ಮುಂಬಯಿ: ಮಹಾರಾಷ್ಟ್ರದ ಅಕೋಲಾದಲ್ಲಿ ಭಕ್ತರು ನಿಂತಿದ್ದ ತಗಡಿನ ಶೆಡ್‌ನ ಮೇಲೆ ಹಳೆಯ ಮರವೊಂದು ಬಿದ್ದು ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಶೆಡ್‌ನ ಕೆಳಗೆ ಸುಮಾರು 40 ಜನರು ನಿಂತಿದ್ದರು ಎಂದು ಅಕೋಲಾ ಜಿಲ್ಲಾಧಿಕಾರಿ ನಿಮಾ ಅರೋರಾ ತಿಳಿಸಿದ್ದಾರೆ.
ಶೆಡ್ ಅಡಿಯಲ್ಲಿ ಸುಮಾರು 40 ಜನರು ಇದ್ದರು. ಅದರಲ್ಲಿ ಗಾಯಗೊಂಡ 36 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ANI ವರದಿಯು ಮೊದಲು ಉಲ್ಲೇಖಿಸಿತು. ನಂತರ ಸಾವಿನ ಸಂಖ್ಯೆ ಏಳಕ್ಕೆ ಏರಿದೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಟ್ವಿಟರ್‌ನಲ್ಲಿ ಈ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು. ಅಕೋಲಾ ಜಿಲ್ಲೆಯ ಪರಾಸ್‌ನಲ್ಲಿ ಧಾರ್ಮಿಕ ಸಮಾರಂಭಕ್ಕಾಗಿ ಭಕ್ತರು ಸೇರಿದ್ದರು ಎಂದು ಅವರು ಹೇಳಿದರು.
ಅಕೋಲಾ ಜಿಲ್ಲೆಯ ಪರಾಸ್‌ನಲ್ಲಿ ಧಾರ್ಮಿಕ ಸಮಾರಂಭಕ್ಕಾಗಿ ಭಕ್ತರು ಜಮಾಯಿಸಿದ್ದರು. ಮಳೆ ಬಂದಾಗ ಅವರು ಟಿನ್ ಶೆಡ್ ಕೆಳಗೆ ಸೇರಿದ್ದರು. ಮಳೆಯಿಂದಾಗಿ ಮರದ ಬುಡ ಸಡಲಿ ಮರ ಬಿದ್ದಿದೆ.
ಇದನ್ನೂ ಓದಿ: Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್ ಸಿಲಿಂಡರ್ ಲೀಕ್ ಆಗಿ 7 ಕಾರ್ಮಿಕರ ದಾರುಣ ಸಾವು