತ್​ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು ; ಪ್ಲೇ ಆಫ್​ ರೇಸ್ ಜೀವಂತ

PUBG Love
ದೇಶ7 hours ago

PUBG Love: ಪಬ್ಜಿ ಆಡುವಾಗ ಸಿಕ್ಕ ಮುಸ್ಲಿಂ ಯುವಕನ ಜತೆ ಹಿಂದು ಯುವತಿ ಮದುವೆ; ಈಗ ಬಾಳೇ ನರಕ!

Nada Gheethe
ಪ್ರಮುಖ ಸುದ್ದಿ7 hours ago

‌Nada Geethe: ನಾಡಗೀತೆ ವಿವಾದ; ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ತಿರಸ್ಕಾರ ಮಾಡಿದ ಹೈಕೋರ್ಟ್

Sachin Tendulkar Birthday
ಕ್ರೀಡೆ8 hours ago

Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌