Site icon Vistara News

Twitter Down: ಭಾರತ ಸೇರಿ ಜಗತ್ತಿನಾದ್ಯಂತ ಟ್ವಿಟರ್‌‌ ಸರ್ವರ್ ಡೌನ್‌, ನಿಮ್ಮ ಅಕೌಂಟ್ ಚೆಕ್‌ ಮಾಡಿಕೊಳ್ಳಿ

Twitter Server Down Across World

Twitter faces global outage, thousands of users get ‘cannot retrieve tweets’ error

ನವದೆಹಲಿ: ‌ಜಗತ್ತಿನ ಪ್ರಮುಖ ಹಾಗೂ ಪ್ರಬಲ ಜಾಲತಾಣವಾದ ಟ್ವಿಟರ್‌ ಸರ್ವರ್‌ ಡೌನ್‌ (Twitter Down) ಆಗಿದೆ. ಭಾರತ ಸೇರಿ ಜಗತ್ತಿನಾದ್ಯಂತ ಟ್ವಿಟರ್‌ ಬಳಕೆದಾರರಿಗೆ ಇದರಿಂದ ಅಡಚಣೆಯಾಗಿದೆ. ಸಾವಿರಾರು ಜನ ಈ ಕುರಿತು ಟ್ವಿಟರ್‌ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ದೂರಿದ್ದಾರೆ.

ಮೊಬೈಲ್‌ ಆ್ಯಪ್‌ನಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸುವವರಿಗೆ “Cannot Retrieve Tweets” ಎಂಬ ಎರರ್‌ ಬರುತ್ತಿದೆ. ಇನ್ನೂ ಕೆಲವರಿಗೆ “Rate Limit Exceeded Error Message” ಎಂದು ತೋರಿಸುತ್ತಿದೆ. ಇದರಿಂದಾಗಿ ಹೊಸ ಟ್ವೀಟ್‌ಗಳನ್ನು ಮಾಡಲು ಆಗುತ್ತಿಲ್ಲ. ಹಾಗೆಯೇ, ಬೇರೆಯವರ ಟ್ವೀಟ್‌ಗಳನ್ನು ಕೂಡ ವೀಕ್ಷಿಸಲು ಆಗುತ್ತಿಲ್ಲ.

ಸಮಸ್ಯೆ ಹೇಳಿಕೊಂಡ ಬಳಕೆದಾರರು

“ಸುಮಾರು ನಾಲ್ಕು ಸಾವಿರ ಜನ ಟ್ವಿಟರ್‌ ಸರ್ವರ್‌ ಡೌನ್‌ ಆಗಿರುವ, ತಮಗೆ ಸಾಮಾಜಿಕ ಜಾಲತಾಣವನ್ನು ಬಳಸಲು ಆಗದಿರುವ ಕುರಿತು ದೂರಿದ್ದಾರೆ. ಜಾಗತಿಕವಾಗಿ ಟ್ವಿಟರ್‌ ಡೌನ್‌ ಆಗಿ ಇಷ್ಟೆಲ್ಲ ತೊಂದರೆಯಾಗಿದೆ” ಎಂದು ವೆಬ್‌ಸೈಟ್‌ಗಳ ಸರ್ವರ್‌ ಡೌನ್‌ ಸಮಸ್ಯೆಗಳ ಮೇಲೆ ನಿಗಾ ಇಡುವ ಡೌನ್‌ ಡಿಟೆಕ್ಟರ್‌ ವರದಿ ಮಾಡಿದೆ.

ಸರ್ವರ್‌ ಡೌನ್‌ ಕುರಿತು ಟ್ರೋಲ್

‌ಇದನ್ನೂ ಓದಿ: Free Electricity: ಗೃಹ ಜ್ಯೋತಿ ನೋಂದಣಿಗೆ 3ನೇ ದಿನವೂ ಕಾಡಿದ ಸರ್ವರ್‌ ಪ್ರಾಬ್ಲಮ್

ಟ್ವಿಟರ್‌ ಸರ್ವರ್‌ ಡೌನ್‌ ಆಗುತ್ತಲೇ ಭಾರತದಲ್ಲಿ ಟ್ವಿಟರ್‌ ಡೌನ್‌ ಎಂಬ ಹ್ಯಾಷ್‌ಟ್ಯಾಗ್‌ ನಂಬರ್‌ ಒನ್‌ ಟ್ರೆಂಡಿಂಗ್‌ನಲ್ಲಿದೆ. ಇನ್ನು ಟ್ವಿಟರ್‌ ಸರ್ವರ್‌ ಹಾಗೂ ಅದರ ಮುಖ್ಯಸ್ಥ ಎಲಾನ್‌ ಮಸ್ಕ್‌ ಅವರ ಕುರಿತು ನೂರಾರು ಮೀಮ್‌ಗಳು ಹರಿದಾಡುತ್ತಿವೆ. ಆದಾಗ್ಯೂ, ಟ್ವಿಟರ್‌ ಸರ್ವರ್‌ ಡೌನ್‌ ಆಗಿರುವ, ಸಮಸ್ಯೆಯನ್ನು ಬಗೆಹರಿಸುವ ಕುರಿತು ಟ್ವಿಟರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Exit mobile version