ನವದೆಹಲಿ: ಜಗತ್ತಿನ ಅತ್ಯಂತ ಪ್ರಬಲ ಸಾಮಾಜಿಕ ಜಾಲತಾಣವಾದ ಟ್ವಿಟರ್ ಸರ್ವರ್ (Twitter Down) ಬುಧವಾರ ಮತ್ತೆ ಡೌನ್ ಆಗಿದೆ. ಟ್ವಿಟರ್‌ನಲ್ಲಿ ಹಲವು ಬಳಕೆದಾರರು ತಮಗೆ ಉಂಟಾದ ಸಮಸ್ಯೆ ಬಗ್ಗೆ ದೂರು ನೀಡುತ್ತಿದ್ದಾರೆ. ಇನ್ನೂ ಕೆಲವರು, ಎಲಾನ್ ಮಸ್ಕ್ ಅವರು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಕಾರಣಕ್ಕಾಗಿಯೇ ಟ್ವಿಟರ್‌ಗೆ ಪದೇಪದೆ ಸಮಸ್ಯೆಯಾಗುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಬಳಕೆದಾರರು ಟ್ವಿಟರ್ ಓಪನ್ ಮಾಡುತ್ತಲೇ, “ವೆಲ್‌ಕಮ್ ಟು ಟ್ವಿಟರ್” ಎಂದಷ್ಟೇ ತೋರಿಸುತ್ತಿದೆ. ಯಾವುದೇ ಫೀಡ್‌ಗಳು ಬಳಕೆದಾರರಿಗೆ ಕಾಣಿಸುತ್ತಿಲ್ಲ. ಭಾರತದಲ್ಲಿಯೇ 600ಕ್ಕೂ ಅಧಿಕ ಬಳಕೆದಾರರು ಸಮಸ್ಯೆ ಬಗ್ಗೆ ದೂರು ನೀಡಿದ್ದಾರೆ ಎಂದು ಡೌನ್‌ಡಿಟೆಕ್ಟರ್ ವೆಬ್‌ಸೈಟ್ ಮಾಹಿತಿ ನೀಡಿದೆ.
ಸರ್ವರ್ ಡೌನ್ ಆಗಿರುವ ಹಾಗೂ ಸಮಸ್ಯೆ ಬಗೆಹರಿಸುವ ಕುರಿತು ಇದುವರೆಗೆ ಟ್ವಿಟರ್‌ನಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಎರಡು ದಿನದ ಹಿಂದಷ್ಟೇ ಜಿಮೇಲ್ ಹಾಗೂ ಚಾಟ್ ಜಿಪಿಟಿಯ ಸರ್ವರ್ ಡೌನ್ ಆಗಿದ್ದವು. ಈಗ ಟ್ವಿಟರ್ ಸರ್ವರ್‌ನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ.
ಇದನ್ನೂ ಓದಿ: Gmail Down: ಭಾರತ ಸೇರಿ ವಿಶ್ವಾದ್ಯಂತ ಜಿಮೇಲ್ ಡೌನ್, ವಾರದಲ್ಲಿ 2ನೇ ಬಾರಿ ಬಳಕೆದಾರರಿಗೆ ತೊಂದರೆ