ನವದೆಹಲಿ: ಚಂದಾದಾರಿಕೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಸೆಲಿಬ್ರೆಟಿಗಳ ಹೆಸರಿನ ಮುಂದಿದ್ದ ಬ್ಲೂಟಿಕ್ (twitter blue tick) ಗುರುತನ್ನು ಟ್ವಿಟರ್ ವಾಪಸ್ ಪಡೆದುಕೊಂಡಿತ್ತು. ಟ್ವಿಟರ್‌ನ ಈ ನಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಹಲವು ಗಣ್ಯರ ಹೆಸರಿನ ಮುಂದೆ ಬ್ಲೂಟಿಕ್ ಮತ್ತೆ ಕಾಣಿಸಿಕೊಂಡಿದೆ. ಬಾಲಿವುಡ್‌ನ ಅಮಿತಾಭ್, ಪ್ರಿಯಾಂಕಾ ಚೋಪ್ರಾ, ಪ್ರಕಾಶ್ ರಾಜ್, ರಾಜಕಾರಣಿ ಒಮರ್ ಅಬ್ದುಲ್ಲಾ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವರಿಗೆ ಖಾತೆಗಳಲ್ಲಿ ಈ ಬ್ಲೂಟಿಕ್ ಮತ್ತೆ ಕಾಣಿಸಿಕೊಂಡಿದೆ. ಇದಕ್ಕೆ ಅವರೆಲ್ಲ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಚಂದಾದಾರಿಕೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಬಚ್ಚನ್, ಶಾರುಕ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ರಜನಿಕಾಂತ್ ಸೇರಿದಂತೆ ರಾಜಕಾರಣಿಗಳು, ಪತ್ರಕರ್ತರು, ಗಣ್ಯರು ಬ್ಲೂಟಿಕ್ ಮಾರ್ಕ್ ಕಳೆದುಕೊಂಡಿದ್ದರು. ಆದರೆ, ವಾರಂತ್ಯದ ಹೊತ್ತಿಗೆ ಬ್ಲೂಟಿಕ್ ಕಳೆದುಕೊಂಡು ಬಹುತೇಕ ಸೆಲಿಬ್ರಿಟಿಗಳಿಗೆ ಖಾತೆಗೆ ಮತ್ತೆ ಮರಳಿಸಲಾಗಿದೆ.
ನಟ ಪ್ರಕಾಶ್ ರಾಜ್ ಟ್ವೀಟ್
ಬ್ಲೂಟಿಕ್ ಮರಳಿದ ಖುಷಿಯಲ್ಲಿ ಟ್ವೀಟ್ ಮಾಡಿರುವ ಅಮಿತಾಭ್ ಬಚ್ಚನ್ ಅವರು, ಹೇ ಮಸ್ಕ್ ಬ್ರೋ! ನನ್ನ ಹೆಸರಿನ ಮುಂದೆ ಬ್ಲೂಟಿಕ್ ಮತ್ತೆ ನೀಡಿದ್ದಕ್ಕಾಗಿ ತುಂಬ ತುಂಬ ಧನ್ಯವಾದಗಳು. ನನೀಗ ಹಾಡಬೇಕು ಅನಿಸುತ್ತಿದೆ. ನೀನು ಕೇಳುತ್ತಿಯಾ? ಹಾಗಿದ್ದರೆ ಕೇಳು… ತು ಚೀಜ್ ಮಸ್ಕ್ ಮಸ್ಕ್, ತು ಚೀಜ್ ಬಡಿ ಹೈ ಮಸ್ಕ್ ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಟ್ವೀಟ್ ಮಾಡಿ, ವಾವ್… ಬ್ಲೂಟಿಕ್ ಹೇಗೆ ವಾಪಸ್ ಬಂತು ಎಂಬುದು ಗೊತ್ತಿಲ್ಲ. ಈಗ ಮತ್ತೆ ನಾನು ಪ್ರಿಯಾಂಕಾ ಎಂದು ಹೇಳಿದ್ದಾರೆ.
ಪ್ರಕಾಶ್ ರಾಜ್ ಅವರೂ ಅಚ್ಚರಿ ವ್ಯಕ್ತಪಡಿಸಿ, ಹೇ ಬ್ಲೂಟಿಕ್ ವೆಲ್‌ಕಂ ಬ್ಯಾಕ್. ನಿನ್ನ ಮಿಸ್ ಮಾಡ್ಕೊಂಡಿದ್ದೆ. ನೀನು ನನ್ನ ಮಿಸ್ ಮಾಡ್ಕೊಂಡಿದ್ದಾ? ಜಸ್ಟ್ ಆಸ್ಕಿಂಗ್. ಥ್ಯಾಂಕ್ಯೂ ಟ್ವಿಟರ್ ಎಂದು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಟ್ವೀಟ್
ಇದನ್ನೂ ಓದಿ: Amitabh Bachchan: ಟ್ವಿಟರ್ ಬ್ಲೂ ಟಿಕ್ ಮಾಯವಾದ ಬಳಿಕ ತಮಾಷೆಯಾಗಿ ಟ್ವೀಟ್ ಹಂಚಿಕೊಂಡ ಅಮಿತಾಭ್ ಬಚ್ಚನ್
ಮಾನವ ಹೋರಾಟಗಾರ್ತಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಲಾಲಾ ಅವರೂ, ಬ್ಲೂಟಿಕ್ ಮರಳಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜಕಾರಣಿ ಒಮರ್ ಅಬ್ದುಲ್ಲಾ ಅವರೂ, ನಾನು ಚಂದಾದಾರಿಕೆ ನೀಡಿಲ್ಲ. ಆದರೂ, ಬ್ಲೂಟಿಕ್ ಮಾರ್ಕ್ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ರೀತಿ, ಜಾಗತಿಕ ಮಟ್ಟದ ಸೆಲೆಬ್ರಿಟಿಗಳ ಹೆಸರಿನ ಮುಂದೆಯೂ ಬ್ಲೂಟಿಕ್ ಕಾಣಿಸಿಕೊಂಡಿದೆ.